ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಕಾರ ಅಗತ್ಯ

ಕಾಳಗಿ : ತಾಲೂಕಿನ ಕೊಡದೂರು ಕ್ಲಾಸರ ವ್ಯಪ್ತಿಯಲ್ಲಿನ ಭಾರತನೂರ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದವತಿಯಿಂದ ಶಿಕ್ಷಕರ ವತಿಯಿಂದ ನಿವೃತ್ತಿ ಶಿಕ್ಷಕ ಗುಂಡಪ್ಪ ಹೊಸಳ್ಳಿ ಅವರನ್ನು ಸನ್ಮಾನ ಮಾಡಿ ಬೀಳ್ಕೊಡಲಾಯಿತು
ಈ ವೇಳೆ ಮಾತನಾಡದ ಪ್ರಾಥಮಿಕ ನೌಕರರ ಸಂಘದ ಅಧ್ಯಕ್ಷರು ಮಹಾಂತೇಶ್ ಪಂಚಾಳ ಮಾತನಾಡಿ ಸರ್ಕಾರಿ ಶಾಲೆಗಳು ಎಂಬುದು ದೇವಾಲಯ ಇದ್ದಂತೆ ಸದಾ ನಿಷ್ಠೆಯಿಂದ ಪ್ರಾಮಾಣಿಕವಾಗಿ ದುಡಿದು ಸಮಾಜದಲ್ಲಿ ಉತ್ತಮ ಹೆಸರು ಗಳಿಸಿಕೊಳ್ಳಲು ಸಹಕಾರ. ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವ ಮೂಲಕ ಮಕ್ಕಳ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವ ಶಕ್ತಿ ಶಿಕ್ಷಕರ ಕೈಯಲ್ಲಿರುತ್ತದೆ ತಿಳಿಸಿದರು ಹಾಗೂ ನಿವೃತ್ತಿ ಶಿಕ್ಷೆಕರು ಗುಂಡಪ್ಪ ಹೊಸಳ್ಳಿ ಅವರು ಮಕ್ಕಳಿಗೆ ಪೆನ್ನು ಕಾಪಿ ಹಾಗೂ ಬಿಸಿ ಊಟ ಮಾಡುವದಕ್ಕೆ ಕುಕ್ಕರ್ ವಿತರಣೆ ಮಾಡಿದರು ಈ ಸಂಧರ್ಭದಲ್ಲಿ ಮಹಾನಂದ ಶಾಲಾಯ ಮುಖ್ಯ ಶಿಕ್ಷಕರು ಭಾರತನೂರ್, CRP ಶಂಕರ ಮಂಗಲಗಿ, ಶರಣಗೌಡ ಪಾಟೀಲ್ ಮಾಜಿ ನೌಕರರ ಸಂಘದ ಅಧ್ಯಕ್ಷರು ಕಾಳಗಿ, ಮಾಣಿಕ್ ರಡ್ಡಿ ಸೇರಿಕಾರ, ಚನ್ನಬಸ್ಸ್ಯಾಯ್ ಸ್ವಾಮಿ, ನಾಗಣ್ಣ ಗೌಡ ಪಾಟೀಲ್ ದಿಲೀಪ್ ಅಣಕಲ್, ಚೌಡಪ್ಪ ಹಳ್ಳಿ, ಅಡುಗೆ ಸಿಬ್ಬಂದಿಯವರು ಹಾಗೂ ಶಾಲೆಯ ಮದ್ದು ಮಕ್ಕಳು ಉಪಸ್ಥಿತರಿದ್ದರು.

ವರದಿ : ರಮೇಶ್ ಎಸ್ ಕುಡಹಳ್ಳಿ

error: Content is protected !!