ಈ ಸಂದರ್ಭದಲ್ಲಿ ಸಮುದಾಯದ ಪರವಾಗಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ಒಳಗೊಂಡಂತೆ ಮತ್ತೆ ಸಮುದಾಯಕ್ಕೆ ಮಲತಾಯಿ ಧೋರಣೆ ಮಾಡಲು ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ನಡೆಯನ್ನು ಖಂಡಿಸಿ ಸಭೆಯಲ್ಲಿ ಚರ್ಚೆ ನಡೆಯಿತು ಅದೇ ಸಮಯದಲ್ಲಿ ಸಭೆಯನ್ನು ಅರ್ಧಕ್ಕೆ ಮುಟುಕು ಗೊಳಿಸಿ ನಮ್ಮ ಸಮುದಾಯದ ಪರವಾಗಿ ರಾಜ್ಯ ಸರ್ಕಾರಕ್ಕೆ ಸಮಸ್ಯೆಗಳನ್ನು ಸಂದೇಶದ ಮಖಾಂತಾರ ಕಳುಹಿಸಿ ಕೋಡಿ ಎಂದು ಮಾನ್ಯ ತಹಸೀಲ್ದಾರ್ ಸಾಹೇಬರ ಬಳಿ ಹೇಳಿ ಸಭೆಯನ್ನು ಎಲ್ಲಾ ಮುಖಂಡರು ಹಾಗೂ ಬೆಂಬಲಿಗರು ಹೊರಗಡೆ ನಡೆಯಲು ಪ್ರಾರಂಭಿಸಿದರು.
ಅದೇ ವೇಳೆಯಲ್ಲಿ ತಹಸಿಲ್ದಾರ್ ಅವರು ಬಂದು
ಮುಖಂಡರನ್ನು ಮನವೊಲಿಸಿ ತಡೆದರು ಮತ್ತು ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೆವೆ ಎಂದು ಭರವಸೆ ನೀಡಿದರು,
ಇದೇ ಸಂದರ್ಭದಲ್ಲಿ ಅಥಣಿ ತಾಲೂಕಿನ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಬಾಬು ಹುಲ್ಯಾಳ, ಶ್ರೀಮಂತ ನಡವಿನಮನಿ, ಲಕ್ಕಪ್ಪ ನಾಯಕ್, ಹಣಮಂತ ಚಿಗರಿ,ಹಾಗೂ ಹಲವು ಸಂಘಟನೆಯ ಮುಂಖಂಡರು ಉಪಸ್ಥಿತರಿದ್ದರು.
ವರದಿ ಭರತೇಶ ನಿಡೋಣಿ