ಕಲಬುರ್ಗಿ ಜಿಲ್ಲೆಯ ಅಫಜಲಪುರ ಪಣ್ಣದಲ್ಲಿ ಹಮ್ಮಿಕೊಂಡಿರುವ 2025-26ನೇ ಸಾಲಿನ ತಾಲೂಕು ಮಟ್ಟದ “ಉತ್ತಮ ಶಿಕ್ಷಕ ಪ್ರಶಸ್ತಿಗೆ”ಭಾಜನಾರಾದ ಹಾಗೂ ಗುರು ಮಾತೆಯರಿಗೆ ಅಫಜಲಪುರ ತಾಲೂಕಿನ ಘಟಕದ ಕಲಬುರ್ಗಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗವು ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಅಫಜಲಪುರ ಪಣ್ಣದಲ್ಲಿ ಬಹಳ ಅದ್ಧೂರಿಯಾಗಿ ಜರುಗಿತು.
ಶಿಕ್ಷಕರ ಕಾರ್ಯ ಚಟುವಟಿಕೆಗಳು, ಶೈಕ್ಷಣಿಕ ಪ್ರಗತಿಗೆ ನೀಡಿರುವ ಕೊಡುಗೆ, ಶಾಲಾ ಪರಿಸರ ನಿರ್ಮಾಣ, ಶಾಲೆಯಲ್ಲಿ ಶಿಸ್ತು, ದಾನಿಗಳ ನೆರವಿನಿಂದ ಶಾಲೆ ಅಭಿವೃದ್ದಿಗೆ ಕೈಗೊಂಡ ಕ್ರಮಗಳು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಅವರ ಪ್ರಗತಿದಾಯಕ ಅಂಶ ಪರಿಶೀಲಿಸಿ ಈ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ವರದಿ : ಸೈಫನ್ ಮುಲ್ಲಾ