ಹುಕ್ಕೇರಿ BS-6 ದ್ವಿಚಕ್ರ ವಾಹನಗಳ ಉಚಿತ ಕಾರ್ಯಗಾರ

ಹುಕ್ಕೇರಿ.ಕರ್ನಾಟಕ ದ್ವಿಚಕ್ರ ಕಾರ್ಯಗಾರ ಮಾಲೀಕರು ಮತ್ತು ತಂತ್ರಜ್ಞರ ಸಂಘ (KTWOTA) ವತಿಯಿಂದ ಹುಕ್ಕೇರಿ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ BS-6 ದ್ವಿಚಕ್ರ ವಾಹನಗಳ ಒಂದು ದಿನದ ಉಚಿತ ಕಾರ್ಯಗಾರವನ್ನು ಭವ್ಯವಾಗಿ ಆಯೋಜಿಸಲಾಯಿತು. ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೋಸ್ಕರ ಹೆಲ್ಮೆಟ್ ಧರಿಸುವ ಮಹತ್ವವನ್ನು ಜಾಗೃತಿ ಮೂಡಿಸುತ್ತಾ, ದ್ವಿಚಕ್ರ ವಾಹನಗಳ ರ್‍ಯಾಲಿ ಮೂಲಕ ಸಂಕೇಶ್ವರ ದಿಂದ ಪ್ರಾರಂಭವಾಗಿ ಹುಕ್ಕೇರಿ ಕೋರ್ಟ್ ಸರ್ಕಲ್ ದಿಂದ ಅಡವಿ ಸಿದ್ದೇಶ್ವರ ಮಠದ ವರಿಗೆ ಬಂದು ತಲುಪಿತು ಕೊಷ್ಠಿ ಕಾರ್ಯಾಲಯದಲ್ಲಿ ವೇದಿಕೆಯ ಗಣ್ಯ ಮಾನ್ಯರಿಂದ ಸಸಿಗೆ ನೀರು ಉನೀಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೊಷ್ಟಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗೋಕಾಕ ಸಾರಿಗೆ ಇಲಾಖೆ ಅಧಿಕಾರಿ ಸಿದ್ದಪ್ಪ ಕರಿಗಾರ ಮಾತನಾಡಿ ಇತ್ತಿಚಿಗೆ ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸುವ ಸಂಖ್ಯೆ ಹೆಚ್ಚಾಗಿದೆ ಇದರಿಂದ ಅಪಘಾತವಾದರೆ ವಾಹನ ಮಾಲಿಕರು ದಂಢ ಮತ್ತು ಶಿಕ್ಷೆಗೆ ಒಳಗಾಗುತ್ತಾರೆ ಹಾಗೂ ಯಾವುದೆ ಪರಿಹಾರ ದೊರೆಯುವದಿಲ್ಲಾ ಅದರಂತೆ ಅತಿ ವೇಗವಾಗಿ ಮತ್ತು ಕರ್ಕಶ ಶಬ್ದದೊಂದಿಗೆ ವಾಹನ ಚಲಾಯಿಸ ಬೇಡಿ,ಅಧಿಕಾರಿಗಳು ವಾಹನ ತಪಾಸಣೆ ವೇಳೆ ಕೇಳುವ ದಾಖಲೆಗಳನ್ನು ನೀಡಿ ಸಹಕರಿಸಬೇಕು ಯಾವದೇ ವ್ಯಕ್ತಿ ವಾಹನ ಚಲಾಯಿಸುವಾಗ ಸರ್ಕಾರದ ರಸ್ತೆ ನಿಯಮಗಳನ್ನು ಪಾಲಿಸ ಬೇಕು ಎಂದು ಹೇಳಿದರು KTWOTA ಸಂಘದ ರಾಜ್ಯಾಧ್ಯಕ್ಷರಾದ ಪ್ರಸನ್ನಕುಮಾರಗೌಡ ಮತ್ತು ಜಗದೀಶ್ ಸರ್ ಅವರ ಮುಂದಾಳತ್ವದಲ್ಲಿ ಕಾರ್ಯಗಾರ ಆರಂಭವಾಯಿತು. ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ್ಜಿ ನಾಯ್ಡು, ಹಾಗೂ BS-6 ತರಬೇತಿದಾರರಾದ ಅಮರ್ ಚಿಂತಾಮಣಿ, ನವೀನ್ ರಾಜಾಜಿ ನಗರ, ಮತ್ತು ಮೈಸೂರು ಮಂಜು ಇವರು BS-6 ದ್ವಿಚಕ್ರ ವಾಹನಗಳ ರಿಪೇರಿ ಮತ್ತು ತಾಂತ್ರಿಕ ವಿಷಯಗಳನ್ನು ಮೆಕ್ಯಾನಿಕ್ಸ್‌ಗಳಿಗೆ ಸುಲಭವಾಗಿ ಅರ್ಥವಾಗುವಂತೆ, ಸವಿಸ್ತಾರವಾಗಿ ತರಬೇತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಗೋಕಾಕ್ ಸಾರಿಗೆ ಇಲಾಖೆ ಅಧಿಕಾರಿ, ಸಂಕೇಶ್ವರ ಹಾಗೂ ಹುಕ್ಕೇರಿ ಇನ್ಸ್‌ಪೆಕ್ಟರ್, ಹಾಗೂ ಲೇಬರ್ ಆಫೀಸರ್ ಮತ್ತು ಹಿರಿಯ ಮೆಕಾನಿಕಲ್ ಮೋಸಾ ಭಾಗವಾನ್ ಮತ್ತು ಸಲೀಂ ಭಾಗವಾನ್ ಮೊದಲಾದ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಮತ್ತಷ್ಟು ಭಾವೈಕ್ಯತೆ ನೀಡಿದರು.
ಈ ಮಹತ್ವದ ಕಾರ್ಯಕ್ರಮವನ್ನು ನಡೆಸಲು ಸಾಗರ ಮಾಣೆ, ಅಬ್ದುಲ್ ಮಜೀದ್ ಮುಕ್ಕೇರಿ, ಧನಪಾಲ್ ಸಿರಗುಪ್ಪಿ, ಅರಭಾಜ್ ಡೋಣಿ. ಶಿವಾನಂದ ಕುಂಬಾರ. ಇಂಥಾಜ್ ಮುರ್ಸಲ್. ಶ್ರೀಕಾಂತ್ ವಠಾರೆ. ಸುರೇಶ್ ಘೋಡಗೇರಿ. ಅಥಣಿಯಿಂದ ಎಲ್ಲ ಮೆಕ್ಯಾನಿಕಲ್ ಗಳು ಈ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಹುಕ್ಕೇರಿ, ಸಂಕೇಶ್ವರ್ ಘಟಪ್ರಭಾ ನಿಪ್ಪಾಣಿ ಯಮಕನಮರಡಿ ಚಿಕ್ಕೋಡಿ, ಅಥಣಿ, ರಾಯಭಾಗ, ಗೋಕಾಕ್ ಸೇರಿದಂತೆ ವಿವಿಧ ತಾಲೂಕುಗಳಲ್ಲಿರುವ ಎಲ್ಲಾ ಮೆಕ್ಯಾನಿಕಲ್‌ಗಳನ್ನು ಒಗ್ಗೂಡಿಸಿ, ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದರು.

ವರದಿ : ಸದಾನಂದ ಎಮ್

error: Content is protected !!