ಕಳೆದು ಹೋಗಿದ್ದ 30 ಮೊಬೈಲ್‌ಗಳನ್ನು ಪತ್ತೆ ಮಾಡಿರುವ ಪೊಲೀಸರು

ಚಿತ್ತಾಪುರ; ಕಳೆದು ಹೋಗಿದ್ದ 30 ಮಂದಿಯ ಮೊಬೈಲ್‌ಗಳನ್ನು ಪತ್ತೆ ಮಾಡಿರುವ ಚಿತ್ತಾಪುರ ಪೊಲೀಸರು, ಆ ಮೊಬೈಲ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು.
ಸಾರ್ವಜನಿಕರು ತಾವು ಕಳೆದುಕೊಂಡಿದ್ದ ಮೊಬೈಲ್‌ಗಳ ಪತ್ತೆಗಾಗಿ ಸೆಂಟ್ರಲ್ ಇಕ್ವಿಪ್‌ಮೆಂಟ್ ರಿಜಿಸ್ಟ‌ರ್ (ಸಿಇಐಆ‌ರ್) ಮತ್ತು ಕೆಎಸ್‌ಪಿ ಇ-ಲಾಸ್ಟ್‌ನಲ್ಲಿ ದೂರು ದಾಖಲಿಸಿದ್ದರು.
ಚಿತ್ತಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡಿದ್ದ ಒಟ್ಟು 30 ಮೊಬೈಲ್‌ಗಳನ್ನು ಪತ್ತೆ ಮಾಡಲಾಗಿದ್ದು, ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಅವರು ವಾರಸುದಾರರಿಗೆ ಹಸ್ತಾಂತರಿಸಿದರು.
ಈ ವೇಳೆ ಮಾತನಾಡಿದ ಅವರು, ಮೊಬೈಲ್ ಕಳೆದುಕೊಂಡವರು ಸಿಇಐಆರ್ ಪೋರ್ಟಲ್ ಮೂಲಕ ದೂರು ದಾಖಲಿಸಿದ್ದು, ಅದರ ಮಾಹಿತಿ ಸ್ಥಳೀಯ ಪೊಲೀಸ್‌ ಠಾಣೆಗೆ ಲಭ್ಯವಾಗುತ್ತದೆ. ಅವರ ದೂರಿನ ಅನ್ವಯ ಪೊಲೀಸರು ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದಾರೆ ಎಂದರು.
ಮೊಬೈಲ್ ಫೋನ್ ಕಳೆದುಕೊಂಡವರಿಗೆ ಅವುಗಳನ್ನು ಹುಡುಕಿ ವಾಪಸ್ ಕೊಡುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಕಳೆದುಕೊಂಡ ಫೋನ್ ಸಿಗೋದೇ ಇಲ್ಲ ಎಂದು ಬೇಸರಗೊಂಡಿದ್ದ ವಾರಸುದಾರರು ಮರಳಿ ಮೊಬೈಲ್‌ ಪಡೆದದ್ದಕ್ಕೆ ಸಂತಸಪಟ್ಟರು.
ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐ ಶ್ರೀಶೈಲ್ ಅಂಬಾಟಿ, ಕ್ರೈಂ ಪಿಎಸ್‌ಐ ಚಂದ್ರಾಮಪ್ಪ, ಗ್ರೇಡ್ 2 ತಹಶೀಲ್ದಾರ್ ರಾಜಕುಮಾ‌ರ್ ಮರತೂರಕ‌ರ್, ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಎಎಸ್‌ಐ ಬಾಬುರಾವ್‌, ದತ್ತು ಜಾನೆ ಸೇರಿದಂತೆ ಇತರರು ಇದ್ದರು.

error: Content is protected !!