ಕೆಲಸಕ್ಕೆ ಬಾರದ ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆ ರಾಮರೆಡ್ಡಿ ಪಾಟೀಲ

ಚಿಂಚೋಳಿ : ಪಟ್ಟಣದ ಹೊರವಲಯದಲ್ಲಿರುವ
ಸಿದ್ಧಸಿರಿ ಎಥನಾಲ್ ಪವರ್ ಲಿಮಿಟೆಡ್ ಕಂಪನಿಯ ಎದುರುಗಡೆ ನಡೆಸಿದಂತ ಕರ್ನಾಟಕ ರೈತ ಪ್ರಾಂತ ಸಂಘ ಹಾಗೂ ತಾಲುಕ ರೈತ ಹಿತ ರಕ್ಷಣಾ ಸಮಿತಿ ಕಾಂಗ್ರೆಸ್ ಪ್ರಾಯೋಜಿತ ಪ್ರತಿಭಟನೆ ನಿರಾಧಾರವಾಗಿದ್ದು ರೈತರ ನೆರವಿಗೆ ಇರಬೇಕಾಗಿದ್ದಂತ ಕಾಂಗ್ರೆಸ್ ಪಕ್ಷದ ಮುಖಂಡರು ತಾಲೂಕಿನ ರೈತರು ಭಾಗಿಯಾಗದೆ ಇರುವುದು ಕಾಂಗ್ರೆಸ್ ಮುಖಂಡರ ಮುಖವಾಡ ಬಯಲಾಗಿದೆ.
ಕಾಂಗ್ರೆಸ್ ಮುಖಂಡರೇ ಕಳೆದ ಬಾರಿ ನಮ್ಮ ಸಿದ್ಧ ಸಿರಿ ಎಥನಾಲ್ ಪವರ್ ಲಿಮಿಟೆಡ್ ಕಂಪನಿ ಮುಚ್ಚಿದಾಗ ತಾವು ತೋರಿದಂತಹ ‘ತೋರಿಕೆಯ’ ಕಾಳಜಿ ರೈತರ ಕಬ್ಬು ಬೇರೆ ಕಡೆ ಕಾರ್ಖಾನೆ ಕಡೆ ಕಳುಹಿಸಿ ಸುಮಾರು 6 ರಿಂದ 8 ತಿಂಗಳು ನಮ್ಮ ರೈತರು ಕಬ್ಬಿನ ಹಣಕ್ಕಾಗಿ ಹಲವಾರು ಬಾರಿ ಅಲೆದಾಡಿಸಿ ಮನವಿ ಪತ್ರ, ಪ್ರತಿಭಟನೆ, ಮಾಡಿದ್ದು ಜನತೆ ಇನ್ನೂ ಮರೆತಿಲ್ಲಾ! ತಾಲೂಕಿನಲ್ಲಿ ಕಾಂಗ್ರೆಸ್ ಮುಖಂಡರು ಇದ್ದು ಇಲ್ಲದಂತಾಗಿದ್ದು ಮುಂಬರುವಂತಹ ಸ್ಥಳೀಯ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಡೋಂಗಿತನದ ಪ್ರತಿಭಟನೆ ಮಾಡುತ್ತಿರುವುದು ರೈತರು ಹಾಗೂ ತಾಲೂಕಿನ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಕರ್ನಾಟಕ ಇತಿಹಾಸದಲ್ಲಿಯೇ ರೈತರಿಗೋಸ್ಕರ ನೇರವಾಗಿ ಕಬ್ಬಿನ ಹಣವನ್ನು ಅವರ ಖಾತೆಗೆ 15 ದಿನದ ಒಳಗಾಗಿ ಜಮಾ ಮಾಡಿದ್ದು ಇದೇ
ಸಿದ್ದ ಸಿರಿ ಪವರ್ ಲಿಮಿಟೆಡ್ ಕಂಪನಿಯ ಮಾಲಕರು, ಈ ರೀತಿ ಹಣ ಹಾಕಿದ್ದರಿಂದಲೇ ಹಲವಾರು ಕಂಪನಿಯ ಮಾಲೀಕರಿಗೆ ಮುಳ್ಳು ಚುಚ್ಚಿದಂತೆ ಆಗಿದ್ದು, ಈಗಲೂ ಕೂಡ ರೈತರು ಅತಿವೃಷ್ಟಿಯಿಂದ ತುಂಬಾ ಹಾನಿಯಾಗಿ ನೊಂದಿದ್ದು ಅವರ ಆರ್ಥಿಕ ಸ್ಥಿತಿಯನ್ನು ಸ್ವಲ್ಪ ಸುಧಾರಣೆ ಮಾಡಲು ಅವರು 15 ದಿನದ ಒಳಗಾಗಿ ಪ್ರಥಮ ಕಂತಿನಂತೆ 2500 ಜಮಾ ಮಾಡಿದ್ದಾರೆ, ಉಳಿದ ಹಣವನ್ನು 2ನೇ ಕಂತಿನಲ್ಲಿ ರೈತರಿಗೆ ನೇರವಾಗಿ ಅವರ ಖಾತೆಗೆ ಜಮಾ ಮಾಡುತ್ತಾರೆ, ಅದು ರೈತರಿಗೂ ಕೂಡ ಗೊತ್ತಿದ್ದು ಇದರ ಬಗ್ಗೆ ಯಾವುದೇ ಸಂಶಯವಿಲ್ಲ! ಇದು ಕೂಡ ಕೆಲವೊಂದು ಕಂಪನಿಯ ಮಾಲೀಕರಿಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ? ತಾಲೂಕಿನ ರೈತರ ಬೆನ್ನೆಲುಬಾಗಿ ನಿಂತಿರುವ ಸಿದ್ಧ ಸಿರಿ ಎಥೆನಾಲ್ ಪವರ್ ಲಿಮಿಟೆಡ್ ಮಾಲೀಕರಾದ ಬಸವನಗೌಡ ಪಾಟೀಲ ಯತ್ನಾಳ ರೈತರಿಗೆ ಯಾವತ್ತೂ ಕೂಡ ದ್ರೋಹ ಬಗೆಯುವುದಿಲ್ಲ ಅಂತಹ ಯೋಚನೆ ಕೂಡ ಅವರು ಮಾಡುವುದಿಲ್ಲ ಎಂಬುದು ತಾಲೂಕಿನ ರೈತರಿಗೆ ಅಲ್ಲದೆ ಕರ್ನಾಟಕ ಜನತೆಗೂ ಕೂಡ ಗೊತ್ತಿರುವಂತಹ ವಿಷಯ ಇದು ನೂರಕ್ಕೆ ನೂರಷ್ಟು ಸತ್ಯವಾದಂತ ಮಾತು ಕೂಡ ಹೌದು. ಕಾಂಗ್ರೆಸ್ ಮುಖಂಡರೇ ತಾವು ಹೇಳುತ್ತಿರುವಂತೆ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಈಗಾಗಲೇ ನೂರಾರು ಸಂಖ್ಯೆಯಲ್ಲಿ ಕೊಟ್ಟಿದ್ದಾರೆ ತಮ್ಮಗೆ ನಂಬಿಕೆ ಇಲ್ಲದಿದ್ದರೆ ಕಂಪನಿಯ ಒಳಗಡೆ ಹೋಗಿ ತಾಲೂಕಿನ ಯುವಕರು ಕೆಲಸ ಮಾಡುತ್ತಿರುವುದು ಕಣ್ಣಾರೆ ಕಾಣಬಹುದು, ಹಾಗೂ ತಾವು ಕಣ್ಣಾರೆ ಕಂಡು ತಮ್ಮ ಕಣ್ಣನ್ನು ಪಾವನ ಗೊಳಿಸಕೊಳ್ಳಬಹುದು ಬಸವನ ಗೌಡ ಪಾಟೀಲ ಯತ್ನಾಳ ಅವರು ತಾಲೂಕಿಗೆ ಒಂದು ಆಶಾಕಿರಣದಂತೆ ಬಂದಿದ್ದು ಇಲ್ಲಿ ಸ್ಥಳೀಯವಾಗಿ ಯುವಕರಿಗೆ ಉದ್ಯೋಗ ವ್ಯಾಪಾರ ವಹಿವಾಟ್ಟಿಗೆ ಅವಕಾಶ ತಾಲೂಕಿನ ಅಭಿವೃದ್ಧಿ ಆಗುತ್ತಿರುವುದು ಕಾಂಗ್ರೆಸ್ ಮುಖಂಡರಿಗೆ ಸಹಿಸುವುದು ಆಗುತ್ತಿಲ್ಲ ಅವರ ಹಿಂಬಾಲಕರೇ ಕೆಲಸಕ್ಕಾಗಿ ಅಲೆದಾಡುತ್ತಿದ್ದು ಅಂಥವರನ್ನು ಕೂಡ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವುದು ಕಾಣಬಹುದು ಇದು ಸತ್ಯ ಎಂಬುದು ಜನರಿಗೆ ಗೊತ್ತು ಆಗಿದ್ದು, ತಾವು ಮಾಡುತ್ತಿರುವ ಡೋಂಗಿತನದ ಪ್ರತಿಭಟನೆ ಜನರ ಕಣ್ಣು ಮುಂದೆ ಇದೆ ತಮಗೆ ಜನ ಮುಂದೆ ತಕ್ಕ ಪಾಠ ಕಲಿಸುತ್ತಾರೆ ಮುಂದಿನ ದಿನಗಳಲ್ಲಿ ಕಾಣಬಹುದು. ಈಗಲಾದರೂ ‘ಹಗಲು ಕನಸಿನಿಂದ ಎದ್ದು’ ನಿಜವಾಗಿ ತಾಲೂಕಿಗೆ ಯಾವ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು ಎಂದು ಅದರ ಕಡೆ ಗಮನ ಹರಿಸಿ ತಾಲೂಕಿನ
ಸರ್ವಾಂಗಿಣ ಅಭಿವೃದ್ಧಿಗೆ ಪಣತೊಟ್ಟು ಕೈಜೋಡಿಸಿ ನಿಲ್ಲಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ರಾಮರೆಡ್ಡಿ ಪಾಟೀಲ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ವರದಿ : ರಾಜೇಂದ್ರ ಪ್ರಸಾದ್

error: Content is protected !!