ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿದ ಅರವಿಂದ ಗುತ್ತೇದಾರ.
ಅಫಜಲಪೂರ : ರಾಯಚೂರು ಜಿಲ್ಲೆಯಲ್ಲಿ ನಡೆಯುವ ಬೆಳಕು ಸಾಹಿತ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ನಡೆಯುವ ರಾಷ್ಟ್ರ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಬೆಳಕು ಸಮ್ಮೇಳನದ ಪ್ರಯುಕ್ತ ಪ್ರಶಸ್ತಿ ವಿಜೇತರಿಗೆ ಕೆಎಂ ಎಫ್,ಮಾಜಿ ನಿರ್ದೇಶಕ ಅರವಿಂದ ಗುತ್ತೇದಾರ ಅವರು ಸನ್ಮಾನಿಸಿ ಅಭಿನಂದಿಸಿದರು.
ನಂತರ ಮಾತನಾಡಿದ ಅವರು ನಮ್ಮ ತಾಲೂಕಿನ ಕಲಾವಿದರಿಗೆ ಬೆಳಕು ಪೌಂಡೇಷನ್ ಗುರ್ತಿಸಿ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸುತ್ತಿರುವದು ಹೆಮ್ಮೆಯ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಜಮೀಲ್ ಗೌಂಡಿ,ಚಾಂದ ಸಾಬ್ ಅರ್ಜುಣಗಿ, ಲಕ್ಷ್ಮಣ್ ಭೋವಿ, ರಾಜು ಜೇ ಗುತ್ತೇದಾರ,ಬಾಬುಮಿಯ ಪುಲಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸೈಫನ್ ಮುಲ್ಲಾ
