ಹುಮನಾಬಾದ : ಬಸವಕಲ್ಯಾಣ ತಾಲೂಕಿನ ಭಾಗ್ಯಶ್ರೀ ಪಂಡಿತ್ ಆಲಗೂಡೆ ಎಂಬ ಯುವತಿಯ ಅತ್ಯಾಚಾರ ಕೊಲೆ ಖಂಡಿಸಿ ಇದೆ ಸೆಪ್ಟೆಂಬರ್ 06 ಶುಕ್ರವಾರ ದಂದು ಬೆಳಿಗ್ಗೆ 10ಗಂಟೆಗೆ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನ ದಿಂದ ಪ್ರತಿಭಟನೆ ಪ್ರಾರಂಭ ಗೊಂಡು ವಿವಿಧ ಮುಖ್ಯ ರಸ್ತೆಗಳ ಮೂಲಕ ಪಟ್ಟಣದ ಡಾ ಬಿಆರ್ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ಕುರಿತು ಮುಖಂಡರ ಭಾಷಣದ ನಂತರ ತಾಲೂಕು ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಪಟ್ಟಣದ ಪ್ರವಾಸಿ ಮಂದಿರ ದಲ್ಲಿ ಸಮಾಜದ ಮುಖಂಡರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು,
ಸಮಾಜದ ಧರ್ಮ ಗುರುಗಳು ಶ್ರೀ ದತ್ತಾತ್ರೇಯ ಮಹಾರಾಜ್ ಹಾಗೂ ಹಿರಿಯ ಮುಖಂಡರಾದ ರಾಜಣ್ಣ ರವರು ಪ್ರತಿಭಟನೆ ಮುಖಂಡತ್ವ ವಹಿಸುವರು ಎಂದು ನಾಗಭೂಷಣ ಸಂಗಮ್ ಮಾತನಾಡಿದರು,
ಇನ್ನೂ ಈ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಹಾಗೂ ಎಲ್ಲಾ ಸಮಾಜದವರು ಸಾತ್ ನೀಡಲಿದ್ದು ನಿಷ್ಪಕ್ಷಪಾತವಾಗಿ ಎಲ್ಲರೂ ಭಾಗವಹಿಸುವರು ಎಂದು ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ಅಂಬಿಗರ ಚೌಡಯ್ಯ ಯುವ ಸೇನೆ ಅಧ್ಯಕ್ಷ ಶರಣು ಖೇಳಿಕರ್, ತಾಲೂಕು ಗಂಗಾ ಮತ ಕೋಲಿ ಕಬ್ಬಲಿಗ ಸಮಿತಿ ಅಧ್ಯಕ್ಷ ನಾಗಭೂಷಣ ಸಂಗಮ್, ದಲಿತ ಮಾದಿಗ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷ ಪಪ್ಪುರಾಜ್ ಚತುರೆ, ಕುರುಬ ಗೊಂಡ ಸಮಾಜದ ಮುಖಂಡ ವಿನಾಯಕ ಮಣಕೋಜಿ, ಭೂವಿ ಸಮಾಜದ ತಾಲೂಕು ಅಧ್ಯಕ್ಷ ಸಂಜುಕುಮಾರ್ ವಾಡೆಕರ್, ದಲಿತ ಪ್ಯಾಂಥರ್ ತಾಲೂಕು ಅಧ್ಯಕ್ಷ ಗಣೇಶ್ ಅಷ್ಟೂರೆ, ವೀರಶೈವ ಸಮಾಜದ ಅಧ್ಯಕ್ಷ ಡಿಎನ್ ಪತ್ರಿ, ಸವಿತಾ ಸಮಾಜದ ಅಧ್ಯಕ್ಷ ಗೋಪಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.