ಹುಮನಾಬಾದ್ : ತಾಲೂಕಿನ ಘಾಟಬೋರಳ ಗ್ರಾಮದಲ್ಲಿ ಐತಿಹಾಸಿಕ ಶಂಕರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ವೈಭದಿಂದ ಜರುಗಿತು.
ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಧಾರ್ಮಿಕ ಪರಂಪರೆಯಂತೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು. ಬಳಿಕ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗಾಗಿ ದಾರಿಯುದ್ದಕ್ಕೂ ಸೇರಿ ಶಂಕರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬೃಹತ್ ಅನ್ನದಾಸೋಹ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಜಿಪಂ. ಮಾಜಿ ಉಪಾಧ್ಯಕ್ಷ ಪ್ರಕಾಶ ಪಾಟೀಲ್, ಸಂಭಾಜಿ ಪಾಟೀಲ್, ರಾಜಕುಮಾರ ಪಾಟೀಲ್, ರಂಜೀತ ಮಾನಕರೆ, ಜ್ಞಾನೇಶ್ವರ ಭೋಸ್ಲೆ, ಸಿದ್ಧಾರ್ಥ ಪರಾಂಜಪೆ, ವಿಷ್ಣು ಜಮಾದಾರ, ಸುಧಾಮ ಘಂಟೆ, ಮನೋಜಕುಮಾರ ಭೋಸ್ಲೆ, ಅಭಿಮನ್ಯು ನಿರಗುಡೆ, ಕಾಮರೆಡ್ಡಿ, ಗೋರಕ ಸಗರ, ಕುಮಾರ ಪಾಟೀಲ್, ಬಾಬುರಾವ ಜಾಧವ, ರತನ್ ಜಮಾದಾರ, ಗೋಪಾಲ ನಲ್ಲೆ, ಕೃಷ್ಣ ಘಂಟೆ, ಯೋಗೇಶ ಘಂಟೆ, ಮಾಣಿಕ ಜಮಾದಾರ, ಸಾಯಿ ಸೇರಿ ಅನೇಕರಿದ್ದರು.
——————————–
ದರ್ಶನ ಪಡೆದ ಎಂಎಲ್ಸಿ ಪಾಟೀಲ್
ಶಂಕರಲಿಂಗ ದೇವರ ಜಾತ್ರಾ ಮಹೋತ್ಸವ ನಿಮಿತ್ತ ತಾಲೂಕಿನ ಘಾಟಬೋರಳ ಗ್ರಾಮದ ಐತಿಹಾಸಿಕ ಶಂಕರಲಿಂಗ ದೇವಸ್ಥಾನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದರು.
——————————
ಕುಸ್ತಿ ಪಂದ್ಯಾವಳಿ ಆಯೋಜನೆ
ಜಾತ್ರಾ ಮಹೋತ್ಸವ ನಿಮಿತ್ತ ತಾಲೂಕಿನ ಘಾಟಬೋರಳ ಗ್ರಾಮದ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಶನಿವಾರ ರೋಚಕ ಕುಸ್ತಿ ಪಂದ್ಯಾವಳಿ ನಡೆಯಿತು.
ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಅವರು ಕುಸ್ತಿ ಪಂದ್ಯಾವಳಿ ವೀಕ್ಷಿಸಿದರು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಕುಸ್ತಿ ಪಟುಗಳ ಪ್ರತಿಭೆ ನೋಡುಗರರ ಗಮನ ಸೆಳೆಯಿತು.