ಹನುಮಾನ್ ಜಯಂತಿ ಉತ್ಸವ ಶೋಭಾ ಯಾತ್ರೆಗೆ ಶಾಸಕ ಯತ್ನಾಳ್ ಚಾಲನೆ

ಮಾಜಿ ಕೇಂದ್ರ ಸಚಿವರು, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು, ವಿಜಯಪುರ ನಗರದಲ್ಲಿ ಇಂದು ವಡ್ಡರ ಸಮಾಜದ ವತಿಯಿಂದ ಹನುಮ ಜಯಂತಿ ಉತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 15 ಅಡಿ ಎತ್ತರದ ಶ್ರೀ ಆಂಜನೇಯನ ಮೂರ್ತಿಯ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿ, ಮಾತನಾಡಿದರು. ಇದಕ್ಕೂ ಮೊದಲು ದೇಶದ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರು, ಗಣ್ಯರು, ಹಿಂದೂ ಕಾರ್ಯಕರ್ತರು, ದೇಶಾಭಿಮಾನಿಗಳು, ಹನುಮಾನ್ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದರು.

ವರದಿ : ಅಜೀಜ ಪಠಾಣ.

error: Content is protected !!