ಬಳ್ಳಾರಿ ಜೈಲಿಗೆ ಇಂದು ಮುಂಜಾನೆ ದರ್ಶನ್ ಜೈಲ್ ಅಧಿಕಾರಿಗಳಿಂದ ಸೂಕ್ತ ಭದ್ರತೆ

ಬಳ್ಳಾರಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಒಂದನೇ ಆರೋಪಿಯಾಗಿರುವ ಚಿತ್ರನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ಇಂದು ಮುಂಜಾನೆ 11 ಗಂಟೆ 30 ನಿಮಿಷ ಸಮಯದಲ್ಲಿ ವಿಶೇಷ ಭದ್ರತೆಯೊಂದಿಗೆ ಕರೆತರಲಾಯಿತು.

 

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಬಿಗಿಯಾದ ಪೊಲೀಸ್ ಭದ್ರತೆಯೊಂದಿಗೆ ದೇವನಹಳ್ಳಿ ಅನಂತಪುರ ಉರವಕೊಂಡ ಮೂಲಕ ಬಳ್ಳಾರಿಗೆ ಕರೆತರಲಾಯಿತು. ಬೆಂಗಳೂರಿನಿಂದ ತುಮಕೂರು ಶಿರಾ ಹಿರಿಯೂರು ಮಾರ್ಗವಾಗಿ ಬಳ್ಳಾರಿಗೆ ಬರಬಹುದಾಗಿತ್ತು ಆದರೆ ಕೊಲೆಯಾದ ರೇಣುಕಾ ಸ್ವಾಮಿಯ ಊರು ಚಿತ್ರದುರ್ಗ ಆದ್ದರಿಂದ ರಸ್ತೆಯಲ್ಲಿಯೇ ಪ್ರತಿಭಟನೆ ಯಾಗಬಹುದು ಎಂಬ ಮುಂದಾಲೋಚನೆಯಿಂದ ಮತ್ತು ರಾಜ್ಯದಲ್ಲಿನ ಅವರ ಅಭಿಮಾನಿಗಳು ದಾರಿ ಉದ್ದಕ್ಕೂ ತೊಂದರೆ ಕೊಡುವ ಅಪಾಯ ಇದ್ದಿದ್ದರಿಂದ ಬೆಂಗಳೂರು ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಮೂಲಕ ಅನಂತಪುರ ಮಾರ್ಗವಾಗಿ ಬಳ್ಳಾರಿಗೆ ಕರೆತರಲಾಯಿತು.

ಬಳ್ಳಾರಿ ಕೇಂದ್ರ ಕಾರಗೃಹದಲ್ಲಿ ದರ್ಶನ್ ಗಾಗಿ ಸಾಧಾರಣ ಕೊಠಡಿ ಒಂದನ್ನು ನೀಡಿ ಸಾಮಾನ್ಯ ಕೈದಿಗಳಂತೆ ಅವರನ್ನು ಬೆಳಕಿನಲ್ಲಿ ಇಡಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಕಾರ ಗೃಹದ ಅಧೀಕ್ಷಕರು ಜಿಲ್ಲಾ ಪೊಲೀಸ್ ಅಧಿಕ್ಷಕರು ಸೇರಿದಂತೆ ಹಲವಾರು ಜನ ಪೊಲೀಸರು ಜೈಲಿನ ಸುತ್ತಮುತ್ತಲು ಭದ್ರತೆಯನ್ನು ಒದಗಿಸಿದ್ದರು.

ರೌಡಿ ನಾಗನೊಂದಿಗೆ ಟಿ ಕಪ್ ಮತ್ತು ಒಂದು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಹರಟುತ್ತಿರುವ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಪರಪ್ಪನ ಅಗ್ರಹಾರದ ಜೈಲಿನ ಅಧಿಕಾರಿಗಳಿಗೆ ಮುಜುಗರ ಉಂಟುಮಾಡಿದ್ದವು.

ಅಷ್ಟೇ ಅಲ್ಲದೆ ಪರಪ್ಪನ ಅಗ್ರಹಾರದಲ್ಲಿ ಇರುವ ವಿಚಾರಣಾದಿನ ಕೈದಿಗಳು ವಿವಿಐಪಿ ಗಳಾಗಿದ್ದಲ್ಲಿ ಯಾವುದೇ ಕೈದಿಗೆ ರಾಜ ಆತಿತ್ಯ ಸಿಗಲಿದೆ ಎಂಬ ವದಂತಿಗಳ ಕೇಳಿ ಬಂದಿದ್ದವು. ಆದರೆ ಚಿತ್ರನಟ ದರ್ಶನ್ ಗೆ ರೌಡಿಗಳೇ ನಾ ಮುಂದು ತಾ ಮುಂದು ಎಂಬಂತೆ ರಾಜಾತಿಥ್ಯ ಒದಗಿಸಿದ್ದವು. ಇದಕ್ಕಾಗಿ ಲಕ್ಷಾಂತರ ರೂಪಾಯಿಗಳ ಹಣ ನೀಡಲಾಗುತ್ತಿತ್ತು ಎಂಬುದು ಹಲವಾರು ದಿನಗಳಿಂದ ಆರೋಪಗಳು ಕೇಳಿ ಬರುತ್ತಿದ್ದವು. ಅದು ಈಗ ನಿಜವಾಗಿದೆ. ಈ ಪ್ರಯುಕ್ತ ಪರಪ್ಪನ ಅಗ್ರಹಾರದ ಜೈಲಿನ ಸುಮಾರು 9 ಅಧಿಕಾರಿಗಳು ಅಮಾನತು ಆಗಿದ್ದಾರೆ.

ಆದಕಾರಣ ದರ್ಶನ್ ಅವರನ್ನು ಬಳ್ಳಾರಿ ಜಿಲ್ಲೆಗೆ ಶಿಫ್ಟ್ ಮಾಡಲಾಗಿದೆ.