ಕಾಳಗಿ: ಹಳೆಯ ಬಸ್ ನಿಲ್ದಾಣದಲ್ಲಿ ಎಲ್ಲಾ ಬಸ್ ಗಳ ನಿಲುಗಡೆ ಮತ್ತು ಕಂಟ್ರೋಲ್ ಪುನರಾರಂಭಿಸಬೇಕು ಎಂದು ಒತ್ತಾಯಿಸಿ ಯುವ ಕರ್ನಾಟಕ ರಕ್ಷಣಾ ಸೇನೆ ವಲಯ ಘಟಕ ಕಾಳಗಿಯಿಂದ ಕಲಬುರಗಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಾಳಗಿ ತಾಲ್ಲೂಕು ಅಧ್ಯಕ್ಷ ಅವಿನಾಶ್ ಸಿ. ಗುತ್ತೇದಾರ ನೇತೃತ್ವದಲ್ಲಿ ಸಲ್ಲಿಸಿದ ಮನವಿಯಲ್ಲಿ, ಹೊಸ ಬಸ್ ನಿಲ್ದಾಣ ಆರಂಭದ ನಂತರ ಹಳೆಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿದೆ. ಹಳೆಯ ನಿಲ್ದಾಣದಲ್ಲಿ ಬಸ್ ನಿಲ್ಲದ ಕಾರಣ ವಯೋವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಚಿಂಚೋಳಿ ಮತ್ತು ಕಲಬುರಗಿ ಕಡೆಯಿಂದ ಬರುವ ಬಸ್ ಗಳು ಕಡ್ಡಾಯವಾಗಿ ಹಳೆಯ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು, ದಿನಪೂರ್ತಿ ಕಂಟ್ರೋಲರ್ ನೇಮಕ ಮಾಡಬೇಕು, ಕುಡಿಯುವ ನೀರು ಮತ್ತು ಸ್ವಚ್ಛತೆ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.
ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಾ. ಅಧ್ಯಕ್ಷ ದತ್ತು ಗುತ್ತೇದಾರ, ಪರಮೇಶ್ವರ ಕಟ್ಟಿಮನಿ, ಇಬ್ರಾಹಿಂಸಾಬ್, ದತ್ತಾತ್ರೇಯ ಮದ್ನೂರ, ಮೋಹನ ಚಿನ್ನಾ, ಭದ್ರು ಬಡಿಗೇರ ಇದ್ದರು.
