ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಜೀವನ ಕುರಿತು ಪರೀಕ್ಷೆಯಲ್ಲಿ ಭಾಗ ವಹಿಸದ ಹಿಂದೂ ಯುವತಿಗೆ ತಹೇರಿಕ್ ಎ ಮಹೇರಾಬ್ ಸಂಸ್ಥೆ ವತಿಯಿಂದ ಮುಸ್ಲಿಂ ಧರ್ಮ ಗುರುಗಳ ನೇತೃತ್ವದಲ್ಲಿ ಸನ್ಮಾನ ಗೌರವ

ಹುಮ್ನಾಬಾದ್ : ತಹೇರಿಕ್ ಎ ಮಹೇರಾಬ್ ಸಂಸ್ಥೆ ವತಿಯಿಂದ ಪ್ರತಿವರ್ಷ ಈದ್ ಮಿಲಾದ್ ಸಂಧರ್ಭದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ರವರ ಜೀವನ ಚರಿತ್ರೆ ಕುರಿತು ಪರೀಕ್ಷೆ ನಡೆಸಲಾಗುತ್ತದೆ ಇದರಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ತೃತೀಯ ಬಂದವರಿಗೆ ನಗದು ಬಹುಮಾನ ನೀಡಲಾಗುತ್ತದೆ ಪ್ರತಿವರ್ಷದಂತೆ ಈ ವರ್ಷವೂ ಪರೀಕ್ಷೆ ನಡೆಸಲಾಗಿತ್ತು 1500ನೇ ಜನ್ಮದಿನದ ಈ ಪರೀಕ್ಷೆ ಯಲ್ಲಿ 1500ಜನ ಪರೀಕ್ಷಾರ್ಥಿಗಳು ಭಾಗವಹಿಸಿದ್ದು ಅತ್ಯಂತ ವಿಶೇಷ ವಾಗಿತ್ತು 1500ಪರೀಕ್ಷಾರ್ಥಿ ಗಳಲ್ಲಿ ಒಬ್ಬ ಹಿಂದೂ ಯುವತಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದರು ಹೌದು ಪ್ರವಾದಿ ಮೊಹಮ್ಮದ್ ಪೈಗಂಬರ್ ರವರು ಯಾವುದೇ ಜಾತಿ ಧರ್ಮದವರಿಗೆ ಸೀಮಿತರಲ್ಲ ಅವರು ಇಡೀ ಮಾನವ ಕುಲಕ್ಕೆ ಪೈಗಂಬರ್ ಆಗಿ ಬಂದಿದ್ದಾರೆ ರಹೇಮಾತುಲ್ ಲಿಲ್ ಆಲಮಿನ್ ಎಂದು ಅವರನ್ನ ಕರೆಯಲಾಗಿದೆ ಅದರಂತೆ ಪರೀಕ್ಷೆ ಯಲ್ಲಿ ಅವರಿವರೆನ್ನದೆ ಎಲ್ಲರೂ ಭಾಗವಹಿಸಬಹುದು ಎಂದು ತಿಳಿದು ಹಿಂದೂ ಯುವತಿ ಯೊಬ್ಬಳು ಭಾಗವಹಿಸಿದಕ್ಕೆ ಅವರನ್ನ ಪ್ರಶಸ್ತಿ ಹಾಗೂ ನೆನಪಿನ ಕಾಣಿಕೆ ನೀಡಿ ತಹೇರಿಕೆ ಎ ಮಹೇರಾಬ್ ಸಂಸ್ಥೆಯು ಗೌರವಿಸಿದೆ.

ಈ ಸಂಧರ್ಭದಲ್ಲಿ ಹಾಫೆಜ್ ಇರ್ಫಾನ್ ಉಲ್ಲಾ, ಮುಫ್ತಿ ತನ್ವಿರ್ ಖಾಸ್ಮಿ ಸೇರಿದಂತೆ ಅನೇಕ ತಹೇರಿಕ್ ಎ ಮಹೇರಾಬ್ ನಾ ಮುಖ್ಯಸ್ಥರು ಹಾಗೂ ಮುಸ್ಲಿಂ ಧರ್ಮ ಗುರುಗಳು ನೂರಾರು ಸಂಖ್ಯೆ ಯಲ್ಲಿ ಮಹಿಳೆಯರು ಉಪಸ್ಥಿತರಿದ್ದರು.

error: Content is protected !!