ಕಲಬುರಗಿ ಜಿಲ್ಲೆಯಲ್ಲಿಯೇ ವಾಡಿಕೆಗಿಂತ ಅತೀ ಹೆಚ್ಚಿನ ಮಳೆ ಚಿಂಚೋಳಿ ತಾಲೂಕಿನಲ್ಲಿ ಆಗುತ್ತಿದೆ, ಅತೀ ಹೆಚ್ಚಿನ ಜನರು ವ್ಯವಸಾಯದ ಮೇಲೆಯೇ ನಿರ್ಭರಿತರಾಗಿರುವ ನಮ್ಮ ತಾಲೂಕಿನ ಜನರ ಬವಣೆ ಹೇಳತೀರದು, ಮೊದಲು ಮಳೆ ಬಾರದೆ ಮೊಳಕೆ ಬಾರದಿದ್ದಾಗ ಪುನಃ ಬಿತ್ತಿದ ರೈತರಿಗೆ ಇವಾಗ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗಾಗಿದೆ, ಖರೀಪ್ ಬೆಳೆಯ ಮೇಲೆ ಅವಲಂಬಿತ ರೈತರ ಸ್ಥಿತಿ ಚಿಂತಾಜನಕವಾಗಿದೆ. ಕೆರೆ ಹಳ್ಳಗಳು ತುಂಬಿ ತಾಲೂಕಿನ ಹಲವಾರು ಗ್ರಾಮಗಳ ಸಂಪರ್ಕಗಳು ಜಲಾವೃತವಾಗಿವೆ. ಮುಲ್ಲಾಮಾರಿ ನದಿಯ ಹರಿವು ಹೆಚ್ಚಾಗಿದೆ ಗಾರಂಪಲ್ಲಿ, ತಾಜಲಾಪುರ ಗ್ರಾಮಗಳ ಸೇತುವೆಗಳು ಮುಳುಗಿವೆ, ಸೇತುವೆ ಮೇಲೆತ್ತುವ ಆ ಗ್ರಾಮಗಳ ಜನರ ಕೂಗಿಗೆ ಸಂಬಂಧಪಟ್ಟವರು ಇಲ್ಲಿಯವರೆಗೂ ಕಿವಿಗೊಟ್ಟಿಲ್ಲ. ಇಂತಹ ಸಮಯದಲ್ಲಿ ದಿನದ 24 ಗಂಟೆ ಜನರ ಮಧ್ಯೆ ಇರಬೇಕಾದ ಶಾಸಕ ಅವಿನಾಶ ಜಾಧವ ಅವರು ನಿನ್ನೆಯವರೆಗೆ ನಾಪತ್ತೆ. ಅತೀವೃಷ್ಟಿ ಕುರಿತು ಕನಿಷ್ಠ ತಾಲೂಕಿನ ಅಧಿಕಾರಿಗಳ ಸಭೆ ಕೂಡ ಮಾಡಿಲ್ಲ. ಮಳೆಯಿಂದ ಆಗಿರುವ ಮನೆಗಳ ಹಾನಿ, ಬೆಳೆ ಹಾನಿ, ಮೂಕ ಪ್ರಾಣಿಗಳ ಪರಿಸ್ಥಿತಿ ಕುರಿತ ಒಂದು ಅವಲೋಕನ ಮಾಡಿಲ್ಲ. ಹಾನೀಯ ಮಾಹಿತಿ ಇಟ್ಟುಕೊಂಡು ಸರಕಾರಕ್ಕೆ ಪರಿಹಾರಕ್ಕೆ ಒತ್ತಾಯಿಸುವ ಶಾಸಕರು ಇದಕ್ಕೂ ನನಗೂ ಸಂಬಂಧವೇ ಇಲ್ಲ ಅನ್ನುವ ರೀತಿ ವರ್ತಿಸುವುದು ಅಮಾನವೀಯ. ಇಂತಹ ಸಮಯದಲ್ಲಿ ಜನರ ಮಧ್ಯೆ ಇಲ್ಲದೆ ಇನ್ನು ಯಾವಾಗ ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತಾರೆ ದೇವರೇ ಬಲ್ಲ. ಪ್ರತೀ ದಿನ ಮಾಹಿತಿ ಪಡೆದು ನಿರಂತರ ಅಧಿಕಾರಿಗಳ ಜೊತೆ ಸಭೆ ಮಾಡಿ ಅವರಿಗೆ ಸೂಕ್ತ ನಿರ್ದೇಶನ ನೀಡಿ, ಜನರಿಗೆ ಧೈರ್ಯ ತುಂಬಿ ಸರಕಾರಕ್ಕೆ ಪರಿಹಾರಕ್ಕೆ/ ವಿಶೇಷ ಅನುದಾನಕ್ಕೆ ಮನವಿ ಮಾಡಬೇಕಾದ ಶಾಸಕರು ಇದೆಲ್ಲ ಮರೆತು ಇವತ್ತು ಕೇವಲ ಕಾಟಾಚಾರಕ್ಕೆ ಒಂದು ದಿನ ಫೋಟೋ ಶೂಟ್ ಗೆ ಕ್ಷೇತ್ರಕ್ಕೆ ಬಂದು ಹೊಗುವದು ನಮ್ಮ ಕ್ಷೇತ್ರದ ಜನರ ದುರಾದೃಷ್ಟ.
