ಹುಮನಾಬಾದ್ : ಇಂದಿನ ಒತ್ತಡದ ಬದುಕಿನಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಎಲ್ಲರೂ ನೆಮ್ಮದಿ ಜೀವನ ನಡೆಸಬೇಕಾದರೆ ಕ್ರೀಡೆ ಸಹಕಾರಿ ಎಂದು ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಹೇಳಿದರು.
ತಾಲೂಕಿನ ಕಠಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಬಸವರಾಜ ಪಾಟೀಲ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್, ಟೆನಿಸ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳಿಂದ ಮನಸ್ಸು ಉಲ್ಲಾಸಭರಿತ ವಾಗುತ್ತದೆ. ಜಂಜಾಟದಿಂದ ಹೊರ ಬರಬಹುದು. ಸದೃಢ ದೇಹ ಮತ್ತು ಸದೃಢ ಮನಸ್ಸು ನಿರ್ಮಾಣಗೊಳ್ಳುತ್ತದೆ. ಕ್ರೀಡೆಗಳಿಂದ ದೇಶ ದೇಶಗಳ ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ. ಗ್ರಾಮೀಣ ಭಾಗದ ಪ್ರತಿಭೆಗಳು ತಮ್ಮ ಪ್ರತಿಭೆಗಳನ್ನು ಹೊರಚೆಲ್ಲಲು ಸಂಘ ಸಂಸ್ಥೆಗಳು ಕ್ರೀಡಾ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು ಸಲಹೆ ನೀಡಿದರು.
ಕಾಂಗ್ರೆಸ್ ಯುವ ಮುಖಂಡ ಅನಿಲ್ ದೊಡ್ಡಿ ಮಾತನಾಡಿ, ಮಾಜಿ ಸಚಿವ ಬಸವರಾಜ ಪಾಟೀಲ್ ಅವರು ತಮ್ಮ ಆಡಳಿತ ಅವಧಿಯಲ್ಲಿ ಹುಮನಾಬಾದ್ ಕ್ಷೇತ್ರ ಮಾದರಿ ಮತಕ್ಷೇತ್ರ ಮಾಡುವ ಮೂಲಕ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಅವರ ಉತ್ತಮ ಕಾರ್ಯ ವೈಖರಿಯ ಸವಿ ನೆನಪಿಗಾಗಿ ಈ ಟೂರ್ನಮೆಂಟ್ ಏರ್ಪಡಿಸಲಾಗಿದೆ. ಹೀಗಾಗಿ ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಟೂರ್ನಮೆಂಟ್ ಯಶಸ್ವಿ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಶಿವರಾಜಪ್ಪ ಪಾಟೀಲ್, ಲಕ್ಷ್ಮಣ ಜಮಾದಾರ, ಬಸವರಾಜ ಭೂತಾಳೆ, ಹಣಮಂತ ಭಂಡಾರಿ, ಗುಂಡಪ್ಪ ಭೂಯಾರ್, ಬಾಬು ಪೂಜಾರಿ, ವೈಜಿನಾಥ ಸಾಗರ, ನಾಗಪ್ಪ ಸಾಗರ, ಜನಗನಾಥ ನವಲೆ, ಬಸವರಾಜ ಪಾಟೀಲ್ ಕಠಳ್ಳಿ, ನ್ಯಾಮತಾಲಿ ಶೇಖ್, ಮಚೇಂದ್ರ ಸಿರಗೆಕರ್, ರಾಹುಲ್ ಸಿರಗೆಕರ್, ಲೋಕೇಶ ಜಮಾದಾರ, ಅಂಬ್ರೇಶ ಸಾಗರ, ಈಶ್ವರ ಕ್ರಾಂತಿ, ಗೋರಖನಾಥ ಸಿರಗೆಕರ್, ವೀರೇಶ ಕಲ್ಲೂರ, ಅರುಣ ಕಲ್ಲೂರ, ಶಿವಶರಣ ಪೂಜಾರಿ ಇದ್ದರು.
