ಬಡ ವಿದ್ಯಾರ್ಥಿ ಶಿಕ್ಷಣಕ್ಕೆ KAS ಅಧಿಕಾರಿ ಖಾಜ ಖಲಿಲುಲ್ಲಾ ರವರಿಂದ ಆರ್ಥಿಕ ನೆರವು

ಔರಾದ್ ತಾಲೂಕಿನಲ್ಲಿ ನೀಟ್‌ನಲ್ಲಿ ರಾಜ್ಯಕ್ಕೆ 823ನೇ ರ್ಯಾಂಕ್ ಗಳಿಸಿ ವೈದ್ಯಕೀಯ ಶಿಕ್ಷಣದ ಶುಲ್ಕಕ್ಕಾಗಿ ಪರದಾಡುತ್ತಿದ್ದ ಮಾನೂರ(ಕೆ) ಗ್ರಾಮದ ಬಡ ಪ್ರತಿಭೆ ಚಂದ್ರಕಾಂತ ಸಾಯಿಲು ಕೋಳಿಗೆ ಆರ್ಥಿಕ ನೆರವು ಸಿಕ್ಕಿದೆ. ಮಾನವೀಯ ನೆಲೆಯಲ್ಲಿ ಹಲವರು ವಿದ್ಯಾರ್ಥಿ ನೆರವಿಗೆ ಧಾವಿಸಿದ್ದಾರೆ.

ಔರಾದ್ ತಾಲೂಕಿನ ಮಾನೂರ(ಕೆ) ಬಡ ವಿದ್ಯಾರ್ಥಿ ಚಂದ್ರಕಾಂತ ಸಾಯಿಲು ಕೋಳಿ ಮನೆಗೆ ಕೆಎಎಸ್ ಅಧಿಕಾರಿ ಖಾಜಾ ಖಲೀಲುಲ್ಲಾ ಭೇಟಿ ನೀಡಿ ನೆರವು ನೀಡಿದರು. ತಾಪಂ ಎಡಿ ರತಿಕಾಂತ ನೇಳಗೆ, ಪಿಡಿಒ ಚಂದ್ರಕಾಂತ ಪುಲೆ, ನಸೀಮಾ ಬೇಗಂ, ಡಾ.ಸಿದ್ದಾರೆಡ್ಡಿ, ಮಲ್ಲಿಕಾರ್ಜುನ ಟಂಕಸಾಲೆ, ಬಿ.ಎಂ. ಅಮರವಾಡಿ, ಗಜಾನನ ಮಳ್ಳಾ, ನವೀಲಕುಮಾರ ಉತ್ಕಾರ್, ಹಾವಪ್ಪ ನೇಳಗೆ, ಕೃಷ್ಣಕುಮಾರ ಪಾಟೀಲ್, ಅಶೋಕ, ಸಿದ್ದಪ್ಪ ಇದ್ದರು.

ಅನೇಕರು ಚಂದ್ರಕಾಂತಗೆ ಕರೆ ಮಾಡಿ ಆರ್ಥಿಕ ನೆರವಿನ ಭರವಸೆ ನೀಡಿ ಧೈರ್ಯ ತುಂಬಿದ್ದಾರೆ. ನಿನ್ನೊಂದಿಗೆ ನಾವಿದ್ದೇವೆ ಎಂದು ಅಭಯ ನೀಡಿದ್ದಾರೆ. ಇದು ವಿದ್ಯಾರ್ಥಿ ಜೀವನದಲ್ಲಿ ಹೊಸ ಆಶಾಕಿರಣ ಮೂಡುವಂತೆ ಮಾಡಿದೆ. ಬಡು ವಿದ್ಯಾರ್ಥಿಯ ನಾಲ್ಕು ವರ್ಷದ ಕೋರ್ಸ್‌ಗೆ ಬೇಕಾಗುವಷ್ಟು ಹಣ ನೀಡುವುದಾಗಿ ಕೆಎಎಸ್ ಅಧಿಕಾರಿ ಖಾಜಾ ಖಲೀಲುಲ್ಲಾ ಭರವಸೆ ನೀಡಿದ್ದಾರೆ. ಸದ್ಯ ಯಾದಗಿರಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿರುವ ತಾಲೂಕಿನ ವಡಗಾಂವ(ದೇ) ನಿವಾಸಿ

ಬಡತನದ ಕಷ್ಟ ಏನು ಎಂಬುದು

ನನಗೆ ಗೊತ್ತಿದೆ. ವೈದ್ಯ ಶಿಕ್ಷಣಕ್ಕೆ ಶುಲ್ಕ ಭರಿಸಲು ಆಗದ ಕುರಿತು ಪತ್ರಿಕೆ ವರದಿ ನೋಡಿ ಬಡ ವಿದ್ಯಾರ್ಥಿ ಚಂದ್ರಕಾಂತಗೆ ಎರಡು ಲಕ್ಷ ರೂ. ನೀಡುವೆ. ಸದ್ಯ 50 ಸಾವಿರ ರೂ. ಒದಗಿಸಿದ್ದು, ಇನ್ನುಳಿದ ಹಣ ಹಂತ-ಹಂತವಾಗಿ ನೀಡುವೆ ಎಂದು ಕೆಎಎಸ್ ಅಧಿಕಾರಿ ಹೇಳಿದರು,

ಖಲೀಲುಲ್ಲಾ ಈಚೆಗೆ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಎಂಬಿಬಿಎಸ್ ಗೆ ಅಂದಾಜು 2 ಲಕ್ಷ ರೂ. ಬೇಕು. ಸದ್ಯ 50 ಸಾವಿರ ರೂ. ನೀಡುವೆ. ಇನ್ನುಳಿದ ಹಣವನ್ನು ಹಂತ-ಹಂತವಾಗಿ ಕೊಡುವುದಾಗಿ ತಿಳಿಸಿದರು.

 

ವರದಿ : ರಾಚಯ್ಯ ಸ್ವಾಮಿ