ಮನೆಗಳಲ್ಲಿ ಬಳಸಿ ಬಿಸಾಡುವ ಪ್ಲಾಸ್ಟಿಕ್ ವಸ್ತುಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಸ ವಿಂಗಡನೆಯ ಸಮಸ್ಯೆ ಗ್ರಾಮ ಮಟ್ಟದಿಂದ ನಗರ ಮಟ್ಟದ ವರೆಗೂ ಎದ್ದು ಕಾಣುತ್ತಿದೆ. ಮನೆಯವರು ಮನೆಯ ಎಲ್ಲಾ ತ್ಯಾಜ್ಯವನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿ ಪ್ರತಿದಿನ ಬರುವ ಪಟ್ಟಣ ಹಾಗೂ ನಗರಸಭೆ ಗಾಡಿಗಳಿಗೆ ಎಸೆಯುವ ಜಾಯಮಾನ ನಮ್ಮದಾಗಿದೆ. ನಮ್ಮ ಮನೆಯ ತ್ಯಾಜ್ಯವನ್ನು ಪ್ರತಿದಿನ ಗಾಡಿಗೆ ಕೊಡುತ್ತಿದ್ದೇವೆ. ಆದ್ರೆ ಆ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಂಗಡಿಸಿ ನಗರಸಭೆ ಗಾಡಿಗಳಿಗೆ ಕೊಡುತ್ತಿದ್ದಿವಾ ಎಂಬ ಪ್ರಶ್ನೆ ನಮ್ಮದಾಗಿದೆ.?
ನಗರ, ಮಹಾನಗರ, ಪಟ್ಟಣಗಳಲ್ಲಿ, ಪ್ರತಿದಿನ ಸಾವಿರಾರು ಟನ್ ಗಟ್ಟಲೆ ಮಿಶ್ರಿತ ತ್ಯಾಜ್ಯ ಸಂಗ್ರಹಣೆಯಾಗುತ್ತಿದೆ. ಈ ತ್ಯಾಜ್ಯವನ್ನು ವಿಂಗಡನೆ ಮಾಡಲು ಪೌರಕಾರ್ಮಿಕರು ಹರಸಾಹಸ ಪಡುತ್ತಿದ್ದಾರೆ. ಒಂದೆಡೆ ವಿಂಗಡನೆ ಮಾಡಿದ ತ್ಯಾಜ್ಯವನ್ನು ಮರುಬಳಕೆ ಮಾಡಲು ಕಳಿಸುತ್ತಾರೆ. ಇನೊಂದೆಡೆ ಟನ್ ಗಟ್ಟಲೆ ಉಳಿದ ಮಿಶ್ರಿತ ತ್ಯಾಜ್ಯವನ್ನು ಡಂಪಿಂಗ್ ಜಾಗಗಳಲ್ಲಿಗೆ ಕಳಿಸುತ್ತಾರೆ.ಆದ್ದರಿಂದ ನಾವು ಬಳಸುವ ತ್ಯಾಜ್ಯವನ್ನು ಮೊದಲಿಗೆ ನಮ್ಮ ಮನೆಯ ಮೂಲದಿಂದಲೇ ಸರಿಯಾದ ರೀತಿಯಲ್ಲಿ ಕಸವನ್ನು ವಿಂಗಡಿಸಬೇಕು.
ಕಸದ ವಿಂಗಡಣೆಯನ್ನು ನಾವು ನಾಲ್ಕು ವಿಧಾನದಲ್ಲಿ ಕಾಣಬಹುದು.
1. ಹಸಿ ಕಸ -ಮಣ್ಣಿನಲ್ಲಿ ಕೊಳೆಯುವಂತ ವಸ್ತುಗಳು ಆಹಾರ ಪದಾರ್ಥಗಳು, ನೈರ್ಮಲ್ಯ ಉತ್ಪನ್ನಗಳು, ಮೈದಾನದ ಮರ ಗಿಡಗಿಡಗಳ ಎಲೆಯಗಳ ಕಸ, ಮೂಳೆಗಳು.
2. ಒಣಕಸ – ಒಣಕಸ ಅಂದರೆ ಮರುಬಳಕೆ ಮಾಡಲಾಗದ ಹಾಗೂ ಮಾಡಬಹುದಾದ ಕೆಲವು ವಸ್ತುಗಳನ್ನು ಒಳಗೊಂಡಿರುತ್ತದೆ. ಅಂದರೆ ಬಾಟಲಿಗಳು, ಡಬ್ಬಗಳು, ಪ್ಲಾಸ್ಟಿಕ್ ಕವರ್, ಬಟ್ಟೆ, ಗಾಜು ಇತ್ಯಾದಿ.
