ಬಾಬು ಹುಲ್ಯಾಳರಿಗೆ ನೂತನ ಇನೋವಾ ಕ್ರಿಸ್ಟಾ: ಸಮಾಜಸೇವೆಯ ಪಯಣಕ್ಕೆ ಮತ್ತೊಂದು ಹೆಜ್ಜೆ

ಅಥಣಿ : ಅಥಣಿ ತಾಲ್ಲೂಕು ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಮಹಾ ಒಕ್ಕೂಟದ ಅಧ್ಯಕ್ಷರು ಹಾಗೂ ಸಮಾಜದ ಧ್ವನಿಯಾಗಿ ಸದಾ ಮುಂಚೂಣಿಯಲ್ಲಿ ನಿಂತು ಸಮಾಜಮುಖಿ ಕಾರ್ಯಗಳಿಗೆ ಸ್ಪಂದಿಸುತ್ತಿರುವ ಬಾಬು ಹುಲ್ಯಾಳ ಅವರು ನೂತನ ಇನೋವಾ ಕ್ರಿಸ್ಟಾ ಕಾರು ಖರೀದಿಸಿರುವುದು ಸಮಾಜದ ಬಂಧುಗಳಲ್ಲಿ ಸಂತಸ ಹಾಗೂ ಹೆಮ್ಮೆ ಮೂಡಿಸಿದೆ.
ಸರಳತೆ, ಸೌಜನ್ಯ, ಸೇವಾ ಮನೋಭಾವ ಹಾಗೂ ಸಮಾಜದ ಅಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ಬಾಬು ಹುಲ್ಯಾಳ ಅವರು, ಸಮಾಜದ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಯುವಕರಿಗೆ ಪ್ರೋತ್ಸಾಹ ನೀಡುತ್ತಾ, ಸಮಾಜದ ಒಗ್ಗಟ್ಟು ಮತ್ತು ಸಂಘಟನೆಯ ಬಲವರ್ಧನೆಗೆ ನಿರಂತರವಾಗಿ ಶ್ರಮಿಸುತ್ತಿರುವ ಸಮಾಜಮುಖಿ ನಾಯಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸಮಾಜದ ಸಂಕಷ್ಟಗಳಿಗೆ ಧ್ವನಿಯಾಗಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತಮ್ಮದೇ ಆದ ಸೇವಾ ಗುರುತು ಮೂಡಿಸಿರುವ ಬಾಬು ಹುಲ್ಯಾಳ ಅವರ ಸಮಾಜಪರ ಕಾಳಜಿ ಹಾಗೂ ನಾಯಕತ್ವಕ್ಕೆ ಸಮಾಜದ ವಿವಿಧ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೂತನ ಇನೋವಾ ಕ್ರಿಸ್ಟಾ ಕಾರು ಖರೀದಿಸಿದ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ ಕನಸುಗಾರ, ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಸಿಹಿ ಹಂಚಿ ಬಾಬು ಹುಲ್ಯಾಳ ಅವರಿಗೆ ಹೃತ್ಪೂರ್ವಕ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಗಣ್ಯರು ಮಾತನಾಡಿ, ಬಾಬು ಹುಲ್ಯಾಳ ಅವರ ಸಮಾಜಮುಖಿ ಸೇವೆ, ಸಂಘಟನಾ ಚಾತುರ್ಯ, ಸರಳ ವ್ಯಕ್ತಿತ್ವ ಹಾಗೂ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಸುವ ನಾಯಕತ್ವದ ಗುಣವನ್ನು ಶ್ಲಾಘಿಸಿದರು. ನೂತನ ವಾಹನವು ಅವರ ಸಮಾಜಸೇವೆಯ ಪಯಣಕ್ಕೆ ಮತ್ತಷ್ಟು ವೇಗ ನೀಡಲಿ ಹಾಗೂ ಸಮಾಜದ ಅಭಿವೃದ್ಧಿಗಾಗಿ ಕೈಗೊಳ್ಳುವ ಕಾರ್ಯಗಳಿಗೆ ಇನ್ನಷ್ಟು ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.
ಬಾಬು ಹುಲ್ಯಾಳ ಅವರ ಈ ಸಾಧನೆ ಕೇವಲ ವೈಯಕ್ತಿಕ ಸಂತಸದ ಕ್ಷಣವಲ್ಲ; ಸಮಾಜದ ಒಬ್ಬ ಸಮರ್ಪಿತ ಮುಖಂಡನ ಸಾಧನೆಯ ಸಂಭ್ರಮವಾಗಿದೆ. ಅವರ ಯಶಸ್ಸು ಸಮಾಜದ ಯುವಕರಿಗೆ ಪ್ರೇರಣೆಯಾಗಲಿ, ಅವರ ಸೇವಾ ಮನೋಭಾವ ಮತ್ತಷ್ಟು ವಿಸ್ತರಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಲಿ ಎಂಬುದು ಸಮಾಜದ ಆಶಯವಾಗಿದೆ.

ಇದೆ ವೇಳೆಯಲ್ಲಿ ಬಾಬು ಹುಲ್ಯಾಳ, ವಿಠ್ಠಲ ಲಗಳಿ ನಿಂಗಪ್ಪ ಸಾಯನ್ನವರ ಹಣಮಂತ ಸನದಿ,ನಾಗಪ್ಪ ದಳವಾಯಿ, ಈರಪ್ಪ ಹಾರೂಗೇರಿ, ಶ್ರೀಶೈಲ ಗಸ್ತಿ ಲಕ್ಕಪ್ಪ ನಾಯ್ಕ್, ಲಕ್ಷ್ಮಣ ಸನದಿ ಇದ್ದರು.

error: Content is protected !!