ಬೀದರ್ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬ್ರಹತ್ ಪ್ರತಿಭಟನೆ ಆಗಸ್ಟ್ 1 ರಂದು ಸರ್ವೋಚ್ಛ ನ್ಯಾಯಾಲಯದ ಪೂರ್ಣ ಪೀಠವು ಎಸ್ ಸಿ ಮೀಸಲಾತಿಯಲ್ಲಿ ಉಪವರ್ಗಿಕರಿಸಲು ಆಯಾ ರಾಜ್ಯ ಸರಕಾರಕ್ಕೆ ಅಧಿಕಾರವಿದೆ. ಸಂವಿಧಾನ 341 ರ ಪರಿಚ್ಚೆದದ ತಿದ್ದುಪಡಿಯ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿದೆ ಒಳಮೀಸಲಾತಿ ಜಾರಿಗೊಳಿಸಲು 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 6 ನೇ ಗ್ಯಾರಂಟಿ ಘೋಷಿಸಿದಂತೆ ಒಳಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಆಗಸ್ಟ್ ಒಂದರಂದು ಘನವೆತ್ತ ಸರ್ವೋಚ್ಚ ನ್ಯಾಯಾಲಯದ ಏಳು ಸದಸ್ಯರ ಪೂರ್ಣ ಪೀಠವು ಎಸ್ ಸಿ ಮೀಸಲಾತಿಯಲ್ಲಿ ಒಳಮೀಸಲಾತಿ ಉಪ ವರ್ಗಿಕರಿಸಲು ಆಯಾ ರಾಜ್ಯ ಸರಕಾರಕ್ಕೆ ಸಂಪೂರ್ಣ ಹಕ್ಕಿದೆ ಎಂಬುದನ್ನು ತೀರ್ಪು ನೀಡಿದೆ, ಸುಪ್ರೀಂ ಕೋರ್ಟ್ ತೀರ್ಪುನ್ನು ಅವಕಾಶ ವಂಚಿತ ನಾಡಿನ ಶೋಷಿತ ಸಮುದಾಯವು ಸ್ವಾಗತಿಸುತ್ತದೆ.
ಕರ್ನಾಟಕ ಸರಕಾರದ ಪ್ರಸ್ತುತ ತನ್ನ 2023 ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 6 ನೇ ಗ್ಯಾರಂಟಿ ಘೋಷಿಸಿ ಕೊಂಡಂತೆ ಸುಪ್ರೀಂ ಕೋರ್ಟ್ ತೀರ್ಪು ಆದರಿಸಿ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕಿದೆ ಕರ್ನಾಟಕದಲ್ಲಿ ಎಸ್ ಸಿ ಮೀಸಲಾತಿಯಲ್ಲಿ ವರ್ಗಿಕರಿಸಿ ಒಳಮೀಸಲಾತಿ ಜಾರಿ ಮಾಡಬೇಕೆಂದು ಮೂರು ದಶಕಗಳಿಂದ ಹೋರಾಟಗಳು ನಡೆದಿದೆ ಹಿಂದಿನ ಬಿಜೆಪಿ ಸರಕಾರವು ಎಸ್ ಸಿ ಮೀಸಲಾತಿಯ ಎಲ್ಲ ಫಲಾನುಭವಿ, ವಿಶ್ವಾಸಕ್ಕೆ ತಗೆದುಕೊಂಡು ಹಲವು ಸುತ್ತಿನ ಮಾತುಕತೆ ನಡೆಸಿ ಜನಸಂಖ್ಯೆಗೆ ಅನುಗುಣವಾಗಿಯೇ ವೈಜ್ಞಾನಿಕವಾದ ಒಳಮೀಸಲಾತಿಯ ಸೂತ್ರವನ್ನು ರೂಪಿಸಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುತ್ತದೆ. ಇದನ್ನೇ ಮಾನದಂಡವನ್ನಾಗಿಟ್ಟುಕೊಂಡು ರಾಜ್ಯ ಸರಕಾರವು ಒಳಮೀಸಲಾತಿ ಜಾರಿಗೊಳಿಸಬೇಕಿದೆ,
ಕರ್ನಾಟಕದಲ್ಲಿ ಎಸ್ ಸಿ / ಎಸ್ ಟಿ ಮೀಸಲಾತಿಯನ್ನು ಏರಿಕೆ ಮಾಡಿದ್ದೂ ಜನಸಂಖ್ಯೆಗೆ ಅನುಗುಣವಾಗಿ. ಹಾಗೆಯೇ ಉಪವರ್ಗಿಕರಣವನ್ನು ಜನಸಂಖ್ಯೆ ಅನುಗುಣವಾಗಿಯೇ ಬೊಮ್ಮಾಯಿ ಸರಕಾರವು ಶಿಫಾರಸ್ಸು ಮಾಡಲಾಗಿದೆ ಇವೆಲ್ಲದರ ಮಾಹಿತಿಯು ಸರಕಾರದಲ್ಲಿದೆ.
