ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಳಗಿ ತಾಲೂಕಿನ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ 11 ಅಭ್ಯರ್ಥಿಗಳು ಸುಲಭವಾಗಿ ಗೆಲ್ಲಲಿದ್ದು ಪೂರ್ಣ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಏರುತ್ತದೆ ಎಂದು ಮಾಜಿ ಸಚಿವರು ಬಿಜೆಪಿ ಹಿರಿಯ ಮುಖಂಡ ಬಾಬುರಾವ ಚವ್ಹಾಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನೂತನ ಕಾಳಗಿ ತಾಲೂಕು ರಚನೆಗೊಂಡು ಪ್ರಥಮ ಬಾರಿಗೆ ಪಟ್ಟಣ ಪಂಚಾಯಿತಿ ಚುನಾವಣೆ ನಡೆಯುತ್ತಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸುಲಭವಾಗಿ ಗೆಲ್ಲಲು ಪ್ರಮುಖವಾಗಿ ಕಾಳಗಿಯಲ್ಲಿ ಆಗಿರುವಂತ ಅಭಿವೃದ್ಧಿ ಕೆಲಸಗಳು, ಮತ್ತು ಜನಪರ, ಅಭಿವೃದ್ಧಿ ಪಥದತ್ತ, ವಿಶ್ವ ನಾಯಕ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ನಡೆಸುತ್ತಿರುವ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರದ ಸಾಧನೆಗಳಿಗೆ ಪೂರಕವಾಗಿ ಕಾಳಗಿಯ ಜನತೆ ಬಿಜೆಪಿ ಪಕ್ಷದ ಒಲವನ್ನ ಹೊಂದಿದ್ದು . ಪಂಚ ಗ್ಯಾರಂಟಿಗಳು ವಿಫಲತೆಯಿಂದ ಕೂಡಿದ್ದು ಇದರ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತಿದೆ, ಕಾಳಗಿ ತಾಲೂಕ ಬಿಜೆಪಿಯ ಭದ್ರಕೋಟೆ ಆಗಿದೆ ಇದಕ್ಕೆ ಸಾಕ್ಷಿ ಎಂಬಂತೆ ಚುನಾವಣಾ ನಾಮಪತ್ರ ಸಲ್ಲಿಸುವ ಬೃಹತ್ ಜನಸ್ತೋಮ ಸೇರಿದ್ದು ಹಾಗೂ ಜನರ ಮನಸ್ಸಿನಲ್ಲಿ ಬಿಜೆಪಿ ಪಕ್ಷದ ಬಗ್ಗೆ ತುಂಬಾ ಅಭಿಮಾನ ಹಾಗೂ ಗೌರವ, ಕಾಂಗ್ರೆಸ್ ಪಕ್ಷ ಪಂಚ ಗ್ಯಾರೆಂಟಿಗಳಿಂದ ಜನಸಾಮಾನ್ಯರ ಬದುಕು ತೊಂದರೆ ಒಳಗಾಗುತ್ತಿದ್ದು ಅಭಿವೃದ್ಧಿ ಕೆಲಸಗಳು ಕುಂಟಿತಗೊಳ್ಳುತ್ತಿವೆ, ಯಾವುದೇ ಕೆಲಸಗಳು ಆಗುತ್ತಿಲ್ಲ, ಸರ್ಕಾರ ವಿರುದ್ಧ ಜನರು ರೊಚ್ಚಿಗೆದ್ದಿದ್ದು, ಕಾಂಗ್ರೆಸ್ ಪಕ್ಷ ಎಲ್ಲಾ ಬೆಲೆ ಏರಿಕೆ ಏರಿಸಿ ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿದ್ದು, ‘ ಒಂದು ಕೈಯಿಂದ ಕೊಟ್ಟು ಎರಡು ಕೈಯಿಂದ ದೋಚುತ್ತಿದೆ ‘ ಕಲ್ಬುರ್ಗಿ ಉಸ್ತುವಾರಿ ಮಂತ್ರಿ ಪ್ರಿಯಾಂಕ ಖರ್ಗೆ ರವರ ಆಡಳಿತದಲ್ಲಿ ಪುಡಿ ರೌಡಿಗಳ ಹಾಗೂ ಅಕ್ರಮ ಚಟುವಟಿಕೆಗಳು ವಿಪರೀತ ಹೆಚ್ಚಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಸಚಿವರು ವಿಫಲರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಈಗಾಗಲೇ 2 ವರ್ಷ ಅಧಿಕಾರ ನಡೆಸುತ್ತಿದ್ದು ಜನಸಾಮಾನ್ಯರು ಸರಕಾರದಿಂದ ರೋಸಿ ಹೋಗಿದ್ದಾರೆ, ಇದು ಅಲ್ಲದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಲತಾಯಿ ಧೋರಣೆ ಅನುಸರಿಸುತ್ತಿದ್ದು ಇದು ಸರಿಯಲ್ಲ ಎಂದು ಹೇಳಿದರು.
ವರದಿ : ರಾಜೇಂದ್ರ ಪ್ರಸಾದ್