ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ರಕ್ತದಾನ ಶಿಬಿರ 

ಕೋಕಟನೂರ ಗ್ರಾಮದ 63 ಯುವಕರ ರಕ್ತದಾನ 

 

  • ಈ ದೇಶದ ಕೊನೆಯ ವ್ಯಕ್ತಿಯವರಿಗೆ ಪ್ರೀತಿ, ಸೋದರತ್ವ ಮತ್ತು ಮಾನವೀಯತೆ ಸಾರಬೇಕು.. 
  • ಮೌಲಾನಾ ದಾವೂದ್ ನದ್ವಿ ಹೇಳಿಕೆ 

 

ಸಿಂದಗಿ :- ತಾಲೂಕಿನ ಕೋಕಟನೂರ ಗ್ರಾಮದಲ್ಲಿ ಸೋಮವಾರ ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಸಿಂದಗಿ ಘಟಕದ ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು,

 

ಕಾರ್ಯಕ್ರಮವನ್ನು ಉದ್ಘಾಟಿಸಿ ಮೌಲಾನಾ ದಾವೂದ್ ನದ್ವಿ ಅವರು ಮಾತನಾಡಿ ಮಾನವೀಯತೆ ಸಂದೇಶ ವೇದಿಕೆ ರಾಜಕೀಯೇತರ ಸಂಘಟನೆಯಾಗಿದೆ ದೇಶದಲ್ಲಿ ಶುದ್ಧ ಮಾನವೀಯತೆ,

ಆಧಾರದ ಮೇಲೆ ಮಾನವರ ಸೇವೆಯಲ್ಲಿದೆ ದುರ್ಬಲರ, ಅಸಹಾಯಕರ ಅನಾಥರ ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಸಹಕಾರ ನೀಡುತ್ತಿದೆ. ಬುದ್ಧಿಜೀವಿಗಳ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗೆ ಸೇರಿ ಸಮಾಜದ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ದಣಿಯದೆ ಕೆಲಸ ಮಾಡುತ್ತಿದೆ.

 

ಇದರ ಏಕೈಕ ಉದ್ದೇಶವೆಂದರೆ ಮನುಷ್ಯರನ್ನು ಮನುಷ್ಯರೊಂದಿಗೆ ಮತ್ತು ಹೃದಯಗಳನ್ನು ಹೃದಯದಿಂದ ಸಂಪರ್ಕಿಸುವುದು. ಈ ದೇಶದ ಕೊನೆಯ ವ್ಯಕ್ತಿಯವರಿಗೆ ಪ್ರೀತಿ, ಸೋದರತ್ವ ಮತ್ತು ಮಾನವೀಯತೆ ಸಂದೇಶ ಸಾರವುದಾಗಿದೆ.

 

ಶುದ್ಧ ಮಾನವ ಸಂಬಂಧದ ಆಧಾರದ ಮೇಲೆ ಭಾರತೀಯರಾಗಿ, ನೈತಿಕ ಅಧಃಪತನದ ವಾತಾವರಣವನ್ನು ಕೊನೆಗೊಳಿಸಿ,ದೇಶದಲ್ಲಿ ಪ್ರೀತಿ ಮತ್ತು ಸಹೋದರತ್ವದ ವಾತಾವರಣವನ್ನು ಸ್ಥಾಪಿಸಲು. ಸೇವೆಯ ಮೂಲಕ, ಸಮಾಜದ ಕೆಳ ವರ್ಗದ ಜನರನ್ನು ತಲುಪಿ ಜೀವನದ ನಿಜವಾದ ಉದ್ದೇಶದ ಬಗ್ಗೆ ಅರಿವು ಮೂಡಿಸುವುದಾಗಿದೆ.

 

ಈ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೆಂದ್ರದಿಂದ ಆಗಮಿಸಿದ ಡಾ.ಸುಮಾ ಮಮದಾಪುರ ಮಾತನಾಡಿ, ರಕ್ತದಾನ ಮಾಡುವುದು ಜೀವದಾನವಾಗಿದೆ. ಇದರಿಂದ ರಕ್ತದೊತ್ತಡದ ಆಪತ್ತುಗಳು ಕಡಿಮೆಯಾಗುತ್ತವೆ. ಬುಧ್ಧಿ ಚುರುಕುಗೊಳ್ಳುತ್ತದೆ. ತಪ್ಪು ತಿಳುವಳಿಕೆಯಿಂದ ನಾವು ರಕ್ತದಾನ ಮಾಡಲು ಬೇಗನೆ ಸಿದ್ಧರಾಗುವುದಿಲ್ಲ,ರಕ್ತದಾನ ದಿಂದ ವ್ಯಕ್ತಿ ದುರ್ಬಲನಾಗುವದಿಲ್. ಆದರೆ ವ್ಯಕ್ತಿ ಬಲಿಷ್ಠನಾಗುತ್ತಾನೆ. ಜಿಲ್ಲಾ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳ ವತಿಯಿಂದ ನಾನು ವೇದಿಕೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೆನೆ. ಮಾನವೀಯತೆಗಾಗಿ ಸಂಸ್ಥೆಯ ಎಲ್ಲಾ ಸದಸ್ಯರು ಸಹಾಯ ಮಾಡಲು ಸದಾ ಸಿದ್ಧರಾಗಿರುತ್ತಾರೆ. ಒಂದು ಬಾರಿ ರಕ್ತದ ಬಹಳ ಕೊರತೆ ವಾಗಿತ್ತು ನಮಗೆ ರಕ್ತದ ಬಹಳ ಅವಶ್ಯಕತೆ ಇತ್ತು ಆಗ ಮೂವತ್ತು ಸದಸ್ಯರು ಬಂದು ರಕ್ತದಾನ ಮಾಡಿದರು ಮಾನವೀಯ ಸೇವೆಯಲ್ಲಿ ಈ ಸಂಸ್ಥೆ ಸದಾ ಮುಂದಿದೆ. ಇವರ ಉತ್ಸಾಹ ಬಹಳ ಶ್ಲಾಘನೀಯ ಪ್ರಶಂಸನೀಯ.

