ಚಿಂಚೋಳಿ : ತಾಲೂಕಿನ ಕಲ್ಲೂರ ಗ್ರಾಮದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಹಳ್ಳ ಕೊಳ್ಳಗಳು ಹರಿಯುತ್ತಿದ್ದು ಕಲ್ಲು ಗಣಿಗಾರಿಕೆ ಹಾಗೂ ಗಣಿಗಾರಿಕೆಯ ಮಷೀನ್ ಗಳು ನೀರಲ್ಲಿ ಮುಳುಗಡೆ ಗೊಂಡಿದ್ದು ವಿದ್ಯುತ್ ಪವರ್ ಗಳಿಂದ ಆಗುವ ದೊಡ್ಡ ಅನಾಹುತವನ್ನು ತಪ್ಪಿಸಲು ಶ್ರೀಶೈಲ್ ಮಾನೆ ಪವರ್ ಮ್ಯಾನ್ ಚಿಂಚೋಳಿ ಅವರು ತಮ್ಮ ಜೀವದ ಹಂಗು ತೊರೆದು ನೀರಿನಲ್ಲಿ ಇಳಿದು ಪವರ್ ಕಟ್ ಮಾಡಿ ಮುಂದೆ ಆಗುವಂತ ದೊಡ್ಡ ಅನಾಹುತಗಳನ್ನು ತಪ್ಪಿಸಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.