ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಅಬ್ದುಲಪೀರಾ ರಜಾಕಸಾಬ ಜಮಖಂಡಿ ನೇಮಕ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ರವರು, ಜಿ.ಸಿ. ಚಂದ್ರಶೇಖರ್ ರವರು ಸಂಸದರು ಹಾಗೂ ಕಾರ್ಯಾಧ್ಯಕ್ಷರು, ಕೆ.ಪಿ.ಸಿ.ಸಿ ಅಬ್ದುಲ್ ಹಮೀದ ಮುಶರಿಫ, ಸದಸ್ಯರು ಕೆ.ಪಿ.ಸಿ.ಸಿ. ಇವರ ಆದೇಶದ ಮೇರೆಗೆ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ (ಐ.ಎನ್.ಟಿ.ಯು.ಸಿ) ಕಾಂಗ್ರೆಸ್ ವಿಭಾಗದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಅಬ್ದುಲಪೀರಾ ರಜಾಕಸಾಬ ಜಮಖಂಡಿ, ಸಾ।। ಹೋರ್ತಿ ಪ್ಲಾಟ, ರಹೀಮನಗರ, ವಿಜಯಪುರ ರವರನ್ನು ನೇಮಕ ಮಾಡಲಾಗಿದೆ.

ಅಧಿಕಾರವನ್ನು ವಹಿಸಿಕೊಂಡು ಜಿಲ್ಲಾ ಮತ್ತು ತಾಲ್ಲೂಕುವಾರು ಇಂಟಕ್ ಪರವಾಗಿ ಸಂಘಗಳನ್ನು ರಚಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರುಗಳನ್ನು ನೊಂದಾಯಿಸಿ ಪಕ್ಷದ ಮುಖಂಡರ ಮಾರ್ಗದರ್ಶನ ಹಾಗೂ ಸ್ಥಳೀಯ ನಾಯಕರುಗಳ ಸಹಕಾರದೊಂದಿಗೆ ನೀಡಲಾಗಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಪಕ್ಷದ ಸಂಘಟನೆಗೆ ಶ್ರಮಿಸುವಂತೆ ಸೂಚಿಸಲಾಗಿದೆ.

ವರದಿ : ಅಜಿಜ್ ಪಠಣ

error: Content is protected !!