ರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನವನು ಹಿರೇಕೆರೂ ಪೊಲೀಸ್ ಠಾಣೆ ಹಿರೇಕೇರು ಶಹರದ ಸಿ ಇ ಎಸ್ ಕಾಲೇಜಿನ ಸರ್ವಜ್ಞ ಸಂಸ್ಕೃತಿಕ ಭವನದಲ್ಲಿ ಪ್ರತಿಜ್ಞಾವಿಧಿ

ರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ದಿನವನು ಹಿರೇಕೆರೂ ಪೊಲೀಸ್ ಠಾಣೆ ಹಿರೇಕೇರು ಶಹರದ ಸಿ ಇ ಎಸ್ ಕಾಲೇಜಿನ ಸರ್ವಜ್ಞ ಸಂಸ್ಕೃತಿಕ ಭವನದಲ್ಲಿ ಮಾದಕ ವಸ್ತುಗಳ ವಿರೋಧಿ ದಿನದ ಅಂಗವಾಗಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಯಿತು ಮಾದಕ ವಸ್ತುಗಳಿಂದ ದೂರ ಇರುವಂತೆ ಮಕ್ಕಳಿಂದ ಪ್ರತಿಜ್ಞಾವಿಧಿಯನ್ನ ಸ್ವೀಕರಿಸಲಾಯಿತು

ಮಾದಕ ವ್ಯಸನವನ್ನು ನಿವಾರಿಸುವುದು ಅಥವಾ ಬಿಡುವುದು ಒಂದು ಸಂಕೀರ್ಣ ಮತ್ತು ವೈಯಕ್ತಿಕಗೊಳಿಸಿದ ಪ್ರಕ್ರಿಯೆಯಾಗಿದ್ದು, ಇದಕ್ಕೆ ಸಾಮಾನ್ಯವಾಗಿ ಚಿಕಿತ್ಸೆ, ಬೆಂಬಲ ಮತ್ತು ದೀರ್ಘಕಾಲೀನ ಚೇತರಿಕೆಗೆ ಬದ್ಧತೆಯ ಅಗತ್ಯವಿರುತ್ತದೆ. ಈ ದಿನವು ಮಾದಕ ವ್ಯಸನದ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಬಹುದು ಮತ್ತು ವಿವಿಧ ಅಭಿಯಾನಗಳನ್ನು ನಡೆಸುವ ಮೂಲಕ ಮಾದಕ ವ್ಯಸನಿಗಳು ಸಹಾಯ ಪಡೆಯಲು ವಾತಾವರಣವನ್ನು ಸೃಷ್ಟಿಸಬಹುದು

ಮಾದಕ ವಸ್ತುಗಳ ಸೇವನೆಯು ಮನುಷ್ಯನ ಆರೋಗ್ಯಕ್ಕೆ ಹಾನಿಕಾರವಾಗಿದೆ. ಹೀಗಿದ್ದರೂ ಕೂಡಾ ಹೆಚ್ಚಿನ ಯುವ ಜನತೆ ಮಾದಕ ವಸ್ತುಗಳಿಗೆ ದಾಸರಾಗಿದ್ದಾರೆ. ಈ ನಿಟ್ಟಿನಲ್ಲಿ ಮಾದಕ ವಸ್ತುಗಳ ಕಳ್ಳ ಸಾಗಾಟವನ್ನು ನಿಷೇಧಿಸಬೇಕು, ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಪ್ರತಿವರ್ಷ ಜೂನ್‌ 26 ರಂದು ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನವನ್ನು ಆಚರಿಸಲಾಗುತ್ತದೆ.

ವರದಿ : ಪವನ್ ಕುಮಾರ್ ಆರ್

error: Content is protected !!