ಡಿಸೆಂಬರ್ 18 ರಂದು ಗಾಣಿಗ ಸಮಾಜದಿಂದ ಸುವರ್ಣಸೌಧ ಮುತ್ತಿಗೆ – ಕಲ್ಲಿನಾಥ ದೇವರು -ದಿಗಂಬರೇಶ್ವರ ಸಂಸ್ಥಾನ ಮಠದ ಪರಮಪೂಜ್ಯ

ಕೋಲ್ಹಾರ : ಗಾಣಿಗಾ ಅಭಿವೃದ್ಧಿ ನಿಗಮ ಮಂಡಳಿಯ ಅನುಷ್ಠಾನ ನೊಂದಣಿ ಅಧಿಕೃತ ಕಛೇರಿ ಹಾಗೂ ಹೆಚ್ಚಿನ ಅನುದಾನ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಸಲಾಗುವುದು ಎಂದು ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ರಾಜ್ಯಾಧ್ಯಕ್ಷ ಆನಂದ ಕೆ ಮಂಡ್ಯ ಹೇಳಿದ್ದಾರೆ

 

ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ಗುರುವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂಳಿದ ಗಾಣಿಗ ಸಮಾಜ ಅಬಿವೃದ್ಧಿ ನಿಗಮಕ್ಕೆ ಅನುದಾನ ನೀಡಿಲ್ಲ ನಾವು ಹಲವಾರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ನಮ್ಮ ಗಾಣಿಗ ಸಮಾಜವನ್ನು ಸುವರ್ಣ ಸೌಧದ ಕಡೆಗೆ ತಂದು ಇದೆ ಡಿಸೆಂಬರ್ 18 ರಂದು ದಿಗಂಬರೇಶ್ವರ ಸಂಸ್ಥಾನ ಮಠದ ಪರಮ ಪೂಜ್ಯ ಕಲ್ಲಿನಾಥ ದೇವರ ನೆತೃತ್ವದಲ್ಲಿ ಬೃಹತ್ ಪ್ರಮಾಣದಲ್ಲಿ ಹೋರಾಟ ಮಾಡುತ್ತೇವೆ

 

ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗಾಣಿಗ ಸಮಾಜ ಸುಮಾರು 50-60 ಲಕ್ಷ ಜನರಿದ್ದು, ಸಮುದಾಯವು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದ ಸಮಾಜವಾಗಿದ್ದು, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರದಿಂದ ಬರುವ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ನಮ್ಮ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡಿಸಿ ಅದರಿಂದ ಸಿಗುವ ಅನುದಾನದಿಂದ ಸಮುದಾಯದ ಕೆಳವರ್ಗದ ಜನರಿಗೆ ತಲುಪಿಸಲು ನಮ್ಮ ಸಂಘಟನೆಯಿಂದ ಹಲವುಬಾರಿ ಹೋರಾಟ ಮತ್ತು ನಮ್ಮ ಇತರೆ ಸಂಘ ಸಂಸ್ಥೆಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಹಿಗಿನ ಸರ್ಕಾರ ನಿಗಮ ಮಂಡಳಿಯ ವಿಷಯವಾಗಿ ಮತ್ತು ಸಮುದಾಯದ ಬೇಡಿಕೆಗಳಿಗೆ ಯಾವುದೇ ರೀತಿಯ ಗಮನ ಹರಿಸುತ್ತಿಲ್ಲ ಮತ್ತು ಮಲತಾಯಿ ದೋರಣೆ ಮಾಡುತ್ತಿದೆ.

 

ಗಾಣಿಗ ಅಭಿವೃದ್ಧಿ ನಿಗಮ ಮಂಡಳಿಯ ಬೇಡಿಕೆಗಾಗಿ ಸಮುದಾಯ ಎಲ್ಲಾ ಜಿಲ್ಲೆಗಳ ಸಂಘ ಸಂಸ್ಥೆಗಳ ಮುಖಂಡರುಗಳು ಸೇರಿ ಹೋರಾಟ ಮಾಡಿದ ಫಲವಾಗಿ ದಿನಾಂಕ 22-02-2023 ರಂದು ಅಂದಿನ ಬಿಜೆಪಿ ಸರ್ಕಾರ ಗಾಣಿಗ ನಿಗಮ ಮಂಡಳಿಯನ್ನು ಸ್ಥಾಪನೆ ಮಾಡಿ ಘೋಷಣೆ ಮಾಡಿತ್ತು

 

ಗಾಣಿಗ ಸಮುದಾಯದ ಮಠಾಧಿಪತಿಗಳು, ಗುರುಗಳು, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು, ಮಹಿಳಾ ಸಂಘಟನೆಗಳು ಹಾಗೂ ಸಮುದಾಯದ ಮುಖಂಡರುಗಳು ಹಾಗೂ ಸಮಸ್ತ ಗಾಣಿಗ ಬಂಧುಗಳು,ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದರು

