12 ಸಾವಿರಕ್ಕೆ ಗಣೇಶ ಲಡ್ಡು ಹರಾಜು

ಚಿಂಚೋಳಿ : ಚಂದಾಪುರ ಪಟ್ಟಣದ ಶಾರದಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣೇಶ ವಿಸರ್ಜನೆ ಅಂಗವಾಗಿ ಶಾಲೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ನಂತರದಲ್ಲಿ ಗಣೇಶ ಪ್ರಸಾದ ಲಡ್ಡು ಹರಾಜ ಮಾಡಲಾಯಿತು ಹರಾಜ ನಲ್ಲಿ ಶಿಕ್ಷಣ ಪ್ರೇಮಿ ಹಾಗೂ ಸಮಾಜಸೇವಕ ಅನಿಲ ಬಿರಾದರವರು ಶಾಲೆಯ ಗಣೇಶ ಲಡ್ಡುವನ್ನು 12000 ಕ್ಕೆ ಕೊಂಡುಕೊಳ್ಳುವ ಮುಖಾಂತರ ಶಾಲೆ ಹಾಗೂ ಮಕ್ಕಳ ಬೆನ್ನ ಹಿಂದೆ ಇರುತ್ತೇನೆ ಎಂಬ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.

ಈ ಸಂಧರ್ಭದಲ್ಲಿ, ಸಮಾಜ ಮುಖಂಡರಾದ ಕೆಎಂ ಬಾರಿ, ಪ್ರೇಮ ಸಿಂಗ್ ಜಾದವ್, ಅನಿಲ ಕುಮಾರ ಬಿರಾದರ, ಉಲ್ಲಾಸ ಕುಮಾರ ಕೇರೂಳ್ಳಿ, ಸೂರ್ಯಕಾಂತ ಗಾರಂಪಳ್ಳಿ, ಶಾಲೆಯ ಮುಖ್ಯಸ್ಥರಾದ ವಿಶ್ವನಾಥ ದೇಸಾಯಿ, ಶಿಕ್ಷಕಿರಾದ ಚಂದ್ರಕಲಾ, ರೋಹಿಣಿ,ಕವಿತಾ, ಇತರರು ಉಪಸ್ಥಿತರಿದ್ದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!