ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಸುಕ್ಷೇತ್ರ ರಟಕಲ್. ವಿರಕ್ತ ಮಠದ ನಿಯೋಜಿತ ಉತ್ತರಾಧಿಕಾರಿಯಾದ ಪೂಜ್ಯಶ್ರೀ ನೀಲಕಂಠ ದೇವರವರ ಪಟ್ಟಾಧಿಕಾರ ಮಹೋತ್ಸವದ ವಾಲ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಶ್ರೀಮಠದಲ್ಲಿ. ದಿವ್ಯ ಸಾನಿಧ್ಯ ಪೂಜಶ್ರೀ ಡಾ, ಶಿವಾನಂದ ಮಹಾಸ್ವಾಮಿಗಳು ಹುಲಸೂರು ಮಠ, ಪೂಜ್ಯಶ್ರೀ ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು ಭರತನೂರ, ಪೂಜ್ಯಶ್ರೀ ರೇವಣಸಿದ್ದ ಶಿವಾಚಾರ್ಯರು ರಟಕಲ್, ವಿರಕ್ತಮಠದ ನಿಯೋಜಿತ ಉತ್ತರಾಧಿಕಾರಿ ಪೂಜ್ಯಶ್ರೀ ನೀಲಕಂಠ ದೇವರು, ಶ್ರೀ ಸಿದ್ದ ಶಿವಯೋಗಿ ರೇವಣಸಿದ್ದ ಶರಣರು ಗೌರಿಗುಡ್ಡ, ಹಾಗೂ ಪಟ್ಟಾದಿಕಾರ ಸ್ವಾಗತ ಸಮಿತಿಯ ಅಧ್ಯಕ್ಷರು ಸನ್ಮಾನ್ಯ ಶ್ರೀ ಡಾ, ಅವಿನಾಶ ಜಾಧವ ಶಾಸಕರು ಚಿಂಚೋಳಿ, ಸನ್ಮಾನ್ಯ ಶ್ರೀ ಜಗದೇವ ಗುತ್ತೇದಾರ್ ವಿಧಾನ ಪರಿಷತ್ ಸದಸ್ಯರು, ವಿಜಯಕುಮಾರ ಚೆಂಗಟಿ, ಶಿವರಾಜ್ ಪಾಟೀಲ್ ಗೋಣಗಿ, ಚಿಂತನ ರಾಥೋಡ, ಬಸವರಾಜ್ ಚೌಕಾ, ಸಿದ್ದಯ್ಯ ಸ್ವಾಮಿ ಕಿಣ್ಣಿ, ಮಲ್ಲಣ್ಣ ಬೈರಪ, ಮಲೆನಾಥ ಮುಚ್ಚಟ್ಟಿ, ಸಂತೋಷ್ ಹಂದ್ರಳ್ಳಿ ,ಶಿವರಾಜ್ ಚೌಕಾ, ರಾಚಯ್ಯ ಕಿಣ್ಣಿ, ಚಂದ್ರಕಾಂತ ಭೀಮಳ್ಳಿ, ಚಂದ್ರಕಾಂತ್ ಸೀಗಿ, ಶರಣು ಬೈರಪ್, ಮಾನಶೆಟ್ಟಿ ಸೀಗಿ, ನೀಲಕಂಠ ಪಾಟೀಲ್, ರವಿ ಬುಳ್ಳ, ಆಕಾಶ್ ಸಾಲಿಮಠ, ವಿನೋದ್ ಸಿಗಿ,ವೀರೇಶ್ ಬುಕ್ಕಟಗಿ, ಬಸವರಾಜ್ ತಳವಾರ್, ರವಿ ಕೆಣ್ಣಿ, ರಸೂಲ್ ಕೋರಬಾ,
