ಔರಾದ-ಬಿ ಪೊಲೀಸ್ ಠಾಣೆ ರವರಿಂದ ದಂಡದ ಬದಲಾಗಿ ಹೆಲ್ಮೆಟ್ ವಿತರಣೆ

ಪ್ರದೀಪ್ ಗುಂಟಿ, ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ರವರ ನಿರ್ದೇಶನದಂತೆ, ಔರಾದ-ಬಿ ಪೊಲೀಸ್ ಠಾಣೆಯ ಪಿ.ಎಸ್.ಐ ವಸೀಮ್ ಪಟೇಲ್ ರವರು ತಮ್ಮ ಸಿಬ್ಬಂದಿ ರವರೊಂದಿಗೆ ಹೆಲ್ಮೆಟ್ ಧರಿಸದೇ ಸಂಚರಿಸುವ ವಾಹನ ಚಾಲಕರನ್ನು ದಂಡ ಕಟ್ಟುವ ಬದಲಾಗಿ ಹೆಲ್ಮೆಟ್ ವಿತರಿಸಿ (Pay fine or wear helmets) ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು,

ಜಿಲ್ಲೆಯಲ್ಲಿ ಅಪಘಾತದ ಪ್ರಮಾಣ ಇಳಿಸುವ ನಿಟ್ಟಿನಲ್ಲಿ ಔರಾದ್-ಬಿ ಪೊಲೀಸ್ ಠಾಣೆಯ ಪೊಲೀಸ ಅಧಿಕಾರಿ, ಸಿಬ್ಬಂದಿ ರವರು ಸದಾ ಪ್ರಯತ್ನಿಸುತ್ತಿದ್ದು, ಅವರ ಪ್ರಸಂಶನಿಯ ಕಾರ್ಯಕ್ಕೆ ಬೀದರ್ ಎಸ್ಪಿ ಪ್ರದೀಪ್ಘಿ ಗುಂಟಿ ಶ್ಲಾಘಿಸಿದ್ದಾರೆ.

 

ವರದಿ : ರಾಚಯ್ಯ ಸ್ವಾಮಿ 

error: Content is protected !!