ರಟಕಲ ಗ್ರಾಮದ ಅಂಭಾ ಭವಾನಿ ದೇವಸ್ಥಾನದಲ್ಲಿ 41 ವರ್ಷದ ಘಟದ ಸ್ಥಾಪನೆ

ಕಾಳಗಿ: ತಾಲೂಕಿನ ರಟಕಲ ಗ್ರಾಮದ ಭವಾನಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 41 ವರ್ಷದ ದೇವಿಯ ಘಟಸ್ಥಾಪನೆ ದಿ.22. 09.2025 ಸೋಮವಾರ ಸಾ. 06 ಗಂ. ದೇವಿಯ 09 ದಿನಗಳ ವಿಶೇಷ ಪೂಜೆ ಮತ್ತು ಮಹಾಭಿಷೇಕ ಹಾಗೂ ನಿತ್ಯ ಅನ್ನ ದಾಸೋಹ ಗ್ರಾಮದ ಭಕ್ತರಿಂದ. ಕಾರ್ಯಕ್ರಮ 1. 10. 2025 ರಂದು 9ನೇ ದಿನದ ಮಹಾನಮಿ 10ನೇ ದಿನ ಸಾಯಂಕಾಲ 5 ಗಂ. ತೊಟ್ಟಿಲು ಕಾರ್ಯಕ್ರಮ ಹಾಗೂ 02/ 10 /2025 ವಿಜಯದಶಮಿ ವಿಶೇಷ ಪೂಜೆ ಹಾಗೂ ಗ್ರಾಮದ ಪ್ರಮುಖ ಬೀದಿಯಲ್ಲಿ ಡೊಳ್ಳು, ಬಾಜಾ ಬಜಂತ್ರಿ,ವೀರಗಾಸೆ, ಭಜನೆ, ಮಕ್ಕಳಿಂದ ಕೋಲಾಟ, ಸಾಂಸ್ಕೃತಿಕ, ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟಿನ ಅಧ್ಯಕ್ಷರಾದ ಮಾನಶೆಟ್ಟಿ ಸಿಗಿ ಮತ್ತು ಅಂಬಾಭವಾನಿ ಸದ್ಭಕ್ತ ಮಂಡಳಿಯ ಸರ್ವ ಸದಸ್ಯರು ಮತ್ತು ವೀರಣ್ಣ ಗಂಗಾಣಿ ರೈತ ಸೇನೆ ತಾಲೂಕ ಅಧ್ಯಕ್ಷರು ತಿಳಿಸಿದ್ದಾರೆ.

ವರದಿ : ರಮೇಶ್ ಎಸ್ ಕುಡಹಳ್ಳಿ ಕಾಳಗಿ

error: Content is protected !!