ಯಾದಗಿರಿ ನಗರದ ಡಿ ದೇವರಾಜ ಅರಸ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ (ಕನ್ನಡ ಮಾಧ್ಯಮ) ಯಾದಗಿರಿಯಲ್ಲಿಂದು ಬಸವಾದಿ ಶರಣ ಹೂಗಾರ ಮಾದಯ್ಯನವರ ಜಯಂತಿಯನ್ನು ಆಚರಿಸಲಾಯಿತು. ೧೨ನೇ ಶತಮಾನದ ಬಸವಣ್ಣನವರ ಕ್ರಾಂತಿಕಾರಿ ಅನುಭವ ಮಂಟಪದ ಪ್ರಮುಖ ಶರಣರಾಗಿದ್ದರು. ಬಸವಾದಿ ಶರಣ ಹೂಗಾರ ಜಯಂತಿ ಕುರಿತು ಮುಖ್ಯ ಶಿಕ್ಷಕ ವೆಂಕಟೇಶ ಪೂಜಾರಿ ಮಾತನಾಡಿದರು. ಈ ಸಂದರ್ಭದಲ್ಲಿ ಕನ್ನಡ ಮಾಧ್ಯಮ ಶಾಲೆಯ ಮುಖ್ಯಸ್ಥರಾದ ವೆಂಕಟೇಶ ಪೂಜಾರಿ, ಶಿಕ್ಷಕರಾದ ಕವಿತಾ ಪಾಟೀಲ್, ಹುಚ್ಚಪ್ಪ ದೇವರಗೋನಾಲ, ಪ್ರಭು ಮೈಲಾರಿ, ನಸರೀನ್ ಬೇಗಂ, ಮಹಮ್ಮದ್ ಸೌದಾಗರ, ಎಚ್ ಪಿ ವಂದನಾ, ನಿರ್ಮಲಾ ಬೀಳೂರ, ಸಾವಿತ್ರಿ ಎಮ್, ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಯಲ್ಲಮ್ಮ ಆಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
