ಸಮಾಜದ ಒಳಿತಿಗೆ ಒಗ್ಗಟ್ಟು ಅಗತ್ಯ ಕನಕಟ್ಟಾ ಗ್ರಾಮದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್ ಅಭಿಮತ

ಹುಮನಾನಾದ್ : ಇಂದಿನ ನಾಗರಿಕ ಜಗತ್ತಿನಲ್ಲಿ ಸಮಾಜದ ಒಳಿತಿಗಾಗಿ ಎಲ್ಲರಲ್ಲಿಯೂ ಒಗ್ಗಟ್ಟು ಇರಬೇಕು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.

ತಾಲೂಕಿನ ಕನಕಟ್ಟಾ ಗ್ರಾಮದ ಹೊರ ವಲಯದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಬೀರಲಿಂಗೇಶ್ವರ ಪಲ್ಲಕಿ ಉತ್ಸವ ಹಾಗೂ ಧಾರ್ಮಿಕ ಸಭೆ ಉದ್ದೇಶಿಸಿ ಮಾತನಾಡಿದರು.

ನಮ್ಮ ಹಲವಾರು ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಪರಿಹಾರ ಹುಡುಕುವ ಕೆಲಸ ನಾವೆಲ್ಲಾ ಮಾಡಬೇಕು. ನಮ್ಮ ಹಕ್ಕು ಹಾಗೂ ಸರಕಾರದಿಂದ ನಮಗೆ ದೊರೆಯುವ ಸವಲತ್ತುಗಳ ಕುರಿತು ಎಲ್ಲರೂ ಅರಿತಿರಬೇಕು. ಅವುಗಳ ಸದುಪಯೋಗ ಪಡಿಸಿಕೊಂಡು ಉತ್ತಮ ರೀತಿಯ ಜೀವನ ನಡೆಸಬೇಕು. ತಮ್ಮ ಮಕ್ಕಳಳಿಗೆ ಉತ್ತಮ ಶಿಕ್ಷಣ ನೀಡುವತ್ತ ಎಲ್ಲರೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಲ್ಲಪ್ಪ ಬಳತೆ, ವಿಠಲ ಬಳತೆ, ಪ್ರಕಾಶ ಕೋಟಗೇರಾ, ನೀಲಕಂಠ ಸಿಂಧಬಂದಗಿ, ಪ್ರಕಾಶ ಮೇತ್ರೆ, ನಿಜಪ್ಪ ಮೇತ್ರೆ, ವಿಠಲ ಬಳತೆ, ರಾಜಪ್ಪ ಮೇತ್ರೆ, ಸಚೀನ್ ಮೇತ್ರೆ, ವಿಲಾಸರೆಡ್ಡಿ ಅಲಗುಲೆ, ನಾಗರೆಡ್ಡಿ ಅಲಗುಲೆ, ವೀರೇಶ ಬಳತೆ ಸೇರಿ ಅನೇಕರಿದ್ದರು.

——————————

: ವೈಭವದ ಬೀರಲಿಂಗೇಶ್ವರ ಪಲ್ಲಕ್ಕಿ ಉತ್ಸವ

ಹುಮನಾಬಾದ್ : ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ತಾಲೂಕಿನ ಕನಕಟ್ಟಾ ಗ್ರಾಮದಲ್ಲಿ ಭಾನುವಾರ ಐತಿಹಾಸಿಕ ಬೀರಲಿಂಗೇಶ್ವರ ಪಲ್ಲಕ್ಕಿ ಉತ್ಸವ ವೈಭವದಿಂದ‌ ಜರುಗಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತಿ ದರ್ಶನ ಪಡೆದರು. ಡೊಳ್ಳು ಕುಣಿತ ಹಾಗೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

error: Content is protected !!