ಚಿಂಚೋಳಿ ಚಂದಾಪುರ ಪಟ್ಟಣದ ತಾಲೂಕು ಪಂಚಾಯತ್ ಕಾರ್ಯಲಯದ ಮುಂದುಗಡೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷಕುಮಾರ ಚವ್ಹಾಣ ರವರ ನೇತೃತ್ವದಲ್ಲಿ ಉನ್ನತ ಅಧಿಕಾರಿಗಳ ಆದೇಶದಂತೆ”ಸ್ವಚ್ಚತೆಯೇ ಸೇವೆ 2025″ ಕಾರ್ಯಕ್ರಮ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರತಿಯೊಬ್ಬರು ತಮ್ಮ ಇಲಾಖೆಯ ಕಾರ್ಯಾಲಯವನ್ನು ಪ್ರತಿ ನಿತ್ಯ ಸ್ವಚ್ಛವಾಗಿಟ್ಟುಕೊಂಡರೆ ಸ್ವಚ್ಛತೆಯ ವಾತಾವರಣದಲ್ಲಿ ಉತ್ತಮವಾಗಿ ಕೆಲಸ ಮಾಡಲು ಸ್ಪೂರ್ತಿ ದೊರೆಯುತ್ತದೆ, ಮಹಾತ್ಮ ಗಾಂಧೀಜಿಯವರು ಕನಸು ಕಂಡಂತೆ ಸ್ವಚ್ಛ ಭಾರತ ಮಾಡಲು ಪಣ ತೊಡಬೇಕು ಎಂದು ಹೇಳಿದರು.
ನಂತರದಲ್ಲಿ ತಾಲೂಕು ಪಂಚಾಯಿತಿ ಕಾರ್ಯಾಲಯದ ಆವರಣ, ಅದರ ಸುತ್ತಮುತ್ತ ಸ್ಥಳ ಹಾಗೂ ಶಾಸಕರ ಭವನದ ಎದುರುಗಡೆಯ ಸ್ಥಳ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು,ಅಕ್ಷರ ದಾಸೋಹದ ಸಿಬ್ಬಂದಿ, ವಿವಿದ ಗ್ರಾಮ ಪಂಚಾಯಿತಿಗಳ ಅದ್ಯಕ್ಷರುಗಳು,,ಪಂಚಾಯತ ಅಭಿವೃದ್ಧಿ ಅಧಿಕಾರಿಗಳು,ಕಾರ್ಯದರ್ಶಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿ,, ಗ್ರಾಮ ಪಂಚಾಯಿತಿಗಳ ಸ್ವಚ್ಚತಾಗಾರರು ಉಪಸ್ಥಿತರಿದ್ದರು.
ವರದಿ : ರಾಜೇಂದ್ರ ಪ್ರಸಾದ್