ಜೇರಟಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ ಮಟ್ಟದ ಕಲಿಕಾ ಹಬ್ಬ

ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದಲ್ಲಿ ಜೇರಟಗಿ ಕ್ಲಸ್ಟರ ಮಟ್ಟದ ಕಲಿಕಾ ಹಬ್ಬವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜೇರಟಗಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆ  ದ್ರಾಕ್ಷಿಯಿಣಿ ಸಂಜೀವಕುಮಾರ ಮಳಗಿ ಅಧ್ಯಕ್ಷತೆ  ಸಂಜೀವಕುಮಾರ ಮಳಗಿ SDMC ಅಧ್ಯಕ್ಷರು ನೇತೃತ್ವ  ಅಶೋಕ ಬಿರಾದಾರ ಮುಖ್ಯ ಗುರುಗಳು ಸಂಪನ್ಮೂಲ ವ್ಯಕ್ತಿಗಳಾದ ಗುರುಪಾದ Crp ಅವರು ಅತಿಥಿಗಳಾಗಿ  ಚಂದ್ರಕಾಂತ ದೇವರಮನಿ ಕಾರ್ಯದರ್ಶಿ ಹಾಗೂ  ಲಾಲಸಾಬ ದೊಡಮನಿ ರಾಜ್ಯ ಉಪಾಧ್ಯಕ್ಷರು NPS ಮತ್ತು ಕ್ಲಸ್ಟರಿನ ಮುಖ್ಯಗುರುಗಳು, ಶಾಲಾ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ವರ್ಗದವರು ಹಾಗೂ ಶಿಕ್ಷಣ ಪ್ರೇಮಿ  ಮಡಿವಾಳಯ್ಯ ಕುಕ್ಕನೂರ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಶ್ರೀ ಮಹಾಂತೇಶ ಪಾಟೀಲ ಭಾಗವಹಿಸಿದ ಮಕ್ಕಳಿಗೆ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿದರು. ಕಾರ್ಯಕ್ರಮವನ್ನು ರುದ್ರಯ್ಯ ಗಂಗನಹಳ್ಳಿ, ಅವರು ನಿರೂಪಿಸಿದರು, ಗುರುಪಾದ CRP ಪ್ರಾಸ್ತವಿಕವಾಗಿ ಮಾತನಾಡಿದರು. ವಂದನಾರ್ಪಣೆ ಗೀತಾ ನಡೆಸಿಕೊಟ್ಟರು.

ವರದಿ : ವಿರೇಶ್ ಮಠ್ 

error: Content is protected !!