ಔರಾದ ತಾಲೂಕಿನ ರೈತರು ತಮ್ಮ ಹೊಲದಲ್ಲಿ ಭಾವಿಗೆ ಹಾಗೂ ಬೋರವೆಲ್ ಗೆ ನೀರಿಗಾಗಿ ಹಚ್ಚಿರುವ ಮೋಟರ್ ವೈಯಾರಗಳು ಕಳ್ಳರು ಕದ್ದಿರುವ ದೂರಿನ ಮೇರೆಗೆ, ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯ ಕೆಲಸಗಳ ಜೊತೆಗೆ ಕದ್ದಿರುವ ಮೋಟರ್ ಹಾಗೂ ಇನ್ನಿತರ ವಸ್ತುಗಳು ಪತೆ ಹಚ್ಚಿ ಕಳ್ಳರ ಹೆಡೆ ಮುರಿದು ಕಟ್ಟಿ ರೈತರಿಗೆ ಅವರು ಕಳೆದುಕೊಂಡ ವಸ್ತುಗಳು ಪೊಲೀಸ್ ಅಧಿಕಾರಿಗಳು ಅವರಿಗೆ ಹಸ್ತಾಂತರಿಸಿದರು ಇದೆ ವೇಳೆ ರೈತರು ನಮಗೆ ನಮ್ಮ ಸಾಮಾನಗಳು ಪರೆ ಹಚ್ಚಿ ಮತ್ತೆ ನಮಗೆ ನೀಡಿದ ಪೊಲೀಸ್ ಅಧಿಕಾರಿಗಳಿಗೆ ಔರಾದ ರವರಿಗೆ ಸನ್ಮಾನ ಮಾಡಿ ಧನ್ಯವಾದಗಳು ತಿಳಿಸಿದರು
ರೈತರ ಪಂಪ್ ಸೆಟ್ ಕಳ್ಳತನವಾಗಿದ್ದನ್ನು ಔರಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ ಇದೆ ವೇಳೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪತ್ತೆ ಹಚ್ಚಿದರಿಂದ ಇಂದು ಅವರ ಹೊಲದ ಪಂಪ್ ಸೆಟ್ ಬಂದವು ಎಂದು ರೈತ ಸಂಘಟನೆಯ ಹಿರಿಯರು ಮುಖಂಡರು ಹರ್ಷ ವ್ಯಕ್ತ ಪಡಿಸಿ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ ಮಾಡಿದರು.