ಇ-ಚಲನ್‌ನಲ್ಲಿ ಸರ್ಕಾರ ನೀಡಿರುವ 50%ರಿಯಾಯಿತಿ ಆಫರ್ ನಲ್ಲಿ 9ಲಕ್ಷಕ್ಕೂ ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥ 25ಕೋಟಿ ಗೂ ಅಧಿಕ ದಂಡ ಪಾವತಿ

ಬೆಂಗಳೂರು : ಸರ್ಕಾರದ ಆದೇಶ ಕರ್ನಾಟಕ ರಾಜ್ಯ ಸರ್ಕಾರವು, ಸಂಖ್ಯೆ:ಟಿಡಿ.27.ಟಿಡಿಒ.2023, ದಿನಾಂಕ:21.08.2025 ರಲ್ಲಿ ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾದ ಪ್ರಕರಣಗಳಿಗೆ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ದಂಡವನ್ನು ಪಾವತಿಸಲು ಶೇ.50% ರಷ್ಟು ರಿಯಾಯಿತಿಯನ್ನು ನೀಡಿ ಆದೇಶಿಸಿದ್ದು, ಈ ಆದೇಶವು ದಿನಾಂಕ.23.08.2025 ರಿಂದ ಜಾರಿಗೆ ಬಂದಿರುತ್ತದೆ.

ದಂಡವನ್ನು ಪಾವತಿಸಲು ನಿಗಧಿಪಡಿಸಲಾಗಿದ್ದ ರಿಯಾಯಿತಿ ಅವಧಿಯ ದಿನಾಂಕ: 23.08.2025 ರಿಂದ ದಿನಾಂಕ:31.08.2025 ರವರೆಗೆ ದಂಡವನ್ನು ಪಾವತಿಸಲು ನಿಗಧಿಗೊಳಿಸಲಾಗಿದ್ದ, ಎಲ್ಲಾ ವಿಧಾನಗಳ ಮೂಲಕ ಒಟ್ಟು 9,06,707 ಪ್ರಕರಣಗಳು ಇತ್ಯರ್ಥಗೊಂಡು ಒಟ್ಟು ರೂ. 25,52,60,250 ಪಾವತಿಯಾಗಿರುತ್ತದೆ.

ವರದಿ : ಮುಬಾರಕ್

error: Content is protected !!