3. ಅಪಾಯಕಾರಿ ಕಸ – ಅಂದರೆ ವಿಷಕಾರಕ ಅಂಶಗಳನ್ನು ಒಳಗೊಂಡಿರುವ ವಸ್ತುಗಳು. ಡೈಪರ್, ಸಿರಂಜ್, ಪ್ಯಾಡ್, ಮೆಡಿಕಲ್ ಕಿಟ್ ಇತ್ಯಾದಿ.
4. ಇ-ತ್ಯಾಜ್ಯ – ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಸೂಚಿಸುತ್ತದೆ. ಲ್ಯಾಪ್ಟಾಪ್, ಕಂಪ್ಯೂಟರ್ ಹೀಗೆ ಹಲವಾರು.
ಈ ರೀತಿ ಹಂತ ಹಂತವಾಗಿ ನಮ್ಮ ಮನೆಯ ಮೂಲದಲ್ಲೇ ಕಸವನ್ನು ವಿಂಗಡಿಸಬೇಕು. ವಿಂಗಡಿಸದಿದ್ದರೆ ಬೇರೆ ಬೇರೆ ಕಸವನ್ನು ಒಟ್ಟಿಗೆ ಸಂಗ್ರಹಿಸುವುದರಿಂದ ಕಲುಷಿತವಾಗುತ್ತದೆ. ಅಲ್ಲದೇ ಇಂತಹ ಕಸವನ್ನು ಬೇರ್ಪಡಿಸಲಾಗದೆ ನೇರವಾಗಿ ಲ್ಯಾಂಡ್ ಪೀಲ್ ಗಳಿಗೆ ಕಳಿಸುವುದರಿಂದ ಬೇರೆ ಬೇರೆ ಖಾಯಿಲೆಗಳಿಗೆ ಮನುಷ್ಯ ತುತ್ತಾಗುತ್ತಾನೆ. ಪ್ರಾಣಿ-ಪಕ್ಷಿಗಳು ಕೂಡ ಸಾವನಪ್ಪುವ ಸಾಧ್ಯತೆ ಇದೆ. ಆದ್ದರಿಂದ ಕನಿಷ್ಟ ಎರಡು ಹಂತದಲ್ಲಾದರೂ ಕಸವನ್ನ ವಿಂಗಡಿಸಬೇಕು.
ಒಣಕಸ ಮತ್ತು ಹಸಿ ಕಸವನ್ನ ಮನೆಯ ಹಂತದಲ್ಲೇ ವಿಂಗಡಿಸುವುದರಿಂದ ಸಲ್ಪ ಮಟ್ಟಿಗೆ ಸಮಸ್ಯೆ ನಿವಾರಣೆ ಆದಂತೆ. ಇನ್ನು ಪ್ರತಿ ನಿತ್ಯ ಬರುವ ತಾಜ್ಯ ವಿಲೇವಾರಿ ಗಾಡಿಗಳು ಹಾಡಿನ ಮುಖಾಂತರ ಜನರ ಕಸದ ವಿಂಗಡಣೆ ಜವಾಬ್ದಾರಿಯನ್ನ ತಿಳಿಯ ಪಡಿಸುತ್ತಿದೆ. ಆದರೆ ಅದು ಅಷ್ಟರ ಮಟ್ಟಿಗೆ ಫಲಿತಾಂಶ ಕಾಣುತ್ತಿಲ್ಲ. ಹೀಗಾಗಿ ಸರ್ಕಾರ ಕಸದ ವಿಂಗಡನೆ ಜನರ ಜವಾಬ್ದಾರಿ ಎಂಬ ನಿಯಮವನ್ನ ಜಾರಿಗೆ ತರಬೇಕು. ಇಲ್ಲವೇ ಕಸದ ವಿಂಗಡಣೆ ಮಾಡದಿದ್ದಲ್ಲಿ ದಂಡ ವಿಧಿಸಬೇಕು. ನಮ್ಮ ಕಸ ನಮ್ಮ ಜವಾಬ್ದಾರಿ ಹಾಗಾಗಿ ಮನೆಯ ಮೂಲದಲ್ಲೇ ಕಸವನ್ನು ವಿಂಗಡಿಸಿ ಸಮಸ್ಯೆ ತಪ್ಪಿಸಿ.
ನಾಗರಾಜ್ (ಕೆ.ಕಲ್ಲಹಳ್ಳಿ) ತುಮಕೂರು.