ಮಂಗಳೂರು: ವೆಬ್‌ಸೈಟ್ ಮೂಲಕ ಹಣ ಹೂಡಿಕೆ ಮಾಡಿಸಿ 7.30 ಲ.ರೂ ವಂಚನೆ; ಪ್ರಕರಣ ದಾಖಲು

ಮಂಗಳೂರು : ವೆಬ್‌ಸೈಟ್ ಮೂಲಕ ಹಣವನ್ನು ಹೂಡಿಕೆ ಮಾಡಿಸಿ 7.30 ಲ.ರೂ ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇರಾ ಪಾಂಡೆ ಎಂಬಾಕೆ ಡೇಟಿಂಗ್ ಆ್ಯಪ್ ಮೂಲಕ ತನ್ನೊಂದಿಗೆ ಪರಿಚಯ ಮಾಡಿಕೊಂಡು ಸ್ಪ್ರೆಡೆಕ್ಸ್ ಎಂಬ ವೆಬ್‌ಸೈಟ್ ಮೂಲಕ ಹಣ ಹೂಡಿಕೆ ಮಾಡುವಂತೆ ತಿಳಿಸಿ ಅದೇ ವೆಬ್‌ಸೈಟ್‌ನ್ನು ಹೋಲುವಂತಹ ಬೇರೊಂದು ವೆಬ್‌ಸೈಟ್ ಲಿಂಕ್ ಕಳುಹಿಸಿದ್ದಳು. ಬಳಿಕ ತಾನು ಹಂತ ಹಂತವಾಗಿ 8.50 ಲ.ರೂ. ಹೂಡಿಕೆ ಮಾಡಿದೆ. ಈ ಪೈಕಿ 1.20 ಲ.ರೂ. ವಿತ್‌ಡ್ರಾ ಮಾಡಿದೆ. ಉಳಿದ 7.30 ಲ.ರೂ. ವಿತ್‌ಡ್ರಾ ಮಾಡಲು ಯತ್ನಿಸಿದಾಗ ಶೇ.30ರಷ್ಟು ತೆರಿಗೆ ಪಾವತಿಸಬೇಕು ಎಂದು ಇರಾ ಪಾಂಡೆ ತಿಳಿಸಿದ್ದಾಳೆ. ಈ ವೇಳೆ ತಾನು ಮೋಸ ಹೋಗಿರುವುದು ತಿಳಿಯಿತು ಎಂದು ವಂಚನೆಗೊಳಗಾದ ವ್ಯಕ್ತಿಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

error: Content is protected !!