ಸತೀಶ ಜಾರಕಿಹೊಳಿ ಮತ್ತು ರಮೇಶ್ ಕತ್ತಿ 103ನೇ ಜೈನ ಸಭೆಯಲ್ಲಿ ಭಾಗಿ

ರಾಯಬಾಗ : ಕರ್ನಾಟಕ ಸರ್ಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಆಯೋಜಿಸಲಾದ ದಕ್ಷಿಣ ಭಾರತದ 103ನೇ ಜೈನ ಸಭೆ ಮತ್ತು ತ್ರೈವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಿ, ಜೈನ ಮುನಿಗಳಿಂದ ಆಶೀರ್ವಾದ ಪಡೆದು, ಗೌರವ ಸನ್ಮಾನವನ್ನು ಸ್ವೀಕರಿಸಿದರು

ಭಾರತದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ ಜೈನ ಸಮುದಾಯದ ಸಾಂಸ್ಕೃತಿಕ, ಆರ್ಥಿಕ ಹಾಗೂ ಧಾರ್ಮಿಕ ಕೊಡುಗೆಗಳನ್ನು ಪ್ರಶಂಸಿಸುತ್ತಾ, ಸಮುದಾಯದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂಬುದಾಗಿ ತಿಳಿಸಿದರು

ಜೈನ ಮುನಿಗಳು ತಮ್ಮ ಬೇಡಿಕೆಗಳನ್ನು ಅವರಿಗೆ ನೀಡಿ ಇದನ್ನು ಕಾರ್ಯರೂಪಕ್ಕೆ ತರಬೇಕೆಂದು ಅವರಲ್ಲಿ ಕೇಳಿಕೊಂಡರು

ಈ ಸಂದರ್ಭದಲ್ಲಿ ಬೆಳಗಾವಿಯ ಜಿಲ್ಲಾ ಉಸ್ತುವಾರಿ ಸಚಿವರು ಮಾಜಿ ಲೋಕಸಭಾ ಸದಸ್ಯರಾದ ರಮೇಶ್ ಜಾರಕಿಹೊಳಿ ದುರ್ಯೋದನ ಐಹೋಳಿ ಜೈನ ಸಮುದಾಯದ ಮುಖಂಡರು ರಾಜಕೀಯ ಹಿರಿಯರು ಸಮುದಾಯದ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು.

ವರದಿ : ಸದಾನಂದ ಎಂ

error: Content is protected !!