ಸಡಗರ ಸಂಭ್ರಮದಿಂದ ಹುಕ್ಕೇರಿ ಪೊಲೀಸ ಠಾಣೆಗೆ ಗಣಪತಿ ಆಗಮನ

ಹುಕ್ಕೇರಿ ಪೋಲಿಸ್ ಠಾಣೆಗೆ; ಮೂರನೇ ಬಾರಿ ಅದ್ದೂರಿಯಾಗಿ ಹೆಜ್ಜೆಯಿಟ್ಟ ವಿಘ್ನೇಶ್ವರ..!

ಹುಕ್ಕೇರಿ: ಹುಕ್ಕೇರಿ ಪೋಲಿಸ್ ಠಾಣೆಗೆ ಮೂರನೇ ಬಾರಿ ಅದ್ದೂರಿಯಾಗಿ ಹೆಜ್ಜೆಯಿಟ್ಟ ವಿಘ್ನೇಶ್ವರ..!

ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಹುಕ್ಕೇರಿ ಪೋಲಿಸ್ ಠಾಣೆಯ ಪಿಐ ಮಹಾಂತೇಶ ಬಸಾಪೂರೆ ಇವರ ನೇತ್ರತ್ವದಲ್ಲಿ ಅದ್ದೂರಿಯಾಗಿ ಗಣಪತಿಯನ್ನ ಠಾಣೆಗೆ ಆಹ್ವಾನ ಮಾಡಿಕೊಂಡರು ಪಠ್ಠಣದ ಪೇಠೆ ಒಣಿಯಿಂದ ಠಾಣೆಯವರೆಗೆ ಹಸಿರು ಪಟಾಕಿ ಸಿಡಿಸುವದರ ಮೂಲಕ ಪಠ್ಠಣದ ನಾಕಾ ಹುಕ್ಕೇರಿ ವ್ರತ್ತ ಮೂಲಕ ಪೊಲಿಸ್ ಠಾಣೆಗೆ ಗಣಪನನ್ನ ಅದ್ದೂರಿಯಾಗಿ ಹಸಿರು ಪಟಾಕಿ ಸಿಡಿಸುವ ಮೂಲಕ ಠಾಣೆಗೆ ಗಣಪಣ ಆಗಮನವಾಯಿತು.

 

ಈ ಸಂದರ್ಭದಲ್ಲಿ ಗಣೇಶನನ್ನ ಪೂಜೆ ಮಾಡುವ ಮುಖಾಂತರ ಸಮಾಜದಲ್ಲಿ ಶಾಂತಿ ವಾತಾವರಣ ಅಹಿತಕರ ಘಟನೆಗಳು ನಡೆಯದಂತೆ ಜನರಿಗೆ ಬುದ್ದಿ ಕೊಡಲಿ ಜೊತೆಗೆ ಮಳೆ ಬೆಳೆ ಕೊಟ್ಟು ರೈತರ ಮುಖದಲ್ಲಿ ಮಂದಹಾಸ ಬೀರಲಿ ಎಂದು ವಿಘ್ನೇಶ್ವರನಿಗೆ ಬೇಡಿಕೊಂಡರು. ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಮುಖ ಹಬ್ಬವೆಂದು ಪರಿಗಣಿಸಲಾದ ಗಣೇಶ ಚತುರ್ಥಿ ಭಕ್ತರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿದೆ. ಗಣೇಶನ ಆರಾಧನೆಯೊಂದಿಗೆ ಮನೆಯಲ್ಲಿ ಸಂತೋಷದ ವಾತಾವರಣವನ್ನು ಸೃಷ್ಟಿಸಲು ಹಾಗೂ ನಿಮ್ಮ ಪ್ರೀತಿಪಾತ್ರರಿಗೆ ಹಾರೈಸಲು ಇದೊಂದು ವಿಶೇಷ ಸಂದರ್ಭವಾಗಿದೆ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಆಪ್ತರಿಗೆ ಹಾಗೂ ಕುಟುಂಬಸ್ಥರಿಗೆ ಶುಭಾಷಯ ತಿಳಿಸಲು ಹಾಯ್ದೊರುತ್ತಿರುತ್ತಾರೆ. ಈ ಬಾರಿ ಹುಕ್ಕೇರಿ ಠಾಣೆಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಇಂದಿಗೆ ಮೂರು ವರ್ಷ ಕಳೆದವು.

 

ಈ ಸಂದರ್ಭದಲ್ಲಿ ಠಾಣೆಯ ಪಿಐ ಮಹಾಂತೇಶ ಬಸಾಪೂರೆ,ಪಿಎಸ್ಐ ಅಬಿಜೀತ ಅಕ್ಕತಂಗರೆಹಾಳ ಸಿಬ್ಬಂದಿಗಳಾದ ಮಂಜುನಾಥ ಕಬ್ಬುರಿ,ರವಿ ಢಂಗ,ನಾವ್ಹಿ,ಸಿ ಡಿ ಪಾಟೀಲ, ಅಜೀತ ನಾಯಿಕ,ಕೋಚರಿಕರ,ಭಂಡಾರಿ,ಹೀಗೆ ಮಹಿಳಾ ಸಿಬ್ಬಂದಿಗಳು ಇನ್ನಿತರ ಪತ್ರಕರ್ತರಾದ ಬ್ರಹ್ಮಾನಂದ ಪತ್ತಾರ ರಾಜಶೇಖರ ನಾಯಿಕ ಕಲ್ಲಪ್ಪ ಮಾಳಾಜ ಉಪಸ್ಥಿತರಿದ್ದರು ಗಣೇಶನನ್ನ ಠಾಣೆಗೆ ಬರಮಾಡಿಕೊಂಡರು.

 

ವರದಿ : ಸದಾನಂದ ಎಂ ಎಚ್