ಬಿ.ಎಸ್.ಎಸ್.ಕೆ‌ ಮಾಜಿ ನಿರ್ದೇಶಕ ಅಶೋಕ್ ತಮಸಿಂಗೆಗೆ ಶ್ರದ್ಧಾಂಜಲಿ ಸಮರ್ಪಣೆ

ಭಾಲ್ಕಿ : ಇತ್ತೀಚೆಗೆ ನಿಧನರಾದ ದಾಡಗಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಬಿ.ಎಸ್.ಎಸ್.ಕೆ ಮಾಜಿ ನಿರ್ದೇಶಕರಾದ ಅಶೋಕ್ ಹವಗೆಪ್ಪ ತಮಸಿಂಗೆ ಅವರಿಗೆ ದಾಡಗಿ ಗ್ರಾಮಸ್ಥರು ಹಾಗೂ ತಮಸಿಂಗೆ ಪರಿವಾರದ ಸ್ನೇಹ ಬಳಗದವರು ರವಿವಾರದಂದು ದಾಡಗಿ ಗ್ರಾಮದ ಅಶೋಕ ಹವಗೆಪ್ಪ ತಮಸಿಂಗೆ ವೃತ್ತದ ಬಳಿ ಶ್ರದ್ಧಾಂಜಲಿ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದರು.

 

ಮಾಜಿ ಲೋಕಸಭೆ ಸದಸ್ಯರು ಹಾಗೂ ಮಾಜಿ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರು ಮಾತನಾಡಿ ಅಶೋಕ್ ತಮಸಿಂಗೆ ಅವರು ಚುನಾವಣಾ ಏಳುಬೀಳಿನ ಅವಧಿಯಲ್ಲಿ ನನ್ನ ಜೊತೆ ಬೆನ್ನೆಲುಬಾಗಿ ನಿಂತಿದವರು.ನಿಷ್ಟುರವಾದಿ ಸರಳ ಮತ್ತು ಸಜ್ಜನ ವ್ಯಕ್ತಿಯಾಗಿ ರವರು ಓರ್ವ ಆದರ್ಶ ಜೀವನ ನಡೆಸಿದರು.ಬಿಜೆಪಿಯಲ್ಲಿ ಕಾರ್ಯಕರ್ತರ ಸಂಘಟನೆ ಮಾಡಿ ಪಕ್ಷಕ್ಕೆ ಶಕ್ತಿ ತುಂಬಿದ ಅವರು ನಮಗೆಲ್ಲಾ ಆದರ್ಶ ವ್ಯಕ್ತಿ.ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಯಲ್ಲಿ ಅವರ ಸೇವೆ ಅನನ್ಯವಾದುದು.ಪ್ರಾಮಾಣಿಕ ಬದುಕು ಕಟ್ಟಿಕೊಳ್ಳುವ ಸ್ವಭಾವದ ಮೂಲಕ ತನ್ನಂತಹ ಅನೇಕರನ್ನು ಸಮಾಜಕ್ಕೆ ನೀಡಿದವರು.ರಾಜಕಾರಣದಲ್ಲಿ ಅವರು ಎಂದಿಗೂ ಕಪ್ಪುಚುಕ್ಕೆ ಹೊಂದಿದವರಲ್ಲ ಎಂದು ಅಭಿಪ್ರಾಯಪಟ್ಟರು.

 

ಭಾಲ್ಕಿ ಮತಕ್ಷೇತ್ರದ ಮಾಜಿ ಶಾಸಕರಾದ ಪ್ರಕಾಶ್ ಖಂಡ್ರೆ ಮಾತನಾಡಿ ರಾಜಕೀಯ ಕ್ಷೇತ್ರದಲ್ಲಿ ಅಶೋಕ ಹವಗೆಪ್ಪ ಅವರು ಎಲ್ಲರನ್ನು ಹುರಿದುಂಬಿಸುವಂತಹ ವ್ಯಕ್ತಿತ್ವ.ಧಾರ್ಮಿಕ,ಸಾಮಾಜಿಕ,ಶೈಕ್ಷಣಿಕವಾಗಿ ಕೆಲಸ ಕಾರ್ಯ ಮಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಒಪ್ಪುವ ಕಾರ್ಯ ಅವರಿಂದಾಗಿದೆ.ಈ ಭಾಗದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಎಲ್ಲರ ಪ್ರೀತಿ ಪಾತ್ರರಾಗಿ ಬದುಕು ಸಾಗಿಸಿದರು.ಅಲ್ಲದೆ ಆದರ್ಶ,ಕೆಲಸ ಕಾರ್ಯಗಳು ಇಡೀ ದಾಡಗಿ ಗ್ರಾಮ ನೆನಪಿಸುವಂತಹ ಕೆಲಸಗಳಾಗಿವೆ.ಸಮಾಜದ ಉನ್ನತಿಗಾಗಿ ಅವರ ತತ್ವ ಸಿದ್ಧಾಂತಗಳಲ್ಲಿ ಅವರ ಯಾವುದೇ ರಾಜೀ ಇರಲಿಲ್ಲ.ವ್ಯವಸ್ತೆಯಲ್ಲಿ ವ್ಯತ್ಯಾಸ ಆಗದಂತೆ ನಿಷ್ಟುರವಾದಿಯಾಗಿದ್ದರು.ಪಕ್ಷದ ಎಲ್ಲಾ ಜವಾಬ್ದಾರಿಗಳನ್ನೂ ಸಮರ್ಥವಾಗಿ ನಿರ್ವಹಿಸಿದವರು.ಓರ್ವ ನಿಷ್ಠಾವಂತ ನಾಯಕರಾಗಿ ಇಡೀ ಜಿಲ್ಲೆಯಲ್ಲಿ ಛಾಪು ಮೂಡಿಸಿದವರು.ಊರಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಎಲ್ಲರ ಹಿತ ಕಾಪಾಡಿಕೊಂಡು ಬಂದ ಮಹಾನುಭಾವರಾಗಿದ್ದಾರೆ ಎಂದು ನುಡಿದರು.