 

ನಮ್ಮ ಆರೋಗ್ಯದ ಕಾಳಜಿಯಿಂದ ರಕ್ತದಾನ ಮಾಡೋಣ, ನಮ್ಮ ರಕ್ತದಾನದಿಂದ ರೋಗಗಳನ್ನು ಆರಂಭಿಕ ಹಂತಗಳಲ್ಲಿ ಕಂಡುಹಿಡಿಯಬಹುದು, ಅವುಗಳಿಗೆ ಚಿಕಿತ್ಸೆ ನೀಡಬಹುದು. ಗುಂಪು ಪತ್ತೆ ಮಾಡಬಹುದು. ಮತ್ತು ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಕಿಡ್ನಿ ಕಾಯಿಲೆ, ಕ್ಯಾನ್ಸರ್ ರೋಗಿಗಳಿಗೆ, ಆಪರೇಷನ್ ರೋಗಿಗಳಗೆ, ಮುಗ್ಧ ಮುದ್ದು ಮಕ್ಕಳಿಗೂ ಕೂಡ ಇತ್ತೀಚಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಇದೂ ಎಂದರು ,

ಇನ್ನು ಮುಂದುವರೆದು ಕೋಕಟನೂರ ಗ್ರಾ.ಪಂ.ಮಾಜಿ ಅಧ್ಯಕ್ಷೆ ಹೂವಪ್ಪಾ ಕನ್ನೂರ ಮಾತನಾಡಿ, ರಕ್ತದಾನ ಮಾಡುವುದೇ ಜೀವ ಉಳಿಸಲು, ರೋಗಿಗಳಿಗೆ ರಕ್ತ ತರಲು ನಾವೇ ದೂರ ಹೋಗಿದ್ದೇವೆ, ಮಹಾನಗರಗಳಲ್ಲಿ ರಕ್ತದಾನವಿಲ್ಲದೆ ರಕ್ತಸಿಗುತ್ತಿಲ್ಲ,ನಂತರ ಗ್ರಾ.ಪಂ.ಅಧ್ಯಕ್ಷ ಬಸವರಾಜ ಹರನಾಳ್ ಈ ಸಂಸ್ಥೆಯು ಎಲ್ಲಾ ಸುಖ ದುಃಖದಲ್ಲಿ ಕೆಲಸ ಮಾಡುತ್ತದೆ. ವೇದಿಕೆಯ ಹೆಸರಿನಿಂದಲೇ ತಿಳಿದಿದೆ ಜಾತಿ, ಧರ್ಮ, ಭೇದಭಾವವಿಲ್ಲದೆ ಎಲ್ಲರಿಗೆ ಸೇವೆ ಸಲ್ಲಿಸಿ ಕರುಣೆ ತೋರುತ್ತದೆ. ಆದ್ದರಿಂದ ನಾನು ಈ ಕಾರ್ಯಕ್ರಮವನ್ನು ಮೊದಲು ನನ್ನ ರಕ್ತವನ್ನು ದಾನ ಮಾಡುವ ಮೂಲಕ ಚಾಲನೆ ನೀಡುತ್ತೆನೆ.ಭವಿಷ್ಯದಲ್ಲಿಯು ಸದಾ ವೇದಿಕೆಯ ಜೋತೆ ಇರುತ್ತೇನೆ ಎಂದು ಹೇಳಿದರು, ಈ ಸಂದರ್ಭದಲ್ಲಿ ಕೋಕಟನೂರ ಗ್ರಾಮದ 63 ಯುವಕರು ರಕ್ತದಾನ ಮಾಡುವ ಮೂಲಕ ಮಾನವೀಯತೆ ಸಂದೇಶ ಸಾರಿದರು. ಕಾರ್ಯಕ್ರಮದಲ್ಲಿ ಗ್ರಾ ಪಂ ಸದಸ್ಯರು ಶಂಕರೈಯ್ಯ ಮುತ್ಯಾ . ಇರಫಾನ ಮುಲ್ಲಾ.ಡಾ ಎಮ ಆಯಿ ಮುಲ್ಲಾ. ಮೌ, ಕಲಿಮುಲ್ಲಾ ನದ್ವಿ ಮೈನುದ್ದಿನ ಕುಮಸಗಿ. ಮೌ ಇಸಮಾಯಿಲ ನದ್ವಿ ಉಪಸ್ಥಿತರಿದ್ದರು.

error: Content is protected !!