ಗುಡಸ್ ಗ್ರಾಮ ಪಂಚಾಯತ್ ಅಧಿಕಾರಿಗಳ ಬೇಜವಾಬ್ದಾರಿ: ಊರ ಮಧ್ಯೆ ಅಪಾಯಕಾರಿ ಗುಂಡಿ, ಕಂಡು ಕಾಣದಂತೆ ಅಧಿಕಾರಿಗಳು

ಹುಕ್ಕೇರಿ : ತಾಲೂಕಿನ ಗುಡಸ್ ಗ್ರಾಮದ ಮಧ್ಯಭಾಗದಲ್ಲಿರುವ ಗಟಾರದಲ್ಲಿ ದೊಡ್ಡ ಗುಂಡಿ ಬಿದ್ದು ತಿಂಗಳು ಕಳೆದರೂ ಗ್ರಾಮ ಪಂಚಾಯತ್ ಅಧಿಕಾರಿಗಳು ಕಂಡು ಕಾಣದಂತೆ ಕುಳಿತಿರುವುದು ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಚಿತ್ರದಲ್ಲಿ ಕಾಣುವಂತೆ ಮನೆಗಳ ಮುಂದೆಯೇ ಈ ಗುಂಡಿ ಇದ್ದು, ಮಹಿಳೆಯರು, ಮಕ್ಕಳು ದಿನನಿತ್ಯ ಇದೇ ದಾರಿಯಲ್ಲಿ ಓಡಾಡುತ್ತಾರೆ. ನೀರು ಹಿಡಿಯುವ ಸ್ಥಳದ ಪಕ್ಕದಲ್ಲೇ ಇರುವುದರಿಂದ ಜಾರಿ ಬೀಳುವ ಆತಂಕ ಹೆಚ್ಚಾಗಿದೆ. ರಾತ್ರಿ ವೇಳೆ ಕಾಣಿಸದೆ ಯಾರಾದರೂ ವೃದ್ಧರು, ಚಿಕ್ಕ ಮಕ್ಕಳು ಬಿದ್ದು ಕೈಕಾಲು ಮುರಿದುಕೊಳ್ಳುವವರೆಗೆ ಅಧಿಕಾರಿಗಳಿಗೆ ಎಚ್ಚರವಾಗುವುದಿಲ್ಲವೇ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಮಾಡಬೇಕು, ಇಲ್ಲದಿದ್ದರೆ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

error: Content is protected !!