ಬಸವಾದಿ ಶರಣರ ವಚನ ಚಳುವಳಿಯ ಪುಣ್ಯ ಪರಂಪರೆಯ ಭಕ್ತಿ ಶೃದ್ಧಾ ಕೇಂದಗಳೇ ಮಠಗಳು ನಿರಂತರ ಜ್ಞಾನ ದಾಸೋಹ, ಅನ್ನದಾಸೋಹ ನಡೆಸುತ್ತಾ ಜನಮಾನಸದಲ್ಲಿ ಕಂಗೋಳಿಸುತ್ತಿರುವ ಪುಣ್ಯದಾಲಯಗಳು ಇಂತಹ ಭವ್ಯ ಪರಂಪರೆಯ ಕಲ್ಯಾಣ ಕರ್ನಾಟಕದ ನಿಜಾಮರ ಕಾಲದಲ್ಲಿ ಆಶ್ರಯ ತಾಣವಾದ ರಟಕಲ್ ಶ್ರೀ ಮುರಗೇಂದ್ರ ಶಿವಯೋಗಿಗಳ ವಿರಕ್ತಮಠ ಭಕ್ತರ ಪಾಲಿನ ಕಾಮಧೇನು ಕಲ್ಪವೃಕ್ಷವಾಗಿದೆ. ಆದಿಗುರು ಲಿಂ. ಶ್ರೀ ರುದ್ರಮುನಿ ಶಿವಯೋಗಿಗಳ ಶಿವಯೋಗ ಶಕ್ತಿಯಿಂದ ಶ್ರೀಕಾರಗೊಂಡ ಶ್ರೀಮಠಕ್ಕೆ ತಮ್ಮ ಕ್ರಿಯಾಶಕ್ತಿಯಾಗಿ ಬಂದವರಲ್ಲಿ ಲಿಂ. ಶ್ರೀ ಮುರಗೇಂದ್ರ ಶಿವಯೋಗಿಗಳು ತಮ್ಮ ತಪ್ಪಸ್ಸು ಮತ್ತು ಜ್ಞಾನಯೋಗದ ಪರಿಶ್ರಮ ಬಲದಿಂದ ಭಕ್ತರ ಸಂಕಷ್ಟವನ್ನು ಪರಿಹರಿಸಿ, ಸ್ವಾತಂತ್ರ್ಯ ಹೋರಾಟದ ಮಾರ್ಗದರ್ಶಕರಾಗಿ ಭಕ್ತರ ಹೃದಯಮಂದಿರದಲ್ಲಿ ನೆಲೆ ನಿಂತಿದ್ದಾರೆ. ಈ ಪೂಜ್ಯದ್ವಯರ ಸಂಕಲ್ಪದ ಶಕ್ತಿಯಾಗಿ ಮಹಾಮಹಿಮ ಪುರುಷರಾಗಿ 6ನೇ ಪೀಠಾಧಿಪತಿಗಳಾಗಿ ನೊಂದವರಿಗೆ ನಲಿವನ್ನು ನೀಡಿ ನಿರಾಶ್ರಿತರಿಗೆ ಆಶ್ರಯ ನೀಡಿ ಅಧ್ಯಾತ್ಮದ ಶಕ್ತಿಯಾಗಿ ಮಠವನ್ನು ಉತ್ತುಂಗಕ್ಕೆರಿಸಿದವರು ಲಿಂ. ಶ್ರೀ ನೀಲಕಂಠ ಮಹಾಸ್ವಾಮಿಗಳು. ಈ ಪೂಜ್ಯರ ಇಚ್ಛಾಶಕ್ತಿ ಚೈತನ್ಯ ಶಕ್ತಿಯಂತೆ ತಮ್ಮ ತಪಸ್ಸು, ಪ್ರವಚನ ಮುಖಾಂತರ ಹಾಗೂ ದೀನ ದಲಿತರ ಬಡವರ ಬಂಧುವಾಗಿ ನಾಡಿನಲ್ಲಿ ಮಠವನ್ನು ಜನಮಾನಸದಲ್ಲಿ ಸಾಕಾರಗೊಳಸಿದ ಲಿಂ. ಶ್ರೀ ಸಿದ್ಧರಾಮ ಮಹಾಸ್ವಾಮಿಗಳು.
