ಕಬ್ಬು ಶೇಂಗಾ ಮತ್ತು ಹತ್ತಿ ಬೆಳೆಯಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳ ಕುರಿತು ವಿಜ್ಞಾನಿಗಳ ಹಾಗೂ ಅಧಿಕಾರಿಗಳ ಕ್ಷೇತ್ರ ಭೇಟಿ

ಹುಕ್ಕೇರಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಆವರಣದಲ್ಲಿ 2025-26 ನೇ ಸಾಲೀನ ಮುಂಗಾರು ಹಂಗಾಮಿನ ಸಸ್ಯ ಸಂರಕ್ಷಣಾ ಜಾಗೃತಿ ಅಭಿಯಾನಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವಿಭಾಗದ ಉಪ ಕೃಷಿ ನಿರ್ದೇಶಕರಾದ ಶ್ರಿ. ಸಹದೇವ ಯರಗೋಪ್ಪ ಸಹಾಯಕ ಕೃಷಿ ನಿರ್ದೇಶಕರಾದ ಶ್ರಿ ಆರ್. ಬಿ. ನಾಯ್ಕರ ಹಾಗು ಹುಕ್ಕೇರಿ ತಾಲೂಕಾ ಕೃಷಿಕ ಸಮಾಜದ ಅದ್ಯಕ್ಷರಾದ ಶೀ ಮಗೆನ್ನವರ ಇವರು ಹಸಿರು ನಿಶಾನೆ ತೋರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ಕೃಷಿ ಇಲಾಖೆ ವತಿಯಿಂದ ರೈತರ ಬೆಳೆ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆಯ ಇತರ ಅಧಿಕಾರಿಗಳೂಳಗೂಂಡಂತೆ ಎಳು ತಂಡಗಳನ್ನು ರಚಿಸಿ ಹುಕ್ಕೇರಿ ತಾಲೂಕಿನ ವಿವಧ ಗ್ರಾಮಗಳ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಸೋಯಾಬಿನ, ಕಬ್ಬು ಶೇಂಗಾ ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳಿಗೆ ಬರುವ ಕೀಟ ಹಾಗೂ ರೋಗ ಭಾದೆಗಳ ಹತೋಟಿ ಕ್ರಮಗಳ ಬಗ್ಗೆ ರೈತರಿಗೆ ಸ್ಥಳದಲ್ಲಿಯೆ ಪರಿಹಾರ ಕ್ರಮಗಳ ಬಗ್ಗೆ ತಿಳಿಸಲಾಯಿತು. ಸೋಯಾಬೀನ ಬೆಳೆಯಲ್ಲಿ ಎಲೆ ತಿನ್ನುವ ಕೀಟಗಳು ಕಂಡುಬಂದಿದ್ದು ಇಂತಹ ಕೀಟಗಳ ಹತೋಟಿಗೆ ಕ್ಲೋರಾಂಟ್ರಿನಿಲಿಪ್ರೋಲ್‌ 47.85 ಎಸ.ಸಿ. ೦.2 ಮಿಲಿ/ ಲೀಟರ ನೀರಿಗೆ ಅಥವಾ ಸ್ಪೈನೋಸ್ಯಾಡ 45 ಎಸ್.ಸಿ 0.2 ಮಿಲಿ / ಲೀಟರ ನೀರಿಗೆ, ಹೆಲಿಕೋವರ್ಪಾ ಕೀಡೆ ಹತೋಟಿಗೆ ಬ್ರೊಪ್ಲಾನಿಲಿಡೆ 3೦೦ ಜಿ/ಎಲ್‌ ಎಸ್‌ ಸಿ ೦.6 ಮಿ.ಲಿ/ ಲೀಟರ ನೀರಿಗೆ ಬೇರಿಸಿ ಸಿಂಪಡಿಸುವುದು. ಸೋಯಾಬೀನ ಮತ್ತು ಕಬ್ಬು ಬೆಳೆಯಲ್ಲಿ ತುಕ್ಕು ಮತ್ತು ಎಲೆ ಚುಕ್ಕೆ ರೋಗ ಕಂಡು ಬರುವ ಸಂಭವವಿದ್ದು ಇವುಗಳ ಹತೋಟಿಗೆ ಮುಂಜಾಗ್ರತ ಕ್ರಮವಾಗಿ ಹೆಕ್ಸಾಕೊನೊಜೋಲ 5 ಎಸ್ ಸಿ 1 ಮಿಲೀ/ಲೀ. ನೀರಿಗೆ ಅಥವಾ ಪ್ರೋಪಿಕೋನಾಜೋಲ್‌ 1 ಮಿಲೀ/ಲೀ. ನೀರಿಗೆ ಬೇರಿಸಿ ಸಿಂಪಡಿಸುವುದು. ಕಬ್ಬಿನ ಬೆಳೆಯಲ್ಲಿ ಪಕ್ಕಾ ಬೊಂಗಾ (ವಿಕೃತ ಕೊಳೆ ರೋಗ) ಹತೋಟಿಗೆ ಅಜೋಕ್ಸಸ್ಟ್ರೋಬಿನ್+ ಡೈಫೆನೊಕೊನೊಜೋಲ್‌ 1 ಮಿ. ಲಿ/ಲೀ ನಿರೀಗೆ ಬೇರಿಸಿ ಸಿಂಪಡಿಸುವುದು. ಗೋವಿನ ಜೋಳ ಹಾಗೂ ಜೋಳ ಬೆಳೆಯಲ್ಲಿ ಲದ್ದಿ ಹುಳು ಹತೋಟಿಗೆ ನೋವಲುರಾನ್‌ 5.25% + ಇಮಾಮೆಕ್ಟಿನ್‌ ಬೆಂಜೋಯೆಟ ೦.9% ಎಸ್.ಸಿ. 1 ಮಿಲಿ/ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿ ಕೊರಕದ ಹತೋಟಿಗೆ ಮುಂಜಾಗ್ರತೆಗಾಗಿ 1೦೦ ದಿನದ ಬೆಳೆಗೆ ಪ್ರೋಪೆನೋಫಾಸ 50 ಇಸಿ 2 ಮಿಲಿ/ಲೀ ಅಥವಾ ಸ್ಪೈನೋಟರಮ್‌ 12 ಎಸ್‌ ಸಿ 1 ಮಿಲಿ/ಲೀ ನೀರಿಗೆ ಅಥವಾ 1 ಮಿಲಿ/ ಲೀ ಬಿ.ಟಿ ದುಂಡಾಣು ಅಥವಾ ಮೆಟರೈಜಿಯಂ ರಿಲೈ ಜೈವಿಕ ಶಿಲೀಂದ್ರದ ಪುಡಿಯನ್ನು 2 ಗ್ರಾಂ. ಪ್ರತಿ ಲಿ, ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದರು. ಸಾಯಂಕಾಲ 4 ಗಂಟೆಗೆ ಹುಕ್ಕೇರಿ ತಾಲೂಕಿನ ಎಲ್ಲ ಪೀಡೆನಾಶಕ ಮಾರಾಟಗಾರರಿಗೆ ಕೀಟ ಮತ್ತು ರೋಗ ಬಾಧೆಯ ಹತೋಟಿ ಕ್ರಮಗಳ ಬಗ್ಗೆ ತರಭೇತಿಯನ್ನು ನೀಡಲಾಯಿತು. ಈ ಅಭಿಯಾನದಲ್ಲಿ ವಿಜ್ಞಾನಿಳಾದ ಡಾ. ಸುನಿಲಕುಮಾರ ನೂಲಿ, ಧನಂಜಯ ಚೌಗಲಾ ಬೆಳಗಾವಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕರುಗಳಾದ ಶ್ರಿ ಬಸವಾಜ ಅಂಗಡಿ, ಶ್ರಿ ಆರ್‌ ಬಿ ಪಾಟೀಲ. ಶ್ರಿಮತಿ ಮಂಗಳಾ ಬಿರಾದಾರ ಹಾಗು ಸಹಾಯಕ ಕೃಷಿ ನಿರ್ದೇಶಕ ಕಚೇರಿಯ ಎಲ್ಲ ಕೃಷಿ ಅಧಿರಾರಿಗಳು ಹಾಜರಿದ್ದರು.

error: Content is protected !!