ಜಾಗೃತಿ ಕ್ರಾಂತಿ ದಿನಪತ್ರಿಕೆ ಉದ್ಘಾಟನೆ ಹಾಗೂ JK ಕನ್ನಡ NEWS 5ನೇ ವಾರ್ಷಿಕೋತ್ಸವದ ಅಂಗವಾಗಿ ಸಾಧಕರಿಗೆ ಸನ್ಮಾನ ಸಮಾರಂಭ

ಹುಮನಾಬಾದ್: ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನ, ಜನರ ಪಾಲಿಗೆ ನ್ಯಾಯದ ಕಿರಣ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ JK ಕನ್ನಡ NEWS ಹಾಗೂ ಜಾಗೃತಿ ಕ್ರಾಂತಿ ಕನ್ನಡ ದಿನಪತ್ರಿಕೆಯ 5ನೇ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಜಾಗೃತಿ ಕ್ರಾಂತಿ ದಿನಪತ್ರಿಕೆ ಉದ್ಘಾಟನಾ ಸಮಾರಂಭವು ಹುಮನಾಬಾದ್ ನ ಸೂಪರ್ ಫಂಕ್ಷನ್ ಹಾಲ್ ನಲ್ಲಿ ಅದ್ಧೂರಿಯಾಗಿ ಜರುಗಿತು.

ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಕ್ಷೇತ್ರದ ಶಿಕ್ಷಣ, ಸಮಾಜ ಸೇವೆ, ಪತ್ರಿಕೋದ್ಯಮ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ವೇದಿಕೆಗೆ ಆಹ್ವಾನಿಸಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯ ಅತಿಥಿಗಳು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

JK NEWS ನ ಬೆನ್ನೆಲುಬಾಗಿರುವ ಬೀದರ್ ಜಿಲ್ಲೆ ಹಾಗೂ ಹುಮನಾಬಾದ್ ತಾಲೂಕಿನ ಎಲ್ಲಾ ವರದಿಗಾರರನ್ನು ವೇದಿಕೆಗೆ ಕರೆದು ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಪ್ರಾಮಾಣಿಕ ಪತ್ರಿಕೋದ್ಯಮಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಸಂಪಾದಕರು ಶ್ಲಾಘಿಸಿದರು.
“ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ” ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಅಭಿಮಾನಿಗಳು, ಪತ್ರಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.

ಕಾರ್ಯಕ್ರಮದ ಯಶಸ್ಸಿಗೆ JK NEWS ಬಳಗ ಹಾಗೂ ಜಾಗೃತಿ ಕ್ರಾಂತಿ ತಂಡ ಶ್ರಮಿಸಿತ್ತು

error: Content is protected !!