ಗುರು ಹಿರಿಯರ ಸೇವೆ ಮಾಡಿ : ತಾಯಿ ಲಲಿತಾ ಮಠ

ಬಸವಕಲ್ಯಾಣ : ನಗರದ ಮೋರಖಂಡಿ ಗ್ರಾಮದ ಹೋರ ವಲಯದಲ್ಲಿ ಭಾನುವಾರ ಶ್ರೀ ಸಾಯಿ ಮಂದಿರ ಟ್ರಸ್ಟ್ ನ 9ನೇ ವಾರ್ಷಿಕ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಕಾರ್ಯಕ್ರಮದಲ್ಲಿ ಸಸ್ತಾಪೂರ ನ ಪೂಜ್ಯ ಶ್ರೀ ಸದಾನಂದ ಸ್ವಾಮಿ, ಹೊನ್ನಲಿಂಗಮಹಾಸ್ವಾಮಿ, ತಾಯಿ ಪ್ರಭಾವತಿ, ಮಾಜಿ ವಿಧಾನ ಪರಿಷತ್ ಸದಸ್ಯ ವಿಜಯ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೂಜ್ಯ ತಾಯಿ ಲಲಿತಾ ಮಠ ಅವರು ಹಿರಿಯರ ಆದರ್ಶಗಳು ಇಂದಿನ ಪೀಳಿಗೆಗೆ ಮಾದರಿಯಾಗಬೇಕು. ಹಾಗೆಯೇ ಇಂದಿನ ಪೀಳಿಗೆ, ಮುಂದಿನ ಜನಾಂಗಕ್ಕೆ ಮಾದರಿಯಾಗುವಂತೆ ಬಾಳಬೇಕು. ಈ ನಿಟ್ಟಿನಲ್ಲಿ ಸಂಸ್ಕಾರ ಅಗತ್ಯ. ಎಳವೆಯಿಂದಲೇ ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಹಿರಿಯರು ಮಾಡಬೇಕು ಎಂದರು. ನಮ್ಮ ನಿತ್ಯದ ಜೀವನದಲ್ಲಿ ಕಾಯಕವು ಅತ್ಯಂತ ಮಹತ್ವ. ಇಂದು ನಮ್ಮ ಧರ್ಮ, ನಂಬಿಕೆಗಳು ಹಾಗೂ ಸಿದ್ಧಾಂತಗಳ ಬಗ್ಗೆ ಬೇರೆಯವರಲ್ಲಿ ಮಾತನಾಡಲು ಸಂಕೋಚಪಡುತ್ತಿದ್ದೇವೆ. ಇದು ಆಗಬಾರದು. ನಮ್ಮ ಧರ್ಮ ಶ್ರದ್ಧೆಗಳ ಬಗ್ಗೆ ನಮಗೇ ಅಭಿಮಾನವಿಲ್ಲದಿದ್ದರೆ ಮುಂದಿನ ಪೀಳಿಗೆ ಇವುಗಳನ್ನು ಹೇಗೆ ಸಾಧ್ಯವಾಗುತ್ತದೆ ಎಂದರು. ಸತತ
9 ವರ್ಷಗಳಿಂದ ಮೋರಖಂಡಿ ಗ್ರಾಮದಲ್ಲಿ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಅನ್ನದಾಸೋಹ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಾರ್ಷಿಕ ಮಹೋತ್ಸವ ಹಮ್ಮಿಕೊಳ್ಳಲಾಗಿದ್ದು ಎಲ್ಲವೂ ಭಕ್ತರ ಸಹಕಾರದಿಂದ ಮಾತ್ರ ಸಾಧ್ಯವಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಗಾಯನ, ನೃತ್ಯ, ಭಜನಾ, ಕೋಲಾಟ ಹಾಗೂ ಶ್ರೀ ಸಾಯಿಬಾಬಾ ಅವರ ಜೀವನ ಚರಿತ್ರೆಯ ನಾಟಕ ಪ್ರದರ್ಶನ ಕೂಡ ಜರುಗಿತು. ಭಜನಾ ಮಂಡಳಿ ಹಾಗೂ ಕೋಲಾಟದಲ್ಲಿ ಪಾಲ್ಗೊಂಡ ಸದಸ್ಯರಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದರು. ಈ ವೇಳೆ ಪ್ರಮುಖರಾದ ಪೋಪಟ್ ಜಮಾದಾರ, ಸುಶೀಲ್ ಮೇತ್ರೆ, ಮಹಾದೇವ ಖಂಡಾಳೆ, ದೀಪಕ್ ಗುಣತರೆ, ಶಾಂತವೀರ ಸ್ವಾಮಿ, ಅರ್ಜುನ್ ಸಿಂಗ್ ರಾಜಪುತ ಸೇರಿಂದರೆ ಅನೇಕರು ಉಪಸ್ಥಿತರಿದ್ದರು.

error: Content is protected !!