ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ (ರಿ.) ಬೆಂಗಳೂರು, ಇದರ ಬೆಳಗಾವಿ ಜಿಲ್ಲಾ ಘಟಕದ ನೂತನ ಜಿಲ್ಲಾ ಅಧ್ಯಕ್ಷರಾಗಿ ಪಬ್ಲಿಕ್ ನೆಟ್ವರ್ಕ್ ಕರ್ನಾಟಕದ ಪ್ರಧಾನ ಸಂಪಾದಕರು ಹಾಗೂ ‘ಮೌಲ್ಯ ಸಂಪದ’ ಪತ್ರಿಕೆಯ ಬೆಳಗಾವಿ ಜಿಲ್ಲಾ ವರದಿಗಾರರಾದ ಶ್ರೀ ಪ್ರಶಾಂತ್ ಎಸ್. ನಾಗನೂರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವರ ಈ ಆಯ್ಕೆಯನ್ನು ಗೌರವಿಸಿ, ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಹುಕ್ಕೇರಿ ತಾಲೂಕು ಘಟಕದ ವತಿಯಿಂದ ನೂತನ ಜಿಲ್ಲಾ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಎಸ್. ನಾಗನೂರಿ ಅವರಿಗೆ ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಪತ್ರಿಕಾರಂಗದಲ್ಲಿ ಅವರ ಸಕ್ರಿಯ ಸೇವೆ ಮತ್ತು ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಅವರ ಕೊಡುಗೆಯನ್ನು ಸ್ಮರಿಸಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಅವರಿಗೆ ಶುಭ ಹಾರೈಸಿದರು.
