ಪರಿಶಿಷ್ಟ ಜಾತಿ ಬಲ ಸಮುದಾಯದವರು ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ಬರೆಸಿ ರೇವಣಸಿದ್ಧ ಸುಬೇದಾರ

ಚಿಂಚೋಳಿ ಪಟ್ಟಣದ ಹೊರವಲಯದಲ್ಲಿರುವ ಪ್ರವಾಸಿ ಮಂದಿರದಲ್ಲಿ ಬೌದ್ಧ ದಾಖಲಾತಿ ಆಂದೋಲನ ಕುರಿತು ಸುಧಿರ್ಘವಾಗಿ ಚರ್ಚಿಸಿ, ಕಾಲಂ 8 ರಲ್ಲಿ ಧರ್ಮ ಎಂಬಲ್ಲಿ ಬೌದ್ಧ ಧರ್ಮ ಎಂದು ಬರೆಸಿ, ಕಾಲಂ 9 ರಲ್ಲಿ ಜಾತಿ ಯಂದಲ್ಲಿ ಪರಿಶಿಷ್ಟ ಜಾತಿ ಹೊಲೆಯ, ಚಲವಾದಿ ಕಾಲಂ 10 ರಲ್ಲಿ ಉಪಜಾತಿ ಹೊಲೆಯ ಎಂದು ಬೌದ್ಧ ದಾಖಲಾತಿ ಮಾಡಬೇಕು ಹಾಗೂ ಸಮಾಜದ ಒಳಿತಿಗಾಗಿ ತಾಲೂಕ ಬಲ ಸಮಾಜದ ಸಂಚಾಲಕರಾದ ರೇವಣಸಿದ್ದ ಸುಬೆದಾರ ಹೇಳಿದರು.
ಈ ಸಂದರ್ಭದಲ್ಲಿ ರಮೇಶ ಯಾಕಾಪುರ, ಸುರೇಶ ಕಾನೆ ಕರ,ಬಿ. ರುದ್ರಮುನಿ, ಜಗನ್ನಾಥ ನಂದಾ,, ಅಮರ ಲೋಡನೂರ, ರಮೇಶ ಕುಸುರಂಪಳ್ಳಿ ವಾಮನ್ ರಾವ ಕೊರವಿ, ಸೂರ್ಯಕಾಂತ, ಸುನಿಲ್ ತ್ರಿಪಾಠಿ, ರಾಜು ಕಳಸ್ಕರ್, ರಾಮಲಿಂಗಪ್ಪ, ಸಂಜೀವ ಗಾರಂಪಳ್ಳಿ, ಜಗನ್ನಾಥ ಗಂಜಗಿರಿ, ಮಾರುತಿ, ರಾಜು ಹೊಸಮನಿ, ರಾಜಶೇಖರ ಪಾಟೀಲ, ರುದ್ರಮುನಿ, ಇನ್ನೂ ಬಲ ಸಮುದಾಯ ಮುಖಂಡರು ಉಪಸ್ಥಿತರಿದ್ದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!