ತಾಲೂಕಿನ ರಸ್ತೆಗಳ ಪರಿಸ್ಥಿತಿಯಂತೂ ಹೇಳತೀರದು ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುವ ಚಿಂಚೋಳಿ ಸುಲೇಪೆಟ್ ರಸ್ತೆಗೆ ಯಾರೂ ದಿಕ್ಕು ಸಹ ಇಲ್ಲ, ಶಾಸಕರು ಇದೆ ದಾರಿಯಲ್ಲಿ ಬಂದ ಹೋಗುತ್ತಾರೆ ಆದರೆ ಕ್ಯಾರೆ ಎನ್ನುತ್ತಿಲ್ಲ, ಇನ್ನು ತಾಲೂಕಿನ ಗ್ರಾಮಗಳ ಸಂಪರ್ಕ ರಸ್ತೆಗಳನ್ನು ಸುಧಾರಿಸುವುದು ಕನಸಿನ ಮಾತಾಷ್ಟೇ, ಕೇಳುವ ಶಾಸಕರೇ ಮುಕರಾದ ಮೆಲೇ ಅಧಿಕಾರಿಗಳು ಏನು ಮಾಡುತ್ತಾರೆ. ಜನರು ಯಾರಿಗೆ ಹೇಳಬೇಕು ನಮ್ಮ ಕಷ್ಟ ಅನ್ನುವ ಸ್ಥಿತಿಗೆ ತಲುಪಿದ್ದಾರೆ. ಮಾತೆತ್ತಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದೆ ಎಂದು ಕೈಲಾಗದ ಸಬೂಬು ಹೇಳುವ ಚಾಳಿ ಬೆಳೆಸಿಕೊಂಡ ಶಾಸಕರು ತಾವು ನಿರ್ವಹಿಸಬೇಕಾದ ಕನಿಷ್ಠ ಕರ್ತವ್ಯಗಳಿಂದ ವಿಮುಖರಾಗುತ್ತಿರುವದು ಅವರ ಕಾರ್ಯ ವೈಖರಿ ಜನರ ಮೇಲೆ ಇರುವ ಕಾಳಜಿ ಎತ್ತಿ ತೋರಿಸುತ್ತಿದೆ. ಬಿಜೆಪಿ ಶಾಸಕರು ಇರುವ ರಾಜ್ಯದ ಇನ್ನಿತರ ಕ್ಷೇತ್ರಗಳ ಪ್ರತಿನಿಧಿಗಳು ಮಾಡುತ್ತಿರುವ ಕೆಲಸ ನೋಡಲಿ ಅವಿನಾಶ ಜಾಧವ ಅವರು. ಕೇವಲ ಸಬೂಬು ಹೇಳಿ ಜಾರಿಕೊಳ್ಳುವದು ರಾಜಕಾರಣಿಯ ಲಕ್ಷಣವಲ್ಲ, ಸರಕಾರ ಯಾವುದೇ ಇರಲಿ ಕ್ಷೇತ್ರ ನಿಮ್ಮದು ನಿಮ್ಮ ಕಾರ್ಯ ನಿರ್ವಹಿಸಿ ಸರಕಾರ ನಿಮ್ಮ ಮನವಿಗೆ ಸ್ಪಂದಿಸಿದ ಕಾಲದಲ್ಲಿ ದುರುವ ಕೆಲಸ ಆಗಲಿ. ಮನೆ ಮನೆಗೂ ಕಾಂಗ್ರೆಸ್ ಕೊಡುಗೆ ಚಿಂಚೋಳಿಯಲ್ಲೂ ತಲುಪುತ್ತಿವೆ ನೀವು ಬಿಜೆಪಿ ಶಾಸಕ ಅಂತ ಯಾವ ಅನುದಾನ ಅಥವಾ ಗ್ಯಾರಂಟೀಗಳು ನಿಂತಿಲ್ಲ. ಇನ್ನು ಮುಂದಾದರೂ ಜನರ ಮಧ್ಯೆ ಇದ್ದು ಸರಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ತರುವ ಪ್ರಾಮಾಣಿಕ ಕೆಲಸ ಮಾಡಲಿ, ಇಲ್ಲ ಅಂದ್ರೆ ಜನ ಕಂಡಲ್ಲಿ ಘೇರಾವ ಹಾಕಿ ನಿಮಗೆ ಚಿಂಚೋಳಿಗೆ ಬರುವದು ಕಷ್ಟ ಮಾಡುತ್ತಾರೆ ಎಂದು ಶರಣು ಪಾಟೀಲ ಮೋತಕಪಳ್ಳಿ, ವಕ್ತಾರರು ಬ್ಲಾಕ್ ಕಾಂಗ್ರೆಸ್ ಸಮಿತಿ ಚಿಂಚೋಳಿ ಹೇಳಿದರು.
ವರದಿ : ರಾಜೇಂದ್ರ ಪ್ರಸಾದ್