ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೀದರ್ ವತಿಯಿಂದ ಬ್ರಹತ್ ಪ್ರತಿಭಟನೆ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಇತ್ತೀಚ್ಚಿಗೆ ತಿಂಗಳಿಂದ ಕಾಂಗ್ರೆಸ್ ಪಕ್ಷದ ರಾಜ್ಯ ಆಡಳಿತದ ಮೇಲೆ ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿ.ಜೆ.ಪಿ. ಯೊಂದಿಗೆ ಮೈತ್ರಿ ಮಾಡಿಕೊಂಡ ಜೆ.ಡಿ.ಎಸ್. ಪಕ್ಷಯು ಸೇರಿಕೊಂಡು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ಅಸ್ಥಿರತೆಗೊಳಿಸಬೇಕೆಂದು ರಾಜ್ಯಪಾಲರ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವಂತೆ ಕೇಂದ್ರ ಬಿ.ಜೆ.ಪಿ. ಸರಕಾರದಿಂದ ಒತ್ತಡ ಹಾಕಿಸಿ ರಾಜ್ಯಪಾಲರು ಕೇಂದ್ರ ಸರಕಾರದ ತನ್ನ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ.

ಈ ರೀತಿ ನಡೆದುಕೊಳ್ಳುತ್ತಿರುವುದರಿಂದ ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಅಪಾಯವಾಗುತ್ತದೆ, ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ಬರುತ್ತದೆ.

> ರಾಜ್ಯ ರಾಜ್ಯಪಾಲರು ಸಾಂವಿಧಾನಿಕ ಪ್ರತಿನಿಧಿಯಾಗಿ ಕೆಲಸ ಮಾಡುವ ಬದಲು ಕೇಂದ್ರ ಸರಕಾರದ ಕೈಗೊಂಬೆಯಂತೆ ನಡೆದುಕೊಂಡಿದ್ದಾರೆ.

> ಜೊತೆಗೆ ಸರಕಾರವನ್ನು ಅಸ್ಥಿರಗೊಳಿಸುವ ನಡೆಗೆ ಬೆಂಬಲ ನೀಡಿದ್ದಾರೆ.

> ಜೊತೆಗೆ ಭ್ರಷ್ಟಚಾರ ನಿಯಂತ್ರಣ ಕಾಯಿದೆ 17-A ಅಡಿ ಅನುಮತಿ ನೀಡುವ ವೇಳೆ ಪಾಲಿಸಬೇಕಾಗಿರುವ ನಿಯಮಗಳನ್ನು (SOP) ಉಲ್ಲಂಘಿಸಲಾಗಿದೆ.

 

> 2021 ನೇ ಸೆಪ್ಟೆಂಬರ್ 3 ರಂದು ಕೇಂದ್ರ ಸರಕಾರ ಈ ಬಗ್ಗೆ ಸ್ಪಷ್ಠ ಮಾರ್ಗಸೂಚಿ ಹೊರಡಿಸಲಾಗಿದೆ ಇದನ್ನು ಪರಿಗಣಿಸಿಲ್ಲ.

 

> ರಾಜ್ಯಪಾಲರು ದೇಶದ ರಾಷ್ಟ್ರಪತಿಗಳ ಪ್ರತಿನಿಧಿಯಾಗಿದ್ದು, ಸಂವಿಧಾನದ ಪ್ರತಿ ನಿಧಿಗಳಾಗಿ ಕೆಲಸ ಮಾಡಬೇಕು.

 

ಈ ಸಂದರ್ಭದಲ್ಲಿ

 

ರಾಜಕುಮಾರ ವಾಘಮಾರೆ ಜಿಲ್ಲಾ ಸಂಘಟನಾ ಸಂಚಾಲಕರು

 

ರಮೇಶ ಬೆಲ್ದಾರ ತಾಲ್ಲೂಕ ಸಂಚಾಲಕರು ಭಾಲ್ಕಿ

 

ಸತೀಶ ರತ್ನಾಕರ್ ತಾಲ್ಲೂಕ ಸಂಚಾಲಕರು ಹುಮನಾಬಾದ

 

ಬಸವರಾಜ ಭಾವಿದೊಡ್ಡಿ ದ.ಸಂ.ಸ. ಮುಖಂಡರು

 

ಶಿವಕುಮಾರ ಗುನ್ನಳ್ಳಿ ದ.ಸಂ.ಸ. ಮುಖಂಡರು

 

ರಮೇಶ ಉಮಾಪುರೆ ಜಿಲ್ಲಾ ಸಂಘಟನಾ ಸಂಚಾಲಕ

 

ವಾಮನ ಮೈಸಲಗೆ ತಾಲ್ಲೂಕ ಸಂಚಾಪಕರು ಬಸವಕಲ್ಯಾಣ

 

ಝರೇಪ್ಪಾ ವರ್ಮಾ ತಾಲ್ಲೂಕ ಸಂಚಾಲಕರು ಔರಾದ (ಬಿ)

 

l ರಾಹುಲ ಹಾಲಹಿಪ್ಪರ್ಗಾ ದ.ಸಂ.ಸ. ಮುಖಂಡರು

 

rಗೌತಮ ಮುತ್ತಂಗಿಕರ್ ದ.ಸಂ.ಸ. ಮುಖಂಡರು

 

ಎಂ.ಎಸ್. ಮನೋಹರ್ ಜಿಲ್ಲಾ ಖಜಾಂಚಿ

 

ಶಿವರಾಜ ತಡಪಳ್ಳಿ ಜಿಲ್ಲಾ ಸಂಚಾಲಕರು (ಕಲಾಮಂಡಳಿ)

ಭಾಗವಹಿಸಿದ್ದರು.

error: Content is protected !!