ರಾಯಚೂರು ಅಖಿಲ ಕರ್ನಾಟಕ ಪಿಂಜಾರ ನದಾಫ್ ಮನ್ಸೂರ್ ಹಕ್ಕುಗಳ ಸಂಘ ವತಿಯಿಂದ ಇದೇ ಭಾನುವಾರ 3/8/25.ಸಾಮಾನ್ಯ ಸಭೆ ನಡೆಸಿ . ಸಭೆಯನ್ನು ಉದ್ದೇಶಿಸಿ ಸಂಸ್ಥಾಪಕ ರಾಜ್ಯಾಧ್ಯಕ್ಷರು ಇಮ್ರಾನ್ ಬಡೇಸಾಬ್ ಅವರು ಮಾತನಾಡುತ್ತಾ ನಾವು ಜಿಲ್ಲೆಯ ಎಲ್ಲಾ ಶಾಸಕರಿಗೂ ಸಂಸದರು ಪಿಂಜಾರ ನದಾಫ್ ಪ್ರತ್ಯೇಕ ನಿಗಮ ಮಂಡಳಿಗೆ ಸ್ಥಾಪಿಸಲು ಸಿಎಂ ಅವರಿಗೆ ಒತ್ತಾಯಿಸಬೇಕೆಂದು ಮನವಿ ಪತ್ರವನ್ನು ನೀಡಿದ್ದೇವೆ. ಆದರೆ ಜಿಲ್ಲೆಯ ಯಾವ ಸಂಸದರು ಶಾಸಕರು ನಮ್ಮ ಸಮಾಜಕ್ಕೆ ಸ್ಪಂದಿಸಿಲ್ಲ? ಹಾಗಾಗಿ ಮುಂದಿನ ನಮ್ಮ ಜಿಲ್ಲೆಯ ಚುನಾವಣೆಯಲ್ಲಿ. ತಕ್ಕ ಉತ್ತರ ನೀಡಬೇಕೆಂದು ಸಭೆಯಲ್ಲಿ ಹೇಳಿದರ. ಹಾಗೂ ಇನ್ನು ಕೆಲವೇ ದಿನಗಳಲ್ಲಿ ನಮ್ಮ ಸಮಾಜದ ವತಿಯಿಂದ ಬೆಂಗಳೂರಿಗೆ ನಿಯೋಗ ತೆರಳಿ ಮಾನ್ಯ ಸಿಎಂ ಅವರಿಗೆ ಭೇಟಿಯಾಗಿ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಲು ಮನವಿ ಪತ್ರ ನೀಡುತ್ತೇವೆ ಎಂದು ಹೇಳಿದರು. ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಇಮ್ರಾನ್ ಬಡೇ ಸಾಬ್. ಮತ್ತು ಮಹಿಳಾ ಘಟಕ. ಜಿಲ್ಲಾಧ್ಯಕ್ಷರು .ಖಾಸಿಂಬಿ. ಮುಖಂಡರುಗಳಾದ. ಭಾಷಾ. ಅಸ್ಲಾಂ. ಜಮೀರ್ ಆಪಲ್ಲ್ ದಿನ್ನಿ. ಚಾಂದ್ ಪಾಷಾ. ಇನ್ನು ಅನೇಕ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.