ಇಂತಹ ಪರಂಪರೆಯ ವಾರಸುದಾರರೇ ಯುವ ಯತಿಗಳು, ವಿವಾಲ ಮತಿಗಳಾಗಿ ಬಂದವರು ಉತ್ತರಾಧಿಕಾರಿಗಳಾದ ಪೂಜ್ಯ ಶ್ರೀ ನೀಲಕಂಠ ದೇವರು. ಐತಿಹಾಸಿಕ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ಶಿವಸಂಪನ್ನರಾದ ಶ್ರೀ ಅಜ್ಜಯ್ಯ ಸ್ವಾಮಿ ಸುಧಾ ದೇವಿಯವರ ಪುಣ್ಯ ಉದರದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದು ಲಿಂ. ಹಾನಗಲ್ ಶ್ರೀ ಕುಮಾರ ಶಿವಯೋಗಿಗಳಿಂದ ಸ್ಥಾಪಿತವಾದ ಶಿವಯೋಗ ಮಂದಿರದಲ್ಲಿ ವಚನ ಸಾಹಿತ್ಯ, ಸಂಸ್ಕೃತ ಅಧ್ಯಾತ್ಮದ ಯೋಗ ಅಧ್ಯಯನ ಗೈದಿದ್ದಾರೆ. ನಂತರ ಘಟಪ್ರಭೆಯಲ್ಲಿ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಶ್ರೀ ಮ.ನಿ.ಪ್ರ. ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳ ಅರಿವಿನ ಅಂಗಳದಲ್ಲಿ ಗುರು ಸೇವೆಯೊಂದಿಗೆ ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿದ್ದಾರೆ. ನಿರಂತರ ಅಧ್ಯಯನ ಧಾರ್ಮಿಕ ಕಳಕಳಿ ಹೊಂದಿದ ಪೂಜ್ಯರು ನಾಡಿನವರಿಗೆ ಹೊಸದನ್ನು ನೀಡಬೇಕೆನ್ನುವ ಹೆಬ್ಬಯಕೆಯ ಹದುಳ ಹೃದಯ ಹೊಂದಿದ ಪೂಜ್ಯ ಶ್ರೀ ನೀಲಕಂಠ ದೇವರು.
ರಟಕಲ ಮಠವು ಅರಿವಿನ ಗುರುವಿಲ್ಲದೆ ಬಡವಾಗಿದ್ದ, ಜಡವಾಗಿದ್ದ ಶ್ರೀ ಮಠಕ್ಕೆ ಊರಿನ ಹಿರಿಯರು ಮತ್ತು ಸುತ್ತಮುತ್ತಲಿನ ಗ್ರಾಮದ ಮತದ ಭಕ್ತಾದಿಗಳ ಮೇರೆಗೆ, ನಿರಂಜನೆ ಚರಪಟ್ಟಾಧಿಕಾರವನ್ನು ಅರ್ಥಪೂರ್ಣವಾಗಿ ಆಚರಿಸುವ ಸೌಭಾಗ್ಯ ದೊರೆತಿದ್ದು ಭಕ್ತರೆಲ್ಲರ ಪುಣ್ಯ ಬನ್ನಿ ಭಕ್ತಿ ಶ್ರದ್ದೆಯೊಂದಿಗೆ ತನು, ಮನ, ಧನ ಅರ್ಪಿಸಿ ಯಶಸ್ವಿಗೊಳಿಸೋಣ ಪೂಜ್ಯರ ಪಟ್ಟಾಧಿಕಾರ ಮಹೋತ್ಸವ ನಮ್ಮ ನಾಡಿನ ಚೈತ್ರೋತ್ಸವ ಭಕ್ತ ಬಂಧುಗಳಿಗಿದು ನಿತ್ಯೋತ್ಸವ.ದಯಾಸಾಗರ ಪಾಟೀಲ್,ಶಿವು ಎಂ ಸೀಗಿ,ಮುರುಗಪ್ಪ ಮುಕ್ರಂಬಿ,ಬಸ್ಸು ಹುಳಗೇರಾ ಕುರುಕೋಟಿ, ನಾಗರಾಜ್ ಏರಿ, ಶ್ರೀಕಾಂತ ಅಷ್ಟಗಿ,ರಾಜು ಸ್ವಾಮಿ ಬುಕ್ಕಟಗಿ, ವೀರಣ್ಣ ಗಂಗಾಣಿ ನಿರೂಪಿಸಿದರು, ಇನ್ನೂ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ
