ಟಿ.ಎ.ಪಿ.ಸಿ.ಎಂ.ಎಸ್ ಚುನಾವಣೆಗೆ ಸಲ್ಲಿಸಿದ ನಾಮಪತ್ರ ಹಿಂಪಡೆದ ಹಸಿರು ಸೇನೆ ಸಂಘದ ಹಿತಕ್ಕಾಗಿ ಒಗ್ಗಟ್ಟಿನ ನಿರ್ಧಾರ

ಗುಡಿಬಂಡೆ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ಸಂಘದ ಚುನಾವಣೆ ಕುರಿತು ಮಹತ್ವದ ಪತ್ರಿಕಾ ಗೋಷ್ಠಿ ನಡೆಯಿತು. ಸಂಘದ ಇಂದಿನ ಆರ್ಥಿಕ ಪರಿಸ್ಥಿತಿ, ಚುನಾವಣೆ ಅಗತ್ಯತೆ ಮತ್ತು ಸಂಘದ ಭವಿಷ್ಯ ಕುರಿತು ನಡೆದ ಚರ್ಚೆಗಳು ಕಾರ್ಯಕ್ರಮದ ಕೇಂದ್ರಬಿಂದು ಆಗಿದ್ದವು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆದಿರೆಡ್ಡಿ ಅವರು, ಟಿ.ಎ.ಪಿ.ಸಿ.ಎಂ.ಎಸ್ ಸಂಘ ಕಳೆದ ಕೆಲವು ವರ್ಷಗಳಿಂದ ಆರ್ಥಿಕವಾಗಿ ದುರ್ಬಲಗೊಂಡಿದೆ “ಸಂಘ ಈಗಲೇ ದಿವಾಳಿ ಸ್ಥಿತಿಗೆ ತಲುಪಿದೆ. ಈಗ ಚುನಾವಣೆಯನ್ನು ನಡೆಸುವುದರಿಂದ ಲಕ್ಷಾಂತರ ರೂ. ವೆಚ್ಚವಾಗುವುದಲ್ಲದೆ, ಸಂಘದ ಮೇಲೆ ಮತ್ತಷ್ಟು ಆರ್ಥಿಕ ಭಾರ ಬೀಳುತ್ತದೆ. ಅದೇ ಹಣವನ್ನು ಸಂಘದ ಪುನಶ್ಚೇತನಕ್ಕೆ ಬಳಸಿದರೆ ಸದಸ್ಯರಿಗೆ ಲಾಭವಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದಿನ ಸಭೆಯಲ್ಲಿ ಚುನಾವಣೆಯನ್ನು ರದ್ದುಪಡಿಸಿ, ಪರಸ್ಪರ ಒಗ್ಗಟ್ಟಿನಿಂದ ಒಬ್ಬರನ್ನೇ ಆಯ್ಕೆ ಮಾಡುವ ಸಲಹೆಯನ್ನು ಕೆಲವು ಸದಸ್ಯರು ಬೆಂಬಲಿಸಿದರೆ, ಕೆಲವರು ವಿರೋಧ ವ್ಯಕ್ತಪಡಿಸಿದ ಪರಿಣಾಮ ಚುನಾವಣೆಯ ಪ್ರಕ್ರಿಯೆ ಮುಂದುವರಿದಿರುವುದಾಗಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣದ ತಾಲೂಕು ಅಧ್ಯಕ್ಷರಾದ ಕೆ. ನಾರಾಯಣಸ್ವಾಮಿ ಮಾತನಾಡಿ ತಮ್ಮ ನಾಮಪತ್ರ ಹಿಂಪಡೆಯುವುದಾಗಿ ಘೋಷಿಸಿ ಮತ್ತು
ನಾವು ಸಂಘದ ಹಿತದೃಷ್ಟಿಯಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದೆವು. ಆದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸಮಾಲೋಚನೆ ನಡೆಸಿ ಸಂಘ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬಾರದೆಂದು ನಾಮಪತ್ರ ಹಿಂಪಡೆಯಲು ಮನವಿ ಮಾಡಿದಾಗ, ಸಂಘದ ಒಗ್ಗಟ್ಟನ್ನು ಕಾಪಾಡುವ ದೃಷ್ಟಿಯಿಂದ ನಾವು ಹಿಂದೆ ಸರಿದಿದ್ದೇವೆ” ಎಂದು ವಿವರಿಸಿದರು.
ಹಾಗೂ ಹಸಿರು ಸೇನೆ ಸಂಘದ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದರು

ಈ ಪತ್ರಿಕಾ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆದಿರೆಡ್ಡಿ, ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣ . ತಾಲ್ಲೂಕು ಅಧ್ಯಕ್ಷರು ಕೆ. ನಾರಾಯಣಸ್ವಾಮಿ, ಕಾರ್ಯದರ್ಶಿ ಜಿ. ವಿ. ವೆಂಕಟೇಶಪ್ಪ, ಈಶ್ವರರೆಡ್ಡಿ, ನಾರಾಯಣಪ್ಪ, ಅಮರ ನಾರಾಯಣಪ್ಪ, ನರಸಿಂಹಯ್ಯ, ಆದಿನಾರಾಯಣಪ್ಪ ಹಾಗೂ ಸಂಘದ ಹಲವು ಮುಖಂಡರು ಉಪಸ್ಥಿತರಿದ್ದರು.

ವರದಿ:- ಜೆ.ಎನ್. ಕೃಷ್ಣಾರೆಡ್ಡಿ

error: Content is protected !!