 

ದಿಗಂಬರೇಶ್ವರ ಸಂಸ್ಥಾನ ಮಠದ ಪರಮಪೂಜ್ಯ ಕಲ್ಲಿನಾಥ ದೇವರು ಮಾತನಾಡಿ. ನಮ್ಮ ಗಾಣಿಗ ಸಮಾಜಕ್ಕೆ ಮೀಸಲಾತಿ ಕೊಡ್ರಿ ನಾವು ಹಿಂದುಳಿದವರು ಎಂದು ಯಾವತ್ತಿಗೂ ವಿಧಾನಸೌಧಕ್ಕೆ ಹೋಗಿ ಮುತ್ತಿಗೆ ಹಾಕಿ ದಾಂದಲೆಗಳನ್ನು ಮಾಡಿ ಸರ್ಕಾರದ ಮುಂದೆ ಕೈಚಾಚಿ ಕೇಳಿಲ್ಲ

 

ಗಾಣಿಗ ಸಮಾಜವನ್ನು ಮೇಲೆತ್ತಲಿಕ್ಕೆ ಸುಮಾರು 50- 60 ವರ್ಷಗಳ ಹಿಂದೇನೆ 2ಎ ಮೀಸಲಾತಿ ಕೊಟ್ಟು ಶೋಷಣೆಗೆ ಒಳಗಾದ ಗಾಣಿಗರನ್ನು ಮೇಲೆತ್ತಲು ಸರ್ಕಾರಗಳು ಪ್ರಯತ್ನಪಟ್ಟು ನಂತರ ಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲಿ ಗಾಣಿಗ ನಿಗಮದ ಅಭಿವೃದ್ಧಿಯನ್ನು ಮಾಡಿಟ್ಟು ಹೊದರು ಆದರೆ ತದನಂತರ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇವತ್ತಿಗೂ ಕೂಡ ಯಾವುದೇ ರೀತಿಯ ನೈಪೈಸಾ ಅನುದಾನವನ್ನು ಗಾಣಿಗ ಅಭಿವೃದ್ಧಿ ನಿಗಮಕ್ಕೆ ಇಟ್ಟಿಲ್ಲ ಇದರಿಂದ ರಾಜ್ಯದಲ್ಲಿರುವ 85 ಲಕ್ಷ ಗಾಣಿಗರ ನೋವು ಇದೆ

 

ಇದೆ ಡಿಸೆಂಬರ್ 18 ರಂದು ಒಂದು ಲಕ್ಷಕ್ಕಿಂತ ಹೆಚ್ಚು ಜನರು ಒಂದು ಗೂಡಿ ಸುವರ್ಣಸೌಧವನ್ನು ಮುತ್ತಿಗೆ ಹಾಕಿ ಸುವರ್ಣ ಸೌಧದೊಳಗೆ ಯಾವುದೇ ಕಾರ್ಯಕಲಾಪಗಳು ಆಗದಂತೆ ನಾವು ನೋಡಿಕೊಳ್ಳುತ್ತೇವೆ ಏನಾದರೂ ಮುಖ್ಯಮಂತ್ರಿಗಳು ಮುಂದೆ ಆಗುವಂತ ಗಂಡಾಂತರಗಳನ್ನು ತಪ್ಪಿಸಬೇಕೆಂದರೆ ನಮ್ಮ ಗಾಣಿಗ ಸಮಾಜದ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂಪಾಯಿಗಳನಿಟ್ಟು ಗಾಣಿಗರನ್ನು ಮೇಲೆತ್ತಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು

 

ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ರಾಜ್ಯಾಧ್ಯಕ್ಷ ಆನಂದ ಕೆ ಮಂಡ್ಯ ರಾಜ್ಯ ಯುವ ಘಟಕದ ಅಧ್ಯಕ್ಷ ನಂದು ಗಡಗಿ, ಸಚಿನ ಕೆಲುಡಿ, ಸಂಗಪ್ಪ ಅಥಣಿ, ಭೀಮಪ್ಪ ಏಳಗಂಟಿ ಇತರರು ಇದ್ದರು

 

 

‍13 KLR B

 

ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದ ಹೊರವಲಯದ ಜಮೀನಿನಲ್ಲಿ ಗಾಣಿಗ ಸಮಾಜದ ಪೂರ್ವ ಭಾವಿ ಸಭೆ ಜರುಗಿತ್ತು ಕಾರ್ಯಕ್ರಮದಲ್ಲಿ ದಿಗಂಬರೇಶ್ವರ ಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಕಲ್ಲಿನಾಥ ದೇವರು ಆನಂದ ಕೆ ಮಂಡ್ಯ,ನಂದು ಗಡಗಿ ಸಂಗಪ್ಪ ಅಥಣಿ ಇತರರು ಇದ್ದರು.

 

ವರದಿ : ಸದಾಶಿವ ಮೇಲಿನಮನಿ 

error: Content is protected !!