ಕಾಳಗಿ : ತಾಲೂಕಿನ ಕಾಳಗಿ ಹಾಗೂ ಕೊಡ್ಲಿ ರಸ್ತೆಯ ಮಾರ್ಗದಲ್ಲಿ ರಸ್ತೆ ಮೇಲೆ ಯುವಕ ನೊಬ್ಬನು ತಡೆದು ಪೊಲೀಸರಂತೆ ನಟನೆ ಮಾಡಿ ಬೇರೆಡೆ ಗಮನ ಸೆಳೆದು ಆಭರಣ ಕಳ್ಳತನ ಮಾಡಿದ ಪ್ರಕರಣ ಹಾಗೂ ಮಹಿಳೆ ಜೊತೆ ಫೋನಿನಲ್ಲಿ ಸಂಪರ್ಕ ಇದೆ ಎಂದು ಹೆದರಿಸಿ ಅಪಹರಣ ಮಾಡಿ ಕೊಲೆ ಮಾಡುವದಾಗಿ ಬೆದರಿಕೆ ಹಾಕಿ ಬಂಗಾರದ ಆಭರಣ ಕಸಿದಿಕೊಂಡ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು ಆರೋಪಿಯನ್ನು ಬಂಧಿಸಿ ಆಭರಣವನ್ನು ವಶಪಡಿಸಿಕೊಂಡಿದ್ದಾರೆ,
ಕಾಳಗಿ ಕೊಡ್ಲಿ ಮದ್ಯ ಪೊಲೀಸರಂತೆ ನಟನೆ ಮಾಡಿ ಯುವಕನ ಮೈಮೇಲೆ ಇದ್ದ 21ಗ್ರಾಂ ಬಂಗಾರದ ಆಭರಣ ಬಿಚ್ಚಿಸಿ ಪೇಪರ್ ಕವರನಲ್ಲಿ ಹಾಕಿದಂತೆ ಮಾಡಿ ಕಲ್ಲು ತುಂಬಿದ ಪೇಪರ್ ಕವರ್ ನೀಡಿ ಬಂಗಾರದ ಆಭರಣ ವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ ಘಟನೆ ಕುರಿತು ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿತರನ್ನು ಕೃತ್ಯದಲ್ಲಿ ಭಾಗಿ ಇದ್ದಾರೆಂದು ತಿಳಿಸಿದ್ದಾರೆ,
ಬಿದರಿನ ಎಂ.ಡಿ ಅಲಿ, ಎಂ.ಡಿ ಜಾವಿದ್ ಜಪರ್ ಎನ್ನುವರನ್ನ ಬಂಧಿಸಿ 5ಗ್ರಾಂ ಬಂಗಾರ ಉಂಗುರ 20ಗ್ರಾಂ ಬಂಗಾರದ ಚೈನ್ ವಶಪಡಿಸಿಲಾಗಿದೆ. ಇನ್ನೊಬ್ಬ ಆರೋಪ ಗುಲಾಂ ಅಬ್ಬಾಸ ಬಂಧನಕ್ಕೆ ಜಾಲ ಬಿಸಲಾಗಿದೆ ಇನ್ನೊಂದು ಬಂದನಕ್ಕೆ ಪ್ರಕರಣ ಕೊಡದೂರ್ ಗ್ರಾಮದ ಯುವಕನಿಗೆ ಮಹಿಳೆ ಜೊತೆ ಪೋನಿನಲ್ಲಿ ಸಂಪರ್ಕ ಇದೆ ಎಂದು ಹೆದರಿಸಿ ಅಪಹರಣ ಮಾಡಿ ಚಾಕುವಿನಿಂದ ಕೊಲೆ ಮಾಡುವದಾಗಿ ಬೆದರಿಕೆ ಹಾಕಿ 25 ಗ್ರಾಂ ಬಂಗಾರದ ಆಭರಣವನ್ನು ಕಸಿದುಕೊಂಡು ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಎಂ.ಡಿ ಮುಸ್ತಫಾ ಶರ್ಪ್ಯೋದ್ದಿನಿ ಮಂಗಲಗಿ ಎಂ.ಡಿ ಹರೀಶ್ ಕಲಬುರಗಿ ನಿಜಾಮೊದ್ದಿನ್ ಅಹಮದಸಾಬ್ ಪಟೇಲ್ ಕಲಬುರ್ಗಿ ಸೈಯದ್ ಇಬ್ರಾಹಿಂ ತಂದೆ ಸೈಯದ್ ವಜಿರ್ ಆರೋಪಗಳನ್ನು ಬಂಧಿಸಿ 25ಗ್ರಾಂ ಬಂಗಾರದ ಆಭರಣಗನ್ನು ಒಂದು ಸ್ಕಾರ್ಪಿಯೋ ಜೀಪ್, 11ಸಾವಿರ ರೂ ನಗದು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ,
ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರ್ ಶ್ರೀನಿವಾಸಲು, ಪೊಲೀಸ್ ಅಧೀಕ್ಷಕ ಮಹೇಶ್ ಮಘಣ್ಣನವರ್, ಶಹಾಬಾದ ಡಿ ವೈ.ಎಸ್.ಪಿ ಶಂಕರ್ ಗೌಡ ಪಾಟೀಲ್ ಸಿಪಿಐ ಜಗದೇವಪ್ಪ ಪಾಳ ಕಾಳಗಿ ಪಿಎಸ್ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ ಸಿಬ್ಬಂದಿಗಳಾದ, ಮಂಜುನಾಥ್, ಸಂಗಮೇಶ, ಮೌನೇಶ,ಅಂಬರೀಷ್, ಮಂಜುನಾಥ್,ಶಿವರಾಜ್, ಬಲರಾಮ ಪೊಲೀಸರ ತಂಡ ಕಾರ್ಯಾಚರಣೆ ಕೈಗೊಂಡಿತ್ತು.
ವರದಿ : ರಮೇಶ್ ಎಸ್ ಕುಡಹಳ್ಳಿ