ಎಸ್.ಸಿ ಎಡ ಮತ್ತು ಬಲ ಜನಸಂಖ್ಯೆಯು ಬಹುತೇಕ ಸಮಾನವಾಗಿದೆ. ಆದರೇ ನ್ಯಾಯಮೂರ್ತಿ ಸದಾಶಿವ ಆಯೋಗ ಉಲ್ಲೇಖಿಸುವಂತೆ ಮಾದಿಗ ಉಪಜಾತಿಗಳು ಹೆಚ್ಚು ಸಂತ್ರಸ್ತ ಸಮುದಾಯವೆನಿಸಿದೆ. ದೇವದಾಸಿಯರು, ಜೀತಕ್ಕೆ ಸಿಲುಕಿದವರು, ಅರ್ಧಕ್ಕೆ ಶಾಲೆಯನ್ನು ಬಿಟ್ಟವರು, ಬಾಲಪರಾದಿಗಳು ಇಂತಹ ಪಟ್ಟಿಯ ಅಂಕಿ ಅಂಶಗಳಲ್ಲಿ ಮಾದಿಗ ಉಪಜಾತಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಸಹಜವಾಗಿಯೇ ಈ ಗುಂಪಿಗೆ 0.5% ರಷ್ಟು ಹೆಚ್ಚು ಮೀಸಲಾತಿ ಕಲ್ಪಿಸಲಾಗಿದೆ ನ್ಯಾ, ಸದಾಶಿವ ಆಯೋಗದ ವರದಿ ಮತ್ತು 2011 ರ ಜನಗಣತಿಯ ಸಂಖ್ಯಾಧಾರಗಳೊಂದಿಗೆ ಪುನರ್ ಪರಿಶೀಲಿಸಿ ವರದಿ ಕೊಡಲು ರಚಿಸಿದ ಸಚಿವ ಸಂಪುಟ ಉಪಸಮಿತಿಯ ಅಧ್ಯಕ್ಷರಾದ ಜೆ ಸಿ ಮಾಧುಸ್ವಾಮಿ, ಗೋವಿಂದ ಕಾರಜೋಳ, ಪ್ರಭು ಚವ್ಹಾನ್, ಎಸ್ ಆಂಗಾರ, ಡಾ ಸುಧಾಕರ್ ಸಮಿತಿಯು ಅತ್ಯಂತ ವೈಜ್ಞಾನಿಕವಾಗಿ ನ್ಯಾಯಬದ್ದವಾಗಿ ಕಾನೂನು ರೀತಿಯಲ್ಲಿ ವರದಿ ಕೊಟ್ಟಿರುವದನ್ನು ಪ್ರಸ್ತುತ ಸರಕಾರವು ಮಾನ್ಯ ಮಾಡಿ ಒಳಮೀಸಲಾತಿ ಜಾರಿಗೊಳಿಸಬೇಕು .
ಪ್ರಮುಖ ಹಕ್ಕೋತ್ತಾಯ :
2023 ರ ತನ್ನ ಚುನಾವಣೆ ಪ್ರಣಾಳಿಕೆಯಲ್ಲಿ 6 ನೇ ಗ್ಯಾರಂಟಿ ಘೋಸಿಸಿದಂತೆ ಪ್ರಸ್ತುತ ಕಾಂಗ್ರೆಸ್ ‘ಸರಕಾರವು ಆಗಸ್ಟ್ ಒಂದರಂದು ಸುಪ್ರೀಂ ಕೋರ್ಟ್ ತಿರ್ಪಿನಂತೆ ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು .
ಒಳಮೀಸಲಾತಿ ಜಾರಿಯಾಗುವವರೆಗೆ ಬ್ಯಾಕಲಾಗ್ ಸೇರಿದಂತೆ ಯಾವುದೇ ಹುದ್ದೆ, ನೇಮಕಾತಿ ತುಂಬಬಾರದು.
ಜನಗಣತಿ ವರದಿ ವಿಚಾರವನ್ನು ಮುನ್ನೆಲೆಗೆ ತಂದು ಎಸ್ ಸಿ ಒಳಮೀಸಲಾತಿ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ಧೋರಣೆ ಸಲ್ಲದು ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘನೆಯ ಒಳ ಹುನ್ನಾರವನ್ನು ಮುಂದುವರಿಸಿದರೆ ಮುಂದೆ ಅತ್ಯಂತ ಗಂಭೀರ ಹೋರಾಟವನ್ನು ಸರಕಾರವು ಎದುರಿಸಬೇಕಾಗುತ್ತದೆ.
ಈಗಾಗಲೇ ಸಂವಿದಾನ ಪರಿಚ್ಚೆದ 15(4)ನೇಯ ಹಾಗೂ 16(4) ನೇ ವಿಧಿಗಳ ಅಡಿಯಲ್ಲಿ ಅಧಿಕಾರವನ್ನು ಬಳಸಿ ರಾಜ್ಯ ಸರಕಾರಗಳು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವಿಕೆಯನ್ನು ಗುರುತಿಸಿಕೊಂಡು ಮೀಸಲಾತಿಯಂತ ವಿಶೇಷ ಅವಕಾಶಗಳನ್ನು ಕಲ್ಪಿಸಲು ರಾಜ್ಯ ಸರಕಾರವು ಮುಕ್ತವಾಗಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ತಮ್ಮ ತೀರ್ಪುನಲ್ಲಿ ಹೇಳಿದ್ದಾರೆ.
ಎಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಫರ್ನಾಂಡಿಸ್ ಹಿಪ್ಪಳಗಾಂವ.
ರಾಜು ಕಡ್ಯಾಳ. ವಿಜಯಕುಮಾರ ಹಿಪ್ಪಳಗಾಂವ. ಸಿಮೊನ. ಅವಿನಾಶ. ಸೂರ್ಯಕಾಂತ ದಂಡೆ. ಪೀಟರ್ ಚಿಟ್ಟಗುಪ್ಪಾ. ಪರಮೇಶ್ವರ್ ಕಾಳಮಂದರಗಿ ಮುಂತಾದ ಸಮಾಜದ ಗಣ್ಯರು ಹೆಣ್ಣು ಮಕ್ಕಳು ಗಂಡು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.