 

ಬಿಜೆಪಿ ಮಾಜಿ ಅಧ್ಯಕ್ಷರಾದ ಶಿವರಾಜ್ ಗಂಧಗೆ ಮಾತನಾಡಿ ಅಶೋಕ್ ತಮಸಿಂಗೆ ಅವರಲ್ಲಿದ್ದ ಸರ್ವ ಕೌಶಲ್ಯತೆ ಅವರನ್ನು ಉನ್ನತ ಸ್ಥಾನಮಾನಕ್ಕೆ ಕೊಂಡೊಯ್ಯಬೇಕಿತ್ತು.ಸಮಾಜ ಸೇವಾ ರಂಗದಲ್ಲಿಯೂ ಅನೇಕ ಯೋಚನೆ ಯೋಜನೆಗಳು ಅವರಲ್ಲಿತ್ತು.ಮಾತಿನಲ್ಲಿ ಸೌಮ್ಯ,ಕೆಲಸದಲ್ಲಿ ಉಗ್ರವಾದಿಯಾಗಿದ್ದರು.ಜನಸಂಘವನ್ನು ಕೊಡಿಸಿ ಅವರನ್ನು ಹಂತ‌ ಹಂತವಾಗಿ ಬೆಳೆಸುವ ಶಕ್ತಿ ಅವರಲ್ಲಿತ್ತು.ಪ್ರತಿಯೊಬ್ಬ ಮನೆಯವರ ನೋವಿಗೆ ಸ್ಪಂದಿಸುವ ಗುಣ ಅವರಲ್ಲಿತ್ತು.ಅವರ ಪುಣ್ಯದ ಕೆಲಸಗಳ ಅನುಗ್ರಹ ಅವರ ಮನೆಯವರಿಗೆ ಸಿಗಲಿ ಎಂದರು.

 

ಕಾರ್ಯಕ್ರಮವನ್ನು ನಿರೂಪಿಸಿ ಮಾತನಾಡಿದ ಪವನ್ ಮಾಶೆಟ್ಟೆ ಅಶೋಕ್ ತಮಸಿಂಗೆ ಅವರು ನಿಷ್ಟುರವಾದಿಯಾಗಿ ಅಜಾತಶತ್ರು ಎಂದೆನಿಸಿಕೊಂಡ ಅಪರೂಪದ ವ್ಯಕ್ತಿತ್ವ ಅವರದ್ದು.ತುಂಬಾ ಜನರನ್ನು ಬಡಿದೆಬ್ಬಿಸಿ ಬೆಳೆಸಿದವರು.ಅವರ ಕೊಡುಗೆ ಅಪಾರ.ಅವರ ಒಳಿತುಗಳು ಎಂದೆಂದಿಗೂ ಶಾಶ್ವತವಾಗಿರಲಿ’ ಎಂದು ಆಶಿಸಿದರು.

 

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವೆಂಕಟರಾವ್ ಬಿರಾದಾರ,ಸಾಹಿತಿ ಓಂ‌ಪ್ರಕಾಶ ರೊಟ್ಟಿ,ಪೊಜಾ ಟ್ರಾವೆಲ್ಸ್ ಮಾಲಿಕರಾದ ರಾಜಪ್ಪ ಪಾಟೀಲ್,ಸಂಗಮೇಶ ನಿರ್ಗುಣೆ ಹಾಗೂ ತಮಸಿಂಗೆ ಪರಿವಾರದ ಅಭಿಮಾನಿ ಬಳಗದವರು ಕುಟುಂಬಸ್ಥರು ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.