ವರವಟ್ಟಿ ಜನರ ಸಮಸ್ಯೆ ಆಲಿಸಿದ ಮಾಜಿ ಸಚಿವ ಪಾಟೀಲ್

ಹುಮನಾಬಾದ್ : ಪಟ್ಟಣದ ಮಾಜಿ ಸಚಿವರ ಗೃಹ ಕಚೇರಿಯಲ್ಲಿ ಭಾನುವಾರ ವರವಟ್ಟ (ಕೆ) ಗ್ರಾಮಸ್ಥರ ಸಮಸ್ಯೆಗಳನ್ನು ಮಾಜಿ ಸಚಿವ ರಾಜಶೇಖರ ಪಾಟೀಲ್ ಆಲಿಸಿದರು.

ಬಳಿಕ ವರವಟ್ಟಿ (ಕೆ) ಗ್ರಾಮದ ಕೆಲ ಮುಖಂಡರು ಮಾತನಾಡಿ, ಮಳೆಗಾಲ ಬಂದರೆ ಸಾಕು ವರವಟ್ಟಿ ಗ್ರಾಮದಲ್ಲಿ ರೈತರು ತಮ್ಮ ಹೊಲಗಳಿಗೆ ಹೊಗಬೇಕಾದರೆ ಸೂಕ್ತ ರಸ್ತೆ ಸಂಪರ್ಕವಿಲ್ಲದ ಕಾರಣ ದಿನನಿತ್ಯ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ನಮ್ಮ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ರಾಜಶೇಖರ ಪಾಟೀಲ್ ಮಾತನಾಡಿ, ವರವಟ್ಟಿ (ಕೆ) ಗ್ರಾಮಸ್ಥರ ಸಮಸ್ಯೆ ಕುರಿತು ತಹಸೀಲ್ದಾರ್ ಹಾಗೂ ತಾಪಂ. ಇಒ ಅವರ ಜತೆಯಲ್ಲಿ ಮಾತನಾಡಿದ್ದೇನೆ. ಅಲ್ಲದೇ ಈ ಹಿಂದೆ ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಗಳ ತಂಡ ಸ್ಥಳ ಕೂಡಾ ಪರಿಶೀಲನೆ ಮಾಡಲಾಗಿದೆ. ಹೀಗಾಗಿ ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನೀಲಕಂಠ ಶಟ್ಟಿ, ಹುಸೇನ ಶಟ್ಟಿ, ಸೋಮನಾಥ ಸ್ವಾಮಿ, ಬಸವರಾಜ ಉತ್ತಮ, ರಮೇಶ ಪಾಟೀಲ್, ರಾಜಪ್ಪ ಪಾಟೀಲ್, ಶಂಕರ ಮೇತ್ರೆ, ಅಂಬಣ್ಣ ಕೇರಿ, ಹಣಮಂತ ವಾಡೇಕರ, ಹನೀಫ್ ಭಟ್ಟಿ, ಸುನೀಲ್ ಉತ್ತಮ, ಲಕ್ಷ್ಮಣ ಹಲಗೆ, ಸಂಬಣ್ಣ ಉತ್ತಮ, ರಾಜಕುಮಾರ ಬೆಳಗೆ, ಸಂಗಮೇಶ ಬೆಳಗೆ, ರಾಜಕುಮಾರ ತೆಲಂಗ, ಮಲ್ಲಿಕಾರ್ಜುನ ಬೆಳಗೆ, ಮಲ್ಲಪ್ಪರೆಡ್ಡಿ, ಅಡೇಯ್ಯಸ್ವಾಮಿ, ಬಸಲಿಂಗ ಬೆಳಗೆ ಸೇರಿ ಅನೇಕರಿದ್ದರು.

error: